ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿ ಕಚೇರಿಗೆ ಮುತ್ತಿಗೆ ನಾಳೆ

Last Updated 16 ಏಪ್ರಿಲ್ 2017, 11:04 IST
ಅಕ್ಷರ ಗಾತ್ರ

ಮಹಾಲಿಂಗಪುರ: ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ಆಗ್ರಹಿಸಿ ಚನ್ನಮ್ಮ ವೃತ್ತದಲ್ಲಿ ನಡೆಸಿದ್ದ ಹೋರಾಟ ವೇದಿಕೆಗೆ ಭೇಟಿ ನೀಡಿದ್ದ ಜಲಸಂಪ ನ್ಮೂಲ ಸಚಿವ ಎಂ.ಬಿ. ಪಾಟೀಲ ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ನೀಡುವು ದಾಗಿ ಭರವಸೆ ನೀಡಿದ್ದರು, ಅವಧಿ ಮುಗಿದು ಹಲವು ದಿನಗಳಾದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವ ಹಿನ್ನೆಲೆಯಲ್ಲಿ ಇದೇ ಎ.17ರಂದು ಉಪ ವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾ ಗುವುದು ಎಂದು ರೈತ ಸಂಘದ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಹೇಳಿದರು.

ಸ್ಥಳೀಯ ಜಿಎಲ್‌ಬಿಸಿ ಆವರಣದಲ್ಲಿ ರುವ ಗಣಪತಿ ದೇವಾಲಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿ ದರು ಆಲಮಟ್ಟಿಯಲ್ಲಿ ಸಸಾಲಟ್ಟಿ ಹೋರಾಟಗಾರರು, ಜನಪ್ರತಿನಿಧಿಗಳು, ರೈತ ಮುಖಂಡರು, ಮಠಾಧೀಶರರು ಹಾಗೂ ನೀರಾವರಿ ಇಲಾಖೆಯ ಅಧಿಕಾ ರಿಗಳನ್ನು ಸೇರಿಸಿ ಸಭೆ ಕರೆದು ಚರ್ಚಿಸು ವುದಾಗಿ ಭರವಸೆ ನೀಡಿದ್ದ ಸಚಿವ ಪಾಟೀಲ ತಿಂಗಳು ಕಳೆದರೂ ಈ ಕುರಿತು ಯಾವುದೇ ಪ್ರಯತ್ನವನ್ನೂ ಮಾಡಿಲ್ಲ ಎಂದರು.  ರಾಜ್ಯದಲ್ಲಿ 1700ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಬಲಿಯಾಗಿ ದ್ದಾರೆ, ಅವರಿಗೆ ಸೂಕ್ತ ಪರಿಹಾರ ಕೂಡ ದೊರೆತಿಲ್ಲ ಎಂದು ಆರೋಪಿಸಿದರು.

ವಾಗ್ವಾದ: ಗಣಪತಿ ದೇವಾಲಯದಲ್ಲಿ ಸಭೆ ಮುಗಿಸಿ ಚೆನ್ನಮ್ಮ ವೃತ್ತಕ್ಕೆ ಬಂದ ರೈತರು ಹಾಗೂ ಎಸ್ಐ ಅನಿಲ ರಾಠೋಡ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹೆಲ್ಮೆಟ್ ಕಡ್ಡಾಯದಿಂದ ವಿನಾಯತಿ ನೀಡಬೇಕು. ಹೆಲ್ಮೆಟ್ ಧರಿ ಸದೇ ಸಂಚರಿಸುವ ವಾಹನ ಸವಾರರಿಗೆ ಪೊಲೀಸರು ಅವಾಚ್ಯ ಪದ ಬಳಸುತ್ತಿರು ವುದನ್ನು ನಿಲ್ಲಿಸಬೇಕು ಎಂದು  ರೈತರು ಒತ್ತಾಯಿಸಿದಾಗ, ಎಸ್ಐ ಮಾತನಾಡಿ ಹೆಲ್ಮೆಟ್ ಕಡ್ಡಾಯ ಮಾಡುವ ಮುನ್ನ 15 ದಿನದಿಂದ ಮನವರಿಕೆ ಮಾಡಿಕೊಡಲಾ ಗಿದೆ, ಪ್ರಾಣಹಾನಿ ತಡೆಗಟ್ಟಲು ಹೆಲ್ಮೆಟ್ ಕಡ್ಡಾಯ ಎಂದರು.  

ಶಿವಲಿಂಗ ಟಿರಕಿ,  ಅರ್ಜುನ ಬಂಡಿ ವಡ್ಡರ, ಬಂದೇನವಾಜ್‌ ಪಕಾಲಿ, ಕೆಂಪಣ್ಣ ಅಂಗಡಿ, ರಮೇಶ ಬಾವಿಕಟ್ಟಿ, ಲಕ್ಷ್ಮಣ ಬ್ಯಾಳಿ, ಸುರೇಶ ಮಡಿವಾಳರ, ಶ್ರೀಶೈಲ ಅಂಗಡಿ, ಸತ್ಯಪ್ಪ ಮಲ್ಲಾಪುರಿ, ರವಿ ಮುಚ್ಚಂಡಿ, ಈರಣ್ಣ ಸಸಾಲಟ್ಟಿ, ಪ್ರಕಾಶ ತೇರದಾಳ, ಸಂಗಮೇಶ ಮರೇಗುದ್ದಿ, ಎಂ.ಕೆ. ದಳವಾಯಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT