ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪ: ಕುಡಿಯುವ ನೀರಿಗೆ ತತ್ವಾರ

Last Updated 16 ಏಪ್ರಿಲ್ 2017, 11:07 IST
ಅಕ್ಷರ ಗಾತ್ರ

ಸಿರುಗುಪ್ಪ: ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಪರಿಣಾಮ ನಗರಸಭೆಯವರು ಒಂದು ತಿಂಗಳಿಂದ ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಕಾರ್ಯ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ನಾಗರಿ ಕರು ನಿತ್ಯ ಹಗಲು–ರಾತ್ರಿ ನೀರಿಗಾಗಿ ಪರದಾಡುವ ಬವಣೆ ಎದುರಾಗಿದೆ.ಬೇಸಿಗೆಯ ಮುನ್ನ ಕಳೆದ ಡಿಸೆಂಬರ್‌ ನಲ್ಲಿಯೇ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಬತ್ತಿದ್ದರಿಂದ ಜನವರಿ, ಫೆಬ್ರುವರಿ ತಿಂಗಳಲ್ಲಿ ನದಿಯ ಹರ ಗೋಲ್‌ಘಾಟ್‌ನ ಸಂಗ್ರಹ ನೀರನ್ನು ಮೂರು ದಿನಕ್ಕೊಮ್ಮೆ ಜನತೆಗೆ ಸರಬ ರಾಜು ಮಾಡಲಾಗುತ್ತಿತ್ತು.

ಹರಗೋಲ್‌ಘಾಟ್‌ ನೀರಿನ ಸಂಗ್ರಹ ಬರಿದಾದ ನಂತರ ನಗರಸಭೆಯವರು ಪೂರೈಕೆ ಸ್ಥಗಿತಗೊಳಿಸಿ ಕೊಳವೆ ಬಾವಿ ಗಳ ನೀರನ್ನು ಟ್ಯಾಂಕರ್‌ಗಳ ಮೂಲಕ ಬಡಾವಣೆಗಳಿಗೆ ಸರಬರಾಜು ವ್ಯವಸ್ಥೆ ಕೈಗೊಂಡರು. ಆದರೆ ನಗರದಲ್ಲಿರುವ ಸುಮಾರು 150 ಅಧಿಕ ಕೊಳವೆಬಾವಿ ಗಳ ಅಂತರ್ಜಲ ಮಟ್ಟ ತಳಮುಟ್ಟಿದೆ.ಕೊಳವೆಬಾವಿ ನೆಚ್ಚಿಕೊಂಡಿದ್ದ ನಗರಸಭೆಗೆ ಈಗ ದಿಕ್ಕು ತೋಚದಂತಾಗಿ ಜನರ ನೀರಿನ ಬವಣೆ ನೀಗಿಸಲು ಚಿಂತೆ ಮಾಡುವ ಪರಿಸ್ಥಿತಿ ಒದಗಿಬಂದಿದೆ.

ಹೊಸ ಕೊಳವೆಬಾವಿಗಳನ್ನು 400 ರಿಂದ 500 ಅಡಿ ಕೊರೆಸಿದರೂ ಜಲ ಲಭ್ಯವಾಗುತ್ತಿಲ್ಲ,ನೀರಿನ ಮಾರಾಟ: ಕೊಳವೆಬಾವಿ ಹೊಂದಿ ರುವ ಮನೆಗಳ ಪಕ್ಕದಲ್ಲಿ ನೀರಿನ ಘಟಕ ಗಳನ್ನು ಸ್ಥಾಪಿಸಿ ನೀರು ಮಾರಾಟ ಮಾಡು ವವರಿಗೆ ಈಗ ಸುಗ್ಗಿಯ ಕಾಲವಾಗಿದೆ.ಆದರೆ ನಗರಸಭೆಯವರು ಇಲ್ಲಿಯ ವರೆಗೆ ಶುದ್ಧ ನೀರಿನ ಘಟಕಗಳನ್ನು ಸ್ಥಾಪನೆ ಮಾಡದೇ ಇರುವುದು ಜನತೆಗೆ ಬೇಸರ ತಂದಿದೆ.ಇದನ್ನೇ ಖಾಸಗಿಯವರು ಬಂಡ ವಾಳ ಮಾಡಿಕೊಂಡು ನೀರಿನ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಹಗಲು–ರಾತ್ರಿ ಜನತೆ: ಇಲ್ಲಿಯ ಜಲ ಶುದ್ಧೀಕರಣ ಘಟಕದಲ್ಲಿರುವ ಎರಡು ಕೊಳವೆ ಬಾವಿಗಳ ನೀರಿಗಾಗಿ ಜನತೆ ಹಗಲು–ರಾತ್ರಿಯೆನ್ನದೇ ಕೊಡಗಳನ್ನು ಹಿಡಿದುಕೊಂಡು ಸರತಿ ಸಾಲಿನಲ್ಲಿ ನಿಂತು ನೀರನ್ನು ತುಂಬಿಕೊಂಡು ಹೋಗು ವುದು ಸಾಮಾನ್ಯವಾಗಿದೆ.ಸಾವಿರ ರೂಪಾಯಿಗೆ ಒಂದು ಟ್ಯಾಂಕ್‌: ಈ ನೀರಿನ ಬವಣೆಯನ್ನು ಲಾಭ ಮಾಡಿ ಕೊಂಡಿರುವ ಕೆಲವು ನೀರಿನ ಟ್ಯಾಂಕರ್‌ ಗಳ ಮಾಲೀಕರು ಒಂದು ಟ್ಯಾಂಕ್‌ಗೆ ಒಂದು ಸಾವಿರದಂತೆ ಮನೆಗೆ ಬಂದು ನೀರು ಪೂರೈಸುತ್ತಿದ್ದಾರೆ.

ಎಲ್ಲಿ ನೀರು ಸಿಗ್ತಾವ ಅಂದ್ರೆ ಸಾಕು ಅಲ್ಲಿಗೆ ಜನ ಮುತ್ತಿಗೆ ಹಾಕಿ ನೀರು ಪಡೆಯುವ ಸಾಹಸಕ್ಕೆ ಮುಂದಾಗುತ್ತಾರೆ.ನೀರು ಎಂದು  ಜನ ತತ್ತರಿಸು ತ್ತಿದ್ದರೆ, ಜನಪ್ರತಿನಿಧಿಗಳು ನದಿಗೆ ನೀರು ಹರಿಸಲು ಮುಂದಾಗದೇ ಇರುವುದು ನಾಗರೀಕರಿಗೆ ಬೇಸರ ತಂದಿದೆ.

ತುಂಗಭದ್ರಾ ಜಲಾಶಯದ ಎಡ ಮತ್ತು ಬಲದಂಡೆಯ ಕಾಲುವೆಗಳಿಗೆ ಕುಡಿಯುವ ನೀರು ಉದ್ದೇಶಕ್ಕಾಗಿ ಈಗ ನೀರು ಹರಿಸಲಾಗುತ್ತಿದೆ, ಆ ನೀರನ್ನು ತುಂಗಭದ್ರಾ ನದಿಯ ಹರಗೋಲ್‌ ಘಾಟ್‌ಗೆ ಹರಿಸಿ ಸಂಗ್ರಹಿಸಿದರೆ ನಗರದ ಜನತೆಯ ಮುಂದಿನ ಎರಡು ತಿಂಗಳ ವರೆಗೆ ನೀರಿನ ಬವಣೆ ನೀಗುತ್ತದೆ ಎನ್ನುತ್ತಾರೆ ಜನತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT