ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಬಲಕ್ಕೆ ಜೈ

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ರಾಮಾಯಣ’ವನ್ನು ಬರೆದ ವಾಲ್ಮೀಕಿ ಜಯಂತಿಗೆ ನಮ್ಮ ರಾಜ್ಯದಲ್ಲಿ ರಜೆ. ಆದರೆ ರಾಮಾಯಣದ ನಾಯಕನಾದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜಯಂತಿಗೆ ರಜೆಯಿಲ್ಲ. ಶ್ರೀಕೃಷ್ಣನ ಪರಮಭಕ್ತನಾದ ಕನಕದಾಸ ಜಯಂತಿಗೆ ರಜೆ. ಆದರೆ ಶ್ರೀಕೃಷ್ಣ ಜನ್ಮಾಷ್ಟಮಿಗೆ ರಜೆಯಿಲ್ಲ. ಅಂತೆಯೇ  ಕರ್ನಾಟಕದಲ್ಲೇ ಜನಿಸಿ ಇಡೀ ಭಾರತ ದೇಶದ ತುಂಬೆಲ್ಲ ಪೂಜಿತರಾಗುತ್ತಿರುವ ಹನುಮ ಜಯಂತಿಗೂ ರಜೆಯಿಲ್ಲ.

ಇದಕ್ಕೆ ಕಾರಣ, ತಮ್ಮನ್ನು ವಾಲ್ಮೀಕಿ ಹಾಗೂ ಕನಕದಾಸರೊಂದಿಗೆ ಗುರುತಿಸಿಕೊಂಡಿರುವ ಜಾತಿಗಳ ಜನಬಲ ಮತ್ತು ಅವರಿಂದ ದೊರೆಯಬಹುದಾದ ವೋಟಿನ ಆಮಿಷ. ಜನಬಲದ ಮುಂದೆ ತಲೆಬಾಗಬೇಕಾದ ಆಳುವವರ ಅಸಹಾಯಕತೆ. ಜನಬಲಕ್ಕೆ ಮತಬಲಕ್ಕೆ ಜೈ.
-ಮುರಲೀಧರ ಕುಲಕರ್ಣಿ, ಬೀದರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT