ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಪತಿ ಅಲ್ಲ, ಅವಳಿ ಮಕ್ಕಳು!

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ :  ಆಸ್ಪತ್ರೆಯೊಂದರಲ್ಲಿ ಐವಿಎಫ್‌ ಪ್ರಕ್ರಿಯೆಗೆ ಒಳಪಡಿಸಲು  ದಂಪತಿಯ ವಂಶವಾಹಿ (ಡಿಎನ್‌ಎ) ಪರೀಕ್ಷೆ ನಡೆಸಿದ ಸಂದರ್ಭ ಅವರು ಅವಳಿ ಮಕ್ಕಳು ಎನ್ನುವ ಅಚ್ಚರಿಯ ಅಂಶ ಬಹಿರಂಗಗೊಂಡಿದೆ.

‘ಐವಿಎಫ್‌ ಚಿಕಿತ್ಸೆಗೆ ಬಂದ ದಂಪತಿಯ ಡಿಎನ್‌ಎ ಮಾದರಿಯಲ್ಲಿ ಏನಾದರೂ ಹೋಲಿಕೆ ಇದೆಯೇ ಎಂದು ಸಾಮಾನ್ಯವಾಗಿ ಪರೀಕ್ಷಿಸುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಇಬ್ಬರ ಡಿಎನ್‌ಎ ಮಾದರಿಗಳಲ್ಲಿ ಸಾಕಷ್ಟು ಹೋಲಿಕೆ ಇರುವುದು ಪ್ರಯೋಗಾಲಯದ ಸಿಬ್ಬಂದಿ ಗಮನಕ್ಕೆ ಬಂದಿದೆ’ ಎಂದು ಅಮೆರಿಕದ ಮಿಸಿಸಿಪ್ಪಿಯ ಜಾಕ್ಸನ್‌ ಎಂಬಲ್ಲಿನ ಐವಿಎಫ್‌ ಕ್ಲಿನಿಕ್‌ನ ವೈದ್ಯರು ತಿಳಿಸಿದ್ದಾರೆ.

ಆ ಬಳಿಕ ಇಬ್ಬರ ಹಿನ್ನೆಲೆಯನ್ನು ಪರಿಶೀಲಿಸಿದಾಗ ಅವರು ಅವಳಿ ಮಕ್ಕಳು ಎಂಬುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಬಾಲ್ಯದಲ್ಲಿ ಪೋಷಕರು ಮೃತಪಟ್ಟಿದ್ದರಿಂದ ಇವರಿಬ್ಬರನ್ನೂ ಎರಡು ಪ್ರತ್ಯೇಕ ಕುಟುಂಬಗಳು ದತ್ತು ಪಡೆದುಕೊಂಡಿದ್ದವು. ಆದರೆ ಎರಡೂ ಕುಟುಂಬಗಳಿಗೆ ತಾವು ದತ್ತು ಪಡೆದ ಮಗು ಅವಳಿ  ಮಕ್ಕಳಲ್ಲಿ ಒಂದು ಎನ್ನುವ ಅಂಶ ತಿಳಿದಿರಲಿಲ್ಲ.

ಕಾಲೇಜಿನಲ್ಲಿ ಕಲಿಯುತ್ತಿದ್ದ ಅವಧಿಯಲ್ಲಿ ಪರಿಚಿತರಾಗಿದ್ದ ಈ ಇಬ್ಬರು ಬಳಿಕ ವಿವಾಹವಾಗಿದ್ದರು.

‘1984ರಲ್ಲಿ ಜನಿಸಿರುವ ಈ ಇಬ್ಬರ ಜನ್ಮ ದಿನಾಂಕವೂ ಒಂದೇ ಆಗಿತ್ತು. ಇದೂ ಸೇರಿದಂತೆ ಕೆಲವು ಅಂಶಗಳನ್ನು ಗಮನಿಸಿದಾಗ ಅವರಿಬ್ಬರೂ ಅವಳಿ ಮಕ್ಕಳು  ಇರಬಹುದು ಎಂದು ಅನಿಸಿತು. ಇಬ್ಬರ ಬಾಲ್ಯದ ವಿವರಗಳನ್ನು ತಿಳಿದ ಬಳಿಕ ಇದು ಖಾತ್ರಿಯಾಯಿತು’ ಎಂದು ವೈದ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT