ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಪರಂಪರೆ ಜಾಗೃತಿ ಮೂಡಿಸಿ: ಡಾ. ಮಸೂತಿ

Last Updated 17 ಏಪ್ರಿಲ್ 2017, 5:00 IST
ಅಕ್ಷರ ಗಾತ್ರ
ಕಲಬುರ್ಗಿ:  ‘ವೀರಶೈವ ಧರ್ಮದ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ ಮತ್ತು ಇತಿಹಾಸದ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿ ಹೇಳುವುದು ಅಗತ್ಯ’ ಎಂದು ಸಾಹಿತಿ ಡಾ.ನಾಗೇಂದ್ರ ಮಸೂತಿ ಅಭಿಪ್ರಾಯಪಟ್ಟರು.
 
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಈಚೆಗೆ ನಡೆದ ರೇಣುಕಾಚಾರ್ಯರ ಜಯಂತಿ ಉತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು ‘ಪ್ರಾಚೀನ ಪರಂಪರೆ, ಸಮಾನತೆ, ಸಹೋದರತ್ವ, ಸರ್ವರ ಏಳ್ಗೆ ಮತ್ತು ಹಿತವನ್ನು ವೀರಶೈವ ಧರ್ಮ ಬಯಸುತ್ತದೆ’ ಎಂದರು

‘ಅಧ್ಯಯನ ಕೊರತೆ, ಆಚರಣೆ ಹಿನ್ನಡೆಯಿಂದ ವೀರಶೈವ ಧರ್ಮದ ಅತ್ಯಮೂಲ್ಯ ವಿಚಾರಧಾರೆಗಳು ಜನ ಮಾನಸಕ್ಕೆ ತಲುಪುತ್ತಿಲ್ಲ. ವೀರಶೈವ ಧರ್ಮದ ಪರಂಪರೆ ಕುರಿತು ಪ್ರಚಾರ ಮಾಡಲು ಮಠಾಧೀಶರು ಕಾರ್ಯಯೋಜನೆ ರೂಪಿಸಬೇಕು. ಜನರು ಶಾಂತಿ ಮತ್ತು ನೆಮ್ಮದಿಯಿಂದ ಬಾಳಲು ಧರ್ಮದ ಆಚರಣೆ ಅವಶ್ಯ’ ಎಂದರು.  
 
ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ ‘ಜಗದ್ಗುರು ರೇಣುಕಾಚಾರ್ಯರು ವಿಶ್ವಗುರು. ಭಕ್ತಿ ಭಂಡಾರಿ ಬಸವಣ್ಣನವರು ವೀರಶೈವ ಸಮಾಜದ ಎರಡು ಕಣ್ಣುಗಳು.
 
ಪಂಚಾಚಾರ್ಯರು ಬೋಧಿಸಿದ ಸಿದ್ಧಾಂತವನ್ನು ಬಸವಾದಿ ಶರಣರು ಹೇಳಿದ ವಚನ ಸಾಹಿತ್ಯವನ್ನು ನಾವೆಂದಿಗೂ ಮರೆಯುವಂತಿಲ್ಲ’ ಎಂದರು. ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ ‘ರೇಣುಕಾಚಾರ್ಯ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದರು. 
 
ಪಾಳಾದ ಗುರುಮೂರ್ತಿ ಶಿವಾಚಾರ್ಯರು, ವೆಂಕಟಬೇನೂರಿನ ಸಿದ್ದರೇಣುಕ ಶಿವಾಚಾರ್ಯರು, ಸ್ಟೇಷನ್ ಬಬಲಾದನ ರೇವಣಸಿದ್ದ ಶಿವಾಚಾರ್ಯರು, ತೊನಸಳ್ಳಿಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಮಹಾಸಭಾದ ಪದಾಧಿಕಾರಿಗಳಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಎಸ್.ವಿ.ಮಠಪತಿ, ಆಶಾದೇವಿ ಖೂಬಾ, ಯುವ ಘಟಕದ ಅಧ್ಯಕ್ಷ ಸುರೇಶ ಪಾಟೀಲ ಜೋಗೂರು, ನಗರ ಘಟಕದ ಅಧ್ಯಕ್ಷ ವೀರಣ್ಣ ಗೊಳೆದ, ರೇಣುಕಾಚಾರ್ಯ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಹಾಗರಗಿ ಹಾಗೂ ನಾಗಲಿಂಗಯ್ಯ ಮಠಪತಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT