ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ಕೇಜಿ ವ್ಯಾಪಾರದ ‘ದೊಡ್ಡಪೇಟೆ’

Last Updated 17 ಏಪ್ರಿಲ್ 2017, 5:25 IST
ಅಕ್ಷರ ಗಾತ್ರ

ರಾಣೆಬೆನ್ನೂರು: ದಶಕಗಳ ಇತಿಹಾಸ ಹೊಂದಿರುವ  ಇಲ್ಲಿನ ದೊಡ್ಡಪೇಟೆ ಮಾರುಕಟ್ಟೆ ತರಕಾರಿಗೆ ಜನಪ್ರಿಯ. ನಿತ್ಯ ತಾಜಾ ತರಕಾರಿ ಸಿಗುವುದು ಇಲ್ಲಿನ ವಿಶೇಷ. ಬೆಳಿಗ್ಗೆ 7ರಿಂದ ಗರಿಗೆದರುವ ವ್ಯಾಪಾರ 10 ಗಂಟೆಗೆ ಮುಕ್ತಾಯ ವಾಗುತ್ತದೆ.ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ರೈತರೇ ಇಲ್ಲಿನ ಮಾರಾಟಗಾರರು.

ಕಾಲ್ಕೇಜಿ ವ್ಯಾಪಾರ: ದೊಡ್ಡಪೇಟೆ ಸುತ್ತಲಿನ ಪ್ರದೇಶದಲ್ಲಿ ವ್ಯಾಪಾರಸ್ಥರು ಹಾಗೂ ನೌಕರವರ್ಗದವರು ಹೆಚ್ಚಾಗಿದ್ದಾರೆ. ನಿತ್ಯ ತಾಜಾ ತರಕಾರಿ ಸಿಗುವುದ ರಿಂದ ಇಲ್ಲಿ ಕೆ.ಜಿ. ಲೆಕ್ಕದಲ್ಲಿ ಕೊಳ್ಳು ವವರು ವಿರಳ. ‘ನಾನು ಹರಾಜಿನಲ್ಲಿ ತರಕಾರಿ ತಂದು ಮಾರುತ್ತೇನೆ. ಕೆ.ಜಿಗೆ ₹2ರಿಂದ₹3 ಸಿಗುತ್ತದೆ. ದೊಡ್ಡಪೇಟೆ ಸಂತೆಯಲ್ಲಿ ಎಲ್ಲ ಕಾಲ್ಕೇಜಿ(1/4ಕೆ.ಜಿ) ವ್ಯಾಪಾರವೇ ಹೆಚ್ಚು. ನಾಲ್ಕು ಬಾರಿ ಕಾಲ್ಕೇಜಿ ತೂಗಿದರೆ ಬರುವ ಲಾಭ ಸೋರುತ್ತದೆ. ಆದರೂ ಪರವಾಗಿಲ್ಲ ಲಾಭವಿದೆ’ ಎನ್ನುತ್ತಾರೆ ದೊಡ್ಡಪೇಟೆಯ ತರಕಾರಿ ವ್ಯಾಪಾರಸ್ಥೆ ಇಂದಿರಮ್ಮ ಬಾರಿಗಿಡದ.

ದರ ಏರಿಕೆ:  ಭಾನುವಾರ ಗಿಜಗೂಡುವ ಈ ಮಾರುಕಟ್ಟೆಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ದರಗಳಲ್ಲಿ ಈ ವಾರ ಸುಮಾರು ₹5ರಿಂದ ₹10ಗಳಷ್ಟು ವ್ಯತ್ಯಾಸವಾಗಿದೆ.
‘ಮಳೆ ಇಲ್ಲದ್ದಕ್ಕೆ ತರಕಾರಿ ಬೆಲೆ ಹೆಚ್ಚಿದೆ. ಆದರೂ ಮನೆಗೆ ತರಕಾರಿ ಬೇಕು. ಈರುಳ್ಳಿ ಮಾತ್ರ ಕಡಿಮೆ ಇದೆ. ಇನ್ನುಳಿದ ತರಕಾರಿ ಬೆಲೆ ಸ್ವಲ್ಪ ಜಾಸ್ತಿ’ ಎನ್ನುತ್ತಾರೆ ವಿರೂಪಾಕ್ಷಿ ಶೆಟ್ಟರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT