ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಮುಕ್ತ ನಗರಿಗೆ ಯೋಜನೆ...

ಹಂದಿಗಳ ತಾಣಕ್ಕೆ ಆಹಾರ ಪೂರೈಕೆ ಹೋಟೆಲ್‌ಗಳಿಗೆ ಮನವಿ ಸಾಧ್ಯತೆ
Last Updated 17 ಏಪ್ರಿಲ್ 2017, 7:29 IST
ಅಕ್ಷರ ಗಾತ್ರ
ಮೈಸೂರು: ನಗರವನ್ನು ‘ಹಂದಿ ಮುಕ್ತ ನಗರ’ವನ್ನಾಗಿಸಲು ಪಾಲಿಕೆ ಯೋಜನೆ ರೂಪಿಸಿದ್ದು, ಹಂದಿ ಸಾಕಾಣೆದಾರರು ಒಪ್ಪಿಗೆ ಸೂಚಿಸಿದ್ದಾರೆ. ಈ ವರ್ಷದ ಬಜೆಟ್‌ನಲ್ಲಿ ರೂಪಿಸಲಾಗಿರುವ ಯೋಜನೆಗೆ ಹಂಚ್ಯಾ ಗ್ರಾಮದ ಸರ್ವೆ ನಂಬರ್ 242 ರಲ್ಲಿ 2.1 ಎಕರೆ ಜಮೀನನ್ನು ಜಿಲ್ಲಾಡಳಿತ ನೀಡಿದೆ. 
 
ಇಲ್ಲಿ ಹಂದಿ ಸಾಕಣೆದಾರರಿಗೆ ಅನುಕೂಲವಾಗುವಂತೆ ಕಾಂಪೌಂಡ್ ಹಾಗೂ ಚಾವಣಿ ನಿರ್ಮಿಸಿ, ಮೂಲಸೌಕರ್ಯಗಳನ್ನು ಕಲ್ಪಿಸಿ, ಅಲ್ಲಿಗೆ ಹಂದಿಗಳನ್ನು ಸ್ಥಳಾಂತರಿಸಲು ಯೋಜನೆ ಹೆಣೆಯಲಾಗಿದ್ದು, ಇದಕ್ಕೆ ₹ 50 ಲಕ್ಷ ಹಣವನ್ನು ಮೀಸಲಿಡಲಾಗಿದೆ.
 
ಈಗಾಗಲೇ ಮೊದಲ ಸುತ್ತಿನ ಮಾತುಕತೆ ಹಂದಿ ಸಾಕಣೆದಾರರೊಂದಿಗೆ ನಡೆದಿದ್ದು, ಅವರು ತಮ್ಮ ತಮ್ಮ ಹಂದಿಗಳನ್ನು ‘ಹಂದಿಗಳ ತಾಣ’ಕ್ಕೆ ಬಿಡಲು ಒಪ್ಪಿದ್ದಾರೆ. ಈ ರೀತಿಯ ಪ್ರಯೋಗ ದಾವಣಗೆರೆಯಲ್ಲಿ ಅಂತಿಮ ಹಂತದಲ್ಲಿದೆ. ಇದರಿಂದ ನಗರವನ್ನು ಹಂದಿ ಮುಕ್ತ ನಗರವನ್ನಾಗಿ ರೂಪಿಸಬಹುದು ಎಂಬುದು ಪಾಲಿಕೆ ಲೆಕ್ಕಾಚಾರ.
 
ತಂಗುದಾಣದಲ್ಲಿ ಹಂದಿಗಳಿಗೇನು ಆಹಾರ?: ಹಂದಿಗಳು ಮೋರಿಗಳಲ್ಲಿ ಬರುವ ಆಹಾರ ಪದಾರ್ಥಗಳನ್ನು ತಿನ್ನುತ್ತಿವೆ. ಹಂದಿ ಸಾಕಣೆದಾರರು ಅಷ್ಟಿಷ್ಟು ಆಹಾರ ಹಾಕುತ್ತಾರೆ. ತಂಗುದಾಣದಲ್ಲಿ ಹಂದಿಗಳಿಗೆ ಆಹಾರ ಒದಗಿಸುವುದು ಹೇಗೆ ಎಂಬ ಸಾಕಣೆದಾರರ ಪ್ರಶ್ನೆಗೆ ಪಾಲಿಕೆ ಉತ್ತರ ಕಂಡುಕೊಂಡಿದೆ.
 
ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಉಳಿಯುವ ಆಹಾರವನ್ನು ಕಸದ ಜತೆ ಬೀಸಾಡದೇ, ಅದನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಹಂದಿಗಳ ತಾಣದಲ್ಲಿ ಸುರಿಯುವ ಮೂಲಕ ಹಂದಿಗಳಿಗೆ ಆಹಾರ ಒದಗಿಸುವ ಯೋಜನೆ ರೂಪಿಸಲಾಗಿದೆ.
 
ಇದಕ್ಕೆ ಸದ್ಯದಲ್ಲೇ ಹೋಟೆಲ್ ಸಾಕಣೆದಾರರ ಜತೆ ಪಾಲಿಕೆ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ. ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬಂದರೆ ಮೈಸೂರು ಹಂದಿ ಮುಕ್ತ ನಗರವಾಗುವಲ್ಲಿ ಅನುಮಾನ ಇಲ್ಲ.  
 
ಹಂದಿಗಳು ಹಲವು ರೋಗವಾಹಕಗಳಾಗಿಯೂ ಪರಿಣಮಿಸಿವೆ. ಸ್ವಚ್ಛತೆ ಕಾರ್ಯಕ್ಕೆ ತೊಡಗಿಕಾಗಿವೆ. ಇವುಗಳ ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಹಂದಿ ಸಾಕಣೆದಾರರ ಬೇಜವಾಬ್ದಾರಿತನದಿಂದ ನಾಗರಿಕರಿಗೆ ತೊಂದರೆ ಆಗುತ್ತಿದೆ.
***
ಹಂದಿ ಮಾಲೀಕರ ಬೇಡಿಕೆ
ಮೈಸೂರು:  ಕೇವಲ ಒಂದು ಕಡೆ ಮಾತ್ರ ಹಂದಿಗಳ ತಾಣ ನಿರ್ಮಿಸದೇ ನಗರದ ನಾಲ್ಕು ಕಡೆಯೂ ಇಂತಹ ತಾಣ ನಿರ್ಮಿಸಬೇಕು ಎನ್ನುವುದು ಹಂದಿ ಮಾಲೀಕರ ಬೇಡಿಕೆ. ನಗರ ದಲ್ಲಿನ ಹಂದಿಗಳ ಸಂಖ್ಯೆ ಹಾಗೂ ಲಭ್ಯ ಇರುವ ಸಂಪನ್ಮೂಲಗಳನ್ನು ಗಮನಿಸಿದರೆ ಇದು ಕಾರ್ಯ ಸಾಧುವಲ್ಲ ಎಂಬುದು ಅಧಿಕಾರಿಗಳ ಮಾತು.
***
ಹಂದಿಗಳ ಸಂಖ್ಯೆ ಎಷ್ಟು?
ಮೈಸೂರು:
ನಗರದ ರಾಜೀವ್‌ನಗರ, ಶಾಂತಿ ನಗರ, ಕಲ್ಯಾಣಗಿರಿ, ಜೆ.ಪಿ.ನಗರ ಸೇರಿದಂತೆ ಕೆಲವೆಡೆ ಹಂದಿಗಳ ಕಾಟ ಹೆಚ್ಚಾಗಿದ್ದು, ನಾಗರಿಕರಿಗೆ ಕಿರಿಕಿರಿ ತಂದೊಡ್ಡಿದೆ.

ನಗರದಲ್ಲಿ ಸುಮಾರು 2,000ದಿಂದ 2,500 ಹಂದಿಗಳಿರಬಹುದು ಎಂದು ಪಾಲಿಕೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಹಂದಿಗಳನ್ನು ಹಿಡಿದು ಕೊಂಡು ಹೋಗಿ ಎಂದು ಎಷ್ಟು ಹೇಳಿದರೂ ಅಧಿ ಕಾರಿಗಳು ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂದು ಪಾಲಿಕೆ ಸದಸ್ಯರು ದೂರುತ್ತಾರೆ. ಆದರೆ, ಹಂದಿ ಗಳನ್ನು ಹಿಡಿಯಲು ಹೋದರೆ ಅದರ ಮಾಲೀಕರು ಬಿಡುವುದಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
***
ಹಂದಿಗಳ ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಸದ್ಯದಲ್ಲೇ ಜಾರಿಗೆ ಬರಲಿದ್ದು, ನಗರ ಶೀಘ್ರದಲ್ಲಿ ಹಂದಿ ಮುಕ್ತ ನಗರವಾಗಲಿದೆ
ಡಾ.ಎಸ್.ಪಿ.ಸುರೇಶ್,  ಪಾಲಿಕೆ ಪಶು ಸಂಗೋಪನೆ ವಿಭಾಗದ ಸಹಾಯಕ ನಿರ್ದೇಶಕ
***
ವಾರ್ಡ್‌ ಸಂಖ್ಯೆ 53, 54, 55 ಸೇರಿದಂತೆ ನಗರದ ಕೆಲವು ಭಾಗಗಳಲ್ಲಿ ಹಂದಿಗಳ ಸಮಸ್ಯೆ ಮೇರೆ ಮೀರಿದೆ. ಈ ಕುರಿತು ದೂರು ನೀಡಿದರೆ ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ
ಫೈರೋಜ್‌ಖಾನ್, ಪಾಲಿಕೆ ಸದಸ್ಯ, ವಾರ್ಡ್ ಸಂಖ್ಯೆ 53
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT