ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ: ಎರ್ಡೊಗನ್‌ಗೆ ಜಯ

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇಸ್ತಾಂಬುಲ್‌: ಜನಮತಗಣನೆಯಲ್ಲಿ  ಅಲ್ಪ ಅಂತರದಿಂದ ಜಯ ಸಾಧಿಸಿರುವ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್‌  ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.
ಆದರೆ, ಈ ಜಯವನ್ನು ಎರ್ಡೊಗನ್‌ ಎದುರಾಳಿಗಳು ತಿರಸ್ಕರಿಸಿದ್ದು, ಮತಗಳ ಮರುಎಣಿಕೆಗೆ ಒತ್ತಾಯಿಸಿದ್ದಾರೆ. ಈ ಜನಮತಗಣನೆ ಟರ್ಕಿ ಇತಿಹಾಸದಲ್ಲಿ  ನಿರ್ಣಾಯಕವಾಗಿದ್ದು, ರಾಜಕೀಯ ವ್ಯವಸ್ಥೆಗೆ ದಿಕ್ಸೂಚಿಯಾಗಿದೆ.

ಅಧ್ಯಕ್ಷರ ಅಧಿಕಾರವನ್ನು ವಿಸ್ತರಿಸುವ ಕುರಿತು  ಭಾನುವಾರ  ಜನಮತಗಣನೆ ನಡೆದಿತ್ತು. ಎರ್ಡೊಗನ್‌ ಶೇಕಡ 51.41 ಮತಗಳನ್ನು ಪಡೆದಿದ್ದಾರೆ. ಅವರ  ವಿರುದ್ಧ ಶೇಕಡ 48.59 ಮತಗಳು ಚಲಾವಣೆಯಾಗಿವೆ ಎಂದು ಚುನಾವಣಾ ಅಧಿಕಾರಿಗಳು  ಪ್ರಕಟಿಸಿದ್ದಾರೆ.

ಟರ್ಕಿಯ ಮೂರು ಅತಿ ದೊಡ್ಡ ನಗರಗಳಾದ ಇಸ್ತಾಂಬುಲ್‌, ಅಂಕಾರ  ಹಾಗೂ ಐಜ್ಮೀರ್‌ಗಳಲ್ಲಿ ಎರ್ಡೊಗನ್‌ ವಿರುದ್ಧ ಮತಗಳನ್ನು ಚಲಾಯಿಸಲಾಗಿದೆ. ಆದರೆ,  ಎರ್ಡೊಗನ್‌ ಅವರ ತವರು ಅನಾಟೊಲಿಯನ್‌ ನಗರದಲ್ಲಿ  ಅವರ ಪರ ಮತಗಳು ಚಲಾವಣೆಯಾಗಿವೆ.

ಈ ಜನಮತಗಣನೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿವೆ ಎಂದು ವಿರೋಧ ಪಕ್ಷಗಳ ನಾಯಕರು ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿ ಮುಂದುವರಿಕೆ: ದೇಶದಲ್ಲಿ ಕಳೆದ ಒಂಬತ್ತು ತಿಂಗಳಿನಿಂದ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯನ್ನು ಮುಂದುವರಿಸಲಾಗಿದೆ. ಸರ್ಕಾರವನ್ನು ಕಿತ್ತೊಗೆದು ಸೇನಾಡಳಿತ ಸ್ಥಾಪಿಸುವ ವಿಫಲ ಪ್ರಯತ್ನ ನಡೆದ ಬಳಿಕ ಟರ್ಕಿಯಲ್ಲಿ ಕಳೆದ ಜುಲೈ 15ರಂದು  ಎರ್ಡೊಗನ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT