ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರಸು ಭವನಕ್ಕೆ ₹ 1 ಕೋಟಿ’

Last Updated 18 ಏಪ್ರಿಲ್ 2017, 6:33 IST
ಅಕ್ಷರ ಗಾತ್ರ

ಜೊಯಿಡಾ(ದಾಂಡೇಲಿ):  ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾ­ಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.­ದೇಶ­ಪಾಂಡೆ ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು  ಹಿಂದುಳಿದ ವರ್ಗಗಳ ಕಲ್ಯಾಣ ಇಲಾ­ಖೆಯ ವಸತಿ ನಿಲಯಗಳಲ್ಲಿ ಕಲಿ ಯುವ ವಿದ್ಯಾರ್ಥಿಗಳಿಗಾಗಿ 500 ಹಾಸಿಗೆ, 600 ಬ್ಯಾಗ್ ವಿತರಿಸಲಾಗಿದೆ ಎಂದರು.  ದೇವರಾಜ ಅರಸು ಸಮುದಾಯ ಭವನಕ್ಕೆ ₹ 1 ಕೋಟಿ  ಮಂಜೂರಿ­ಯಾಗಿದ್ದು ತಾಲ್ಲೂಕಿನ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಯುಗ ಪ್ರಾರಂಭವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭತ್ತದ ಹುಲ್ಲಿನ ಭಣವೆ ಸುಟ್ಟ ಭಾಮಣಗಿಯ ಸೀತಾ­ರಾಮ ಮಿರಾಶಿಯವರಿಗೆ ₹ 10 ಸಾವಿರ ಚೆಕ್‌ ವಿತರಿಸಲಾಯಿತು.  ರಿಯಾಯತಿ ದರದಲ್ಲಿ ಧಾನ್ಯ ಸಂಗ್ರಹಣಾ ಪೆಟ್ಟಿಗೆ­ಯನ್ನು ಶಾಂತಾ ಹರಿಜನ, ಗಣಪತಿ ಹರಿಜನ, ಬಂಡು ಗಾಂಜೇಕರ ಅವರಿಗೆ ವಿತರಿಸಲಾಯಿತು. ತುಕಾರಾಮ ಪಾಂಡು­ರಂಗ ನಾಯ್ಕ ಅವರಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಇಲಾಖೆಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೆ­ಕರ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ, ಸಂಜಯ ಹಣಬರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಾ ಶ್ರೀಕಾಂತ ನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯ ದೇಸಾಯಿ, ತಹಶೀಲ್ದಾರ್ ಟಿ.ಸಿ.ಹಾದಿ­ಮನಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT