ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಡಿಕ್ಕಿ, ತಾಯಿ–ಮಗು ಸಾವು; ವಿಡಿಯೋ ವೈರಲ್‌

Last Updated 18 ಏಪ್ರಿಲ್ 2017, 12:53 IST
ಅಕ್ಷರ ಗಾತ್ರ
ADVERTISEMENT

ಪುಣೆ: ಮೂರು ವರ್ಷದ ಮಗು, ತಾಯಿ ಸೇರಿದಂತೆ ಐದು ಜನರಿಗೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ದೂರಕ್ಕೆ ಎಸೆಯಲ್ಪಟ್ಟ ವಿಡಿಯೋ ವೈರಲ್‌ ಆಗಿದೆ.

ಕಾರು ಗುದ್ದಿದ ರಭಸಕ್ಕೆ ಮಗು ಮತ್ತು ತಾಯಿ 30 ಅಡಿಗೂ ಹೆಚ್ಚು ದೂರಕ್ಕೆ ದೂಡಿದ್ದಾರೆ. ಇಬ್ಬರು ಕಾರಿನ ಅಡಿಯಲ್ಲಿ ಸಿಲುಕಿದ್ದಾರೆ.

ಸೋಮವಾರ ಪುಣೆಯಲ್ಲಿ ನಡೆದ ಘಟನೆಯಲ್ಲಿ 3 ವರ್ಷದ ಮಗು ವಿಶ್ವಕರ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದು,  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಪೂಜಾ ವಿಶ್ವಕರ್ಮ ಮಂಗಳವಾರ ಮೃತಪಟ್ಟಿದ್ದಾರೆ.

ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಅಪಘಾತದಲ್ಲಿ ರಸ್ತೆ ವಿಭಜಕದ ಬಳಿ ನಿಂತಿದ್ದ ಎಲ್ಲರೂ ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT