ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಮೊತ್ತದ ಪಾವತಿಗೆ ಚೆಕ್‌ ಬಳಸಿದರೆ ₹100 ಶುಲ್ಕ: ಎಸ್‌ಬಿಐ ಕಾರ್ಡ್‌ ಸರ್ವಿಸಸ್‌

Last Updated 19 ಏಪ್ರಿಲ್ 2017, 5:21 IST
ಅಕ್ಷರ ಗಾತ್ರ

ನವದೆಹಲಿ: ಕಡಿಮೆ ಮೊತ್ತದ ಪಾವತಿಗೆ ಚೆಕ್‌ ಬಳಸಿದರೆ ₹100 ಶುಲ್ಕ ವಿಧಿಸುವ ಕ್ರಮವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಾರಂಭಿಸಿದೆ.

40 ಲಕ್ಷ ಗ್ರಾಹಕರನ್ನು ಹೊಂದಿರುವ ಎಸ್‌ಬಿಐ ಕಾರ್ಡ್‌, ₹2000 ವರೆಗಿನ ಪಾವತಿಗೆ  ಚೆಕ್‌ ಬಳಸಿದರೆ ₹100 ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ. ಈ ಕ್ರಮ ಏಪ್ರಿಲ್‌ 1ರಿಂದಲೇ ಅನ್ವಯವಾಗಿದೆ.

ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದು, ₹2000ಕ್ಕಿಂತ ಹೆಚ್ಚು ಮೊತ್ತದ ಚೆಕ್‌ ನೀಡಿದ್ದಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ ಎಂದು ಎಸ್‌ಬಿಐ ಕಾರ್ಡ್‌ ಸರ್ವಿಸಸ್‌ ಸ್ಪಷ್ಟಪಡಿಸಿದೆ.

ಶೇ.90 ಗ್ರಾಹಕರು ಚೆಕ್‌ ಹೊರತಾದ ವ್ಯವಸ್ಥೆ ಮೂಲಕ ಪಾವತಿ ಮಾಡುತ್ತಿದ್ದು, ಡಿಜಿಟಲ್‌ ಪಾವತಿಗೆ ಒತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಬಿಐ ಕಾರ್ಡ್‌ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್‌ ಜಸುಜಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT