ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೂ ಕಾಲರ್‌ನಲ್ಲೂ ಹಣ ವರ್ಗಾಯಿಸಿ

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಪರಿಚಿತರ ಕರೆಗಳ ವಿವರಗಳನ್ನು ತಿಳಿಯಲು ಮತ್ತು ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಲು ಉಪಯೋಗಿಸುತ್ತಿದ್ದ ಟ್ರೂ ಕಾಲರ್ ಆ್ಯಪ್‌  ಮೂಲಕ ಇನ್ನುಮುಂದೆ ನಗದು ವರ್ಗಾವಣೆಯನ್ನೂ ಮಾಡಬಹುದು.

‘ಬ್ಯಾಂಕಿಂಗ್ ಸೇವೆ, ಮೊಬೈಲ್ ರೀಚಾರ್ಜ್, ವಿಡಿಯೊ ಕರೆನಂತಹ ಹೊಸ ಹೊಸ ಸೌಲಭ್ಯಗಳೊಂದಿಗೆ ಟ್ರೂ ಕಾಲರ್ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಶೀಘ್ರವೇ ಈ ಸೌಲಭ್ಯಗಳು ಬಳಕೆದಾರರಿಗೆ ಮುಕ್ತವಾಗಲಿವೆ’ ಎಂದು ‘ಟ್ರೂ ಸಾಫ್ಟ್‌ವೇರ್ ಸ್ಕಾಂಡಿನೇವಿಯಾ ಎಬಿ’ ಸಂಸ್ಥೆ ತಿಳಿಸಿದೆ.

ಹೊಸ ಸೌಲಭ್ಯಗಳು
ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ ‘ಟ್ರೂ ಕಾಲರ್ ಪೇ’ ಹೆಸರಿನ ಹೊಸ ಸೌಲಭ್ಯವನ್ನು ಟ್ರೂ ಕಾಲರ್ ತಂತ್ರಾಂಶ ಒದಗಿಸಲಿದ್ದು, ಇದರ ಮೂಲಕ ಹಣ ವರ್ಗಾವಣೆ ಮಾಡಬಹುದು. 

ಈ ಆ್ಯಪ್‌ನಲ್ಲಿ ಅಳವಡಿಸಿರುವ ‘ಪೇ’ ಆಯ್ಕೆಯ ಮೂಲಕ ಯುಪಿಐ ಐಡಿ ಕ್ರಿಯೇಟ್ ಮಾಡಿ, ಯಾವುದಾದರೂ ಯುಪಿಐ ಅಥವಾ ಭೀಮ್ ಆ್ಯಪ್‌ ಜೊತೆ ಜೋಡಿಸಲಾಗಿರುವ ಮೊಬೈಲ್ ಸಂಖ್ಯೆಗೆ ಹಣ ವರ್ಗಾವಣೆ ಮಾಡಬಹುದು. ಮೊಬೈಲ್‌ಗೆ ರೀಚಾರ್ಜ್ ಸಹ ಮಾಡಬಹುದು.

ವಿಡಿಯೊ ಕರೆ
ಗೂಗಲ್ ಡ್ಯುಯೊ ಸಹಯೋಗದಲ್ಲಿ ಟ್ರೂ ಕಾಲರ್ ಆ್ಯಪ್‌ ಒಪ್ಪಂದ ಮಾಡಿಕೊಂಡಿದ್ದು, ಇನ್ನುಮುಂದೆ ವಿಡಿಯೊ ಕರೆ ಸೌಲಭ್ಯವನ್ನೂ ಈ ಆ್ಯಪ್ ಮೂಲಕ ಒದಗಿಸಲಿದೆ.

ಸಂದೇಶ ರವಾನೆ ಸಲೀಸು
ಮೊಬೈಲ್‌ನಲ್ಲಿರುವ ಎಸ್‌ಎಂಎಸ್‌ಗಳ ವಿವರವನ್ನು ಸುಲಭವಾಗಿ ತಿಳಿಸುವಂತೆ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ ಎಸ್ಎಂಎಸ್ ಕಳುಹಿಸುವ ವಿಧಾನ ಮತ್ತು ಅನಪೇಕ್ಷಿತ ಎಸ್‌ಎಂಎಸ್‌ಗಳನ್ನು ಗುರುತಿಸುವ ವಿಧಾನ ಮತ್ತಷ್ಟು ಸುಲಭವಾಗಲಿದೆ. ಮೊದಲೇ ಸಿದ್ಧಮಾಡಿರುವ ಮೆಸೇಜ್‌ಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ  ಕಳುಹಿಸುವ ಸೌಲಭ್ಯವೂ ಬರಲಿದೆ.

ನೆಟ್‌ ಸಂಪರ್ಕವಿಲ್ಲದಿದ್ದರೂ ಅಪರಿಚಿತ ಕರೆ ಪತ್ತೆ
ಏರ್‌ಟೆಲ್‌ ಸಹಯೋಗದಲ್ಲಿ ‘ಏರ್‌ಟೆಲ್‌ ಟ್ರೂ ಕಾಲರ್ ಐಡಿ’ ಎಂಬ ಹೊಸ ಸೌಲಭ್ಯವನ್ನು ಟ್ರೂ ಕಾಲರ್ ಒದಗಿಸಲಿದೆ. ಇದರ ಮೂಲಕ ಅಂತರ್ಜಾಲ ಸಂಪರ್ಕವಿಲ್ಲದಿದ್ದರೂ ಅಪರಿಚಿತ ಕರೆಗಳ ವಿವರ ತಿಳಿದುಕೊಳ್ಳಬಹುದು. ಆದರೆ, ಏರ್‌ಟೆಲ್‌ನ ಮೊಬೈಲ್ ಸಂಖ್ಯೆಯಿಂದ ಬರುವ ಕರೆಗಳ ವಿವರ ಮಾತ್ರ ಇಂಟರ್‌ನೆಟ್‌ ಸಂಪರ್ಕ ಇಲ್ಲದಿದ್ದರೂ ಸಿಗಲಿದೆ. ಇತರೆ ಮೊಬೈಲ್ ಸಂಖ್ಯೆಗಳ ಮಾಹಿತಿ ತಿಳಿಯಬೇಕೆಂದರೆ ಅಂತರ್ಜಾಲ ಸಂಪರ್ಕ ಬೇಕಾಗುತ್ತದೆ.

ಅನನುಕೂಲಗಳು
ಟ್ರೂ ಕಾಲರ್ ಆ್ಯಪ್ ಎಲ್ಲಾ ಪ್ರದೇಶಗಳಲ್ಲೂ ಕೆಲಸಮಾಡುವುದಿಲ್ಲ. ಈ ಆ್ಯಪ್‌ ಅನ್ನು ನಮ್ಮ ಮೊಬೈಲ್‌ಗೆ ಇನ್ಸ್‌ಟಾಲ್ ಮಾಡುವಾಗ ನಮ್ಮ ಫೋನ್‌ಬುಕ್ ಅಥವಾ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಮೊಬೈಲ್‌ ಸಂಖ್ಯೆಗಳು ಮತ್ತು ಹೆಸರು, ವಿವರಗಳನ್ನು ಟ್ರೂಕಾಲರ್‌ ತನ್ನ ವೆಬ್‌ಸೈಟ್‌ನಲ್ಲಿ ದಾಖಲಿಸಿಕೊಳ್ಳುತ್ತದೆ. ಇದು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವ ಅಪಾಯವಿದೆ.

ಟ್ರೂಕಾಲರ್‌ ಮತ್ತೊಂದು ಅನನುಕೂಲ ಏನೆಂದರೆ, ಎಲ್ಲಾ ಅಪರಿಚಿತ ಸಂಖ್ಯೆಗಳ ವಿವರಗಳನ್ನು ತಿಳಿಸುವುದಿಲ್ಲ. ಕೆಲವು ಬಾರಿ ನಿಜ ಹೆಸರಿಗಿಂತ ಭಿನ್ನವಾಗಿ ಬೇರೊಂದು ಹೆಸರನ್ನು ಸೂಚಿಸುತ್ತದೆ. 2ಜಿ ಸಂಪರ್ಕದಲ್ಲಿ ಈ ಆ್ಯಪ್‌ ಕೆಲಸ ಮಾಡುವುದಿಲ್ಲ.

ಸಿರಿಯಾದ  ಸೇನೆಯ ಮಾಹಿತಿಗೆ ಕನ್ನ ಹಾಕಿದ ಆರೋಪದ ಮೇಲೆ 17 ಜುಲೈ 2013ರಂದು ಪ್ರಕರಣವೂ ದಾಖಲಾಗಿತ್ತು. ಸೇನೆಯ ಟ್ವಿಟರ್ ಖಾತೆಯ ಸುಮಾರು 459ಜಿಬಿಯಷ್ಟು ದತ್ತಾಂಶಕ್ಕೆ ಕನ್ನ ಹಾಕಿ ಅನಧಿಕೃತವಾಗಿ ಪಡೆದುಕೊಂಡಿದೆ ಎಂದು ಸೇನೆ ಆರೋಪಿಸಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಟ್ರೂಕಾಲರ್ ಸಂಸ್ಥೆ, ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ ಮತ್ತು ಅನಧಿಕೃತವಾಗಿ ಬಳಸುವುದಿಲ್ಲ ಎಂದು ಭರವಸೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT