ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಗ್ರಾಮ: ಪಟ್ಟಿ ಮರು ಪರಿಶೀಲಿಸಿ

Last Updated 19 ಏಪ್ರಿಲ್ 2017, 5:06 IST
ಅಕ್ಷರ ಗಾತ್ರ

ಗದಗ: ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ  ಅಧ್ಯಕ್ಷತೆಯಲ್ಲಿ ಬರ ನಿರ್ವಹಣೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಸರ್ಕಾರದಿಂದ ವಿತರಿಸಲಾಗಿರುವ ಮೇವು ಕಿಟ್‌ ಮತ್ತು ಸದ್ಯ ಜಿಲ್ಲೆಯಲ್ಲಿ ಲಭ್ಯವಿರುವ 43.65 ಮೆಟ್ರಿಕ್‌ ಟನ್‌ ಮೇವು ಸಂಗ್ರಹದಿಂದ, ಜಾನುವಾರುಗಳಿಗೆ ಈ ಬೇಸಿಗೆಯಲ್ಲಿ ಮೇವಿಗೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು, ಗೋಶಾಲೆಯಲ್ಲಿ ಇರುವ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಲ್ಲೆಯಲ್ಲಿ 2017ರ ಜನೇವರಿ- ಏಪ್ರಿಲ್ 15ರವರೆಗೆ ವಾಡಿಕೆಯಂತೆ  40 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 5 ಮಿ.ಮಿ. ಮಳೆ ಆಗಿದೆ. ಆಧಾರ ಜೊಡಣೆಯಾಗಿರುವ ರೈತರಿಗೆ ಇದುವರೆ ಮುಂಗಾರು ಬೆಳೆಹಾನಿ ಸಬ್ಸಿಡಿಯಾಗಿ ₹77.51 ಕೋಟಿ ವಿತರಿಸಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಗ್ರಾಮೀಣ, ನಗರಾಭಿವೃದ್ಧಿ ಹಾಗೂ ಕಂದಾಯ ಇಲಾಖೆಗಳು 717 ಕಾಮಗಾರಿ ಪೂರ್ಣಗೊಳಿಸಿದ್ದು ₹15.10 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜೆ ಗದ್ಯಾಳ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯ ಪ್ರತಿ ತಾಲ್ಲೂಕುಗಳ ತಹಶೀಲ್ದಾರರಿಗೆ ₹ 50 ಲಕ್ಷ  ಒದಗಿಸಲಾಗಿದ್ದು, ಇನ್ನೂ ₹50 ಲಕ್ಷ ಬಿಡುಗಡೆ ಮಾಡಲಾಗುವುದು. ಇದನ್ನು ಮೇವು ಖರೀದಿ, ಗೋಶಾಲೆ ನಿರ್ವಹಣೆ, ಖಾಸಗಿ ಬೋರವೆಲ್‌ಗೆ ಬಾಡಿಗೆ ನೀಡಲು ಬಳಸಿಕೊಳ್ಳಬೇಕು. ಎರಡು ದಿನದಲ್ಲಿ ಈ ಎಲ್ಲ ಬಾಕಿ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಹೇಳಿದರು.ಉದ್ಯೋಗ ಖಾತ್ರಿ ಯೋಜನೆಯಡಿ 2016-–17ರಲ್ಲಿ ₹109.35 ಕೋಟಿ ವೆಚ್ಚದಲ್ಲಿ 31.54 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಮಂಜುನಾಥ ಚವ್ಹಾಣ ಮಾಹಿತಿ ನೀಡಿದರು.

ನರಗುಂದ ಹಾಗೂ ರೋಣ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಇನ್ನೂ ಹೆಚ್ಚುವರಿಯಾಗಿ 5 ದಿನಗಳ ಕಾಲ ನೀರನ್ನು ಬಿಡುವಂತೆ ಕ್ರಮ ಜರುಗಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಜಿಲ್ಲಾದಿಕಾರಿಗಳು ಮನವಿ ಮಾಡಿದರು. ಗಜೇಂದ್ರಗಡ ಪಟ್ಟಣಕ್ಕೆ  ಕಳೆದ ಸೆಪ್ಟೆಂಬರ್‌ನಿಂದಲೇ ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು ಮೂರು ತಿಂಗಳ ಬಾಡಿಗೆಯನ್ನು ಪಾವತಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಆಶ್ರಯ ಯೋಜನೆ: ಜಿಲ್ಲೆಯಲ್ಲಿ ಆಶ್ರಯ ಯೋಜನೆಯಡಿ ಒಟ್ಟು 51,469 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 27,818 ಮನೆಗಳನ್ನು ಪೂರ್ತಿಗೊಳಿಸಲಾಗಿದೆ. 10,180 ಮನೆಗಳು ಪ್ರಗತಿಯಲ್ಲಿವೆ.ನಗರ ಪ್ರದೇಶದಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಒಟ್ಟು 1800 ಮನೆಗಳ ಪೈಕಿ 234 ಪೂರ್ಣಗೊಂಡಿದ್ದು 545 ಮನೆಗಳು ಪ್ರಗತಿಯಲ್ಲಿವೆ. 1017 ಮನೆಗಳಿಗೆ ಕಾರ್ಯಾದೇಶ ನೀಡಲಾಗಿದೆ.

ಜಿಲ್ಲೆಯ 327 ಗ್ರಾಮಗಳ ಪೈಕಿ 42 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿ ಪರಿವರ್ತಿಸಿದ್ದು ನರಗುಂದ ತಾಲ್ಲೂಕಿನ ಎಲ್ಲ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿವೆ. ನಗರ ಪ್ರದೇಶದ ಒಟ್ಟು 256 ವಾರ್ಡುಗಳ ಪೈಕಿ 52 ವಾರ್ಡುಗಳಲ್ಲಿ ಶೌಚಾಲಯ ವ್ಯವಸ್ಥೆ ಪೂರ್ಣಗೊಂಡಿದೆ. 2017ರ ಡಿಸೆಂಬರ್‌ ಒಳಗಾಗಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಬೇಕಿದ್ದು ಅದಕ್ಕಿಂತ ಮುಂಚೆಯೇ ಈ ಕಾರ್ಯ ಪೂರ್ಣಗೊಳಿಸಲು ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಟ್ಟಣಶೆಟ್ಟಿ ಸೂಚಿಸಿದರು.

ಅಂಗನವಾಡಿಗಳಿಗೆ ನಿವೇಶನ ನೀಡುವ ಹಾಗೂ ನಿವೇಶನ ಇದ್ದಲ್ಲಿ ಕಡಿಮೆ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೆಕು. ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿಧ್ಯಾರ್ಥಿಗಳ ದಾಖಲಾತಿ, ಪುಸ್ತಕಗಳ ಹಾಗೂ ಸಮವಸ್ತ್ರಗಳ ವಿತರಣೆಗೆ ಈಗಿನಿಂದಲೇ ಮುಂಜಾಗೃತೆಯಾಗಿ ಯೋಜನೆ ರೂಪಿಸಬೇಕು. ಹಿಂದುಳಿದ ವರ್ಗಗಳ 6 ಹಾಸ್ಟೆಲ್‌ ಕಟ್ಟಡಗಳು ನಿರ್ಮಾಣವಾಗುತ್ತಿದ್ದು ಸಮಾಜ ಕಲ್ಯಾಣ ಇಲಾಖೆಗೆ 4 ನಿವೇಶನಗಳು ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಅಲ್ಪಸಂಖ್ಯಾತರ ಇಲಾಖೆಯ ಎಲ್ಲ 7 ಹಾಸ್ಟೆಲ್‌ಗಳಿಗೆ ನಿವೇಶನ ದೊರಕಿವೆ ಎಂದು ಪಟ್ಟಣಶೆಟ್ಟಿ ಹೇಳಿದರು.

ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎಸ್.ಸಿ. ಮಹೇಶ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕ ರಮೇಶ ದೇಸಾಯಿ, ಜಿ.ಪಂ. ಯೋಜನಾ ನಿರ್ದೇಶಕ ಟಿ.ದಿನೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT