ಚುನಾವಣಾ ಆಯೋಗದ ಪ್ರಸ್ತಾವನೆ

ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಜತೆಗೆ ವಿವಿಪ್ಯಾಟ್‌ ಬಳಕೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ

16 ಲಕ್ಷ ವಿವಿಪ್ಯಾಟ್‌ ನಿರ್ಮಿಸಲು ಇಸಿಐಎಲ್‌ ಮತ್ತು ಬಿಇಎಲ್‌  ಸಂಸ್ಥೆಗಳಿಗೆ 30 ತಿಂಗಳು, ₹3,174 ಕೋಟಿ ಅಗತ್ಯವಿದೆ...

ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಜತೆಗೆ ವಿವಿಪ್ಯಾಟ್‌ ಬಳಕೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ

ನವದೆಹಲಿ: ಮತದಾನ ಪ್ರಕ್ರಿಯೆಯಲ್ಲಿ ಎಲೆಕ್ಟ್ರಾನಿಕ್‌ ಮತ ಯಂತ್ರ(ಇವಿಎಂ)ಗಳ ಜತೆಗೆ ಮತ ಪರಿಶೀಲನಾ ವ್ಯವಸ್ಥೆಯನ್ನು ಅಳವಡಿಸುವ ಚುನಾವಣಾ ಆಯೋಗದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.

ಎಲೆಕ್ಟ್ರಾನಿಕ್‌ ಮತ ಯಂತ್ರಗಳಲ್ಲಿ ಮಾರ್ಪಾಡು ಮಾಡಿರುವ ಕುರಿತು ವಿರೋಧ ಪಕ್ಷಗಳಿಂದ ಆರೋಪ ಕೇಳಿ ಬರುವ ಜತೆಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು. ಇವಿಎಂಗಳ ಜತೆಗೆ ಮತ ತಾಳೆ ಮಾಡಿಕೊಳ್ಳುವ ವಿವಿಪ್ಯಾಟ್‌ (VVPAT–voter verifiable paper audit trail) ಬಳಸುವಂತೆ ಒತ್ತಡ ಹೇರಲಾಗಿತ್ತು.

ಈ ಸಂಬಂಧ ಚುನಾವಣಾ ಆಯೋಗ ನೀಡಿದ್ದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಮುಂಬರುವ  ಚುನಾವಣೆಯಲ್ಲಿ ಇವಿಎಂ ಜತೆಗೆ ವಿವಿಪ್ಯಾಟ್‌ ಬಳಕೆಯಾಗಲಿದೆ.

ದೇಶದ ಎಲ್ಲ ಮತ ಕೇಂದ್ರಗಳಿಗೆ 16 ಲಕ್ಷ ವಿವಿಪ್ಯಾಟ್‌ ಯಂತ್ರಗಳ ಅವಶ್ಯಕತೆ ಇದ್ದು, ₹3,174 ಕೋಟಿ ವ್ಯಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿತ್ತು. ಮತ ಯಂತ್ರಗಳ ಖರೀದಿಗಾಗಿ 2014ರಿಂದ ಸಚಿವ ಸಂಪುಟ ₹1,009 ಹಾಗೂ ₹9,200 ಕೋಟಿ ಬಿಡುಗಡೆ ಮಾಡಿದೆ.

30 ತಿಂಗಳು... 

ಎಲ್ಲ ಮತ ಕೇಂದ್ರಗಳಲ್ಲಿ ವಿವಿಪ್ಯಾಟ್‌ ಯಂತ್ರಗಳನ್ನು ಬಳಸಲು ಅಗತ್ಯವಿರುವ ಸಮಯದ ಬಗ್ಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕೇಳಿತ್ತು. 16 ಲಕ್ಷ ವಿವಿಪ್ಯಾಟ್‌ ನಿರ್ಮಿಸಲು ಇಸಿಐಎಲ್‌ ಮತ್ತು ಬಿಇಎಲ್‌  ಸಂಸ್ಥೆಗಳಿಗೆ 30 ತಿಂಗಳ ಅಗತ್ಯವಿದೆ ಎಂದು ಉತ್ತರಿಸಿತ್ತು.

ಮತದಾನದಲ್ಲಿ ಪಾರದರ್ಶಕತೆ ತರಲು ಕಾಗದ ಮತ ಪತ್ರಗಳ ಬಳಕೆ ತರುವಂತೆ 16 ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು.

Comments
ಈ ವಿಭಾಗದಿಂದ ಇನ್ನಷ್ಟು
ತ್ರಿವಳಿ ತಲಾಖ್‌ ರದ್ದತಿಗೆ ಗಣ್ಯರ ಪ್ರತಿಕ್ರಿಯೆ

ಐತಿಹಾಸಿಕ ತೀರ್ಪು
ತ್ರಿವಳಿ ತಲಾಖ್‌ ರದ್ದತಿಗೆ ಗಣ್ಯರ ಪ್ರತಿಕ್ರಿಯೆ

23 Aug, 2017
ಹೋರಾಡಿ ಗೆದ್ದ ಐವರು ಮಹಿಳೆಯರ ಕತೆ

ಕಿರು ಚಿತ್ರಣ
ಹೋರಾಡಿ ಗೆದ್ದ ಐವರು ಮಹಿಳೆಯರ ಕತೆ

23 Aug, 2017

ರಾಷ್ಟ್ರೀಯ
ದಲಿತ ಬಾಲಕಿಗೆ ಮಲ ಎತ್ತಲು ಒತ್ತಾಯಿಸಿದ ಮೇಲ್ವರ್ಗದ ವ್ಯಕ್ತಿ

ಮೇಲ್ವರ್ಗದ ವ್ಯಕ್ತಿಯೊಬ್ಬ ಆರು ವರ್ಷದ ದಲಿತ ಬಾಲಕಿಗೆ ಆಕೆಯ ಮಲವನ್ನು ಬರಿಗೈಲಿ ಎತ್ತುವಂತೆ ಆಗ್ರಹಿಸಿದ ಘಟನೆ ಲವಕುಶ ನಗರ ತಾಲ್ಲೂಕಿನ ಗುಧೋರ ಎಂಬ ಗ್ರಾಮದಲ್ಲಿರುವ...

23 Aug, 2017
ಬಿಕ್ಕಟ್ಟಿನತ್ತ ಪಳನಿಸ್ವಾಮಿ ಸರ್ಕಾರ

ತಮಿಳುನಾಡು
ಬಿಕ್ಕಟ್ಟಿನತ್ತ ಪಳನಿಸ್ವಾಮಿ ಸರ್ಕಾರ

23 Aug, 2017
ಪರೋಲ್ ಮೇಲೆ ಬಿಡುಗಡೆಯಾದ ಪ್ರಕರಣಗಳ ತನಿಖೆ– ಹೈಕೋರ್ಟ್‌

ಪ್ರಕರಣಗಳ ತನಿಖೆ
ಪರೋಲ್ ಮೇಲೆ ಬಿಡುಗಡೆಯಾದ ಪ್ರಕರಣಗಳ ತನಿಖೆ– ಹೈಕೋರ್ಟ್‌

23 Aug, 2017