ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 15ರಂದು ‘ಬೆಂಗಳೂರು ಚಲೊ’

Last Updated 20 ಏಪ್ರಿಲ್ 2017, 5:24 IST
ಅಕ್ಷರ ಗಾತ್ರ

ದಾವಣಗೆರೆ: ‘ಬಿಸಿಯೂಟ ತಯಾರಕ ರಿಗೆ ಮೇ 5ರೊಳಗೆ ಗೌರವಧನ ಹೆಚ್ಚಿಸಬೇಕು. ಇಲ್ಲದಿದ್ದರೆ ಮೇ 15 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭ ಟನೆ ನಡೆಸಲಾಗುವುದು’ ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರ ಕರ ಫೆಡರೇಷನ್‌ನ ಗೌರವಾ ಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘14 ವರ್ಷ ಗಳಿಂದ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಯೂಟ ತಯಾರಿಸುತ್ತಿರುವವರು ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ. ಪ್ರಸ್ತುತ ಮುಖ್ಯ ಅಡುಗೆಯವರಿಗೆ ₹ 2,000 ಹಾಗೂ ಸಹಾಯಕರಿಗೆ ₹ 1,900 ಗೌರವಧನ ನೀಡಲಾಗು ತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದರು.

‘ಸುಮಾರು 72 ಲಕ್ಷ ಮಕ್ಕಳಿಗೆ ಬಿಸಿಯೂಟ ಬಡಿಸುತ್ತಿರುವ ಅವರಿಗೆ ಗೌರವಧನ ಹೆಚ್ಚಳ ಮಾಡುವ ಕುರಿತು ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎರಡು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆದರೂ 1.17 ಲಕ್ಷ ಬಿಸಿಯೂಟ ತಯಾರಕರ ಮನವಿಯನ್ನು ಕಡೆಗಣಿಸಿ ರುವುದು ಖಂಡನೀಯ’ ಎಂದರು.

‘ಬರಪೀಡಿತ ಜಿಲ್ಲೆಗಳಲ್ಲಿ ಬೇಸಿಗೆ ರಜಾ ದಿನಗಳಲ್ಲೂ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡುತ್ತಿ ರುವುದು ಸ್ವಾಗತಾರ್ಹ. ಅವರಿಗೆ ಬಿಸಿ ಯೂಟ ಬಡಿಸುವ ಅಡುಗೆಯವರು ಮಾತ್ರ ಸೌಲಭ್ಯ ವಂಚಿತರಾಗಿದ್ದಾರೆ. ಕನಿಷ್ಠ ಎರಡು ತಿಂಗಳ ಗೌರವಧನವ ನ್ನಾದರೂ ನೀಡಲು ಕ್ರಮ ಕೈಗೊಳ್ಳ ಬೇಕು’ ಎಂದು ಅವರು ಒತ್ತಾಯಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ‘ಅಂತರರಾಷ್ಟ್ರೀಯ ಮಹಿಳಾ ದಿನಾ ಚರಣೆ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಬಿಸಿಯೂಟ ತಯಾರಕರಿಗೂ ಪಿಎಫ್, ಇಎಸ್‌ಐ ಸೌಲಭ್ಯ ನೀಡುವುದಾಗಿ ಹೇಳಿ ದ್ದರು. ಈವರೆಗೆ ಆದೇಶವೇ ಹೊರ ಬಿದ್ದಿಲ್ಲ. ಅವರು ಸುಳ್ಳು ಹೇಳಿ ದ್ದಾರೆ. ಭರವಸೆ ನೀಡಿದ್ದ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಎಐಯುಟಿಸಿ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದರು.ಒಕ್ಕೂಟದ ಖಜಾಂಚಿ ರುದ್ರಮ್ಮ ಬೆಳಲಗೆರೆ, ಸರೋಜಾ, ಬೊಮ್ಮಕ್ಕ, ಜಯಮ್ಮ, ಜ್ಯೋತಿಲಕ್ಷ್ಮಿ, ಪ್ರಮೀಳಾ, ಪುಷ್ಪಾ, ಕಣಮಕ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT