ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದ್ವೆ ದಿಬ್ಬಣ’ಕ್ಕೆ ಯುಗಳ ಗೀತ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಮದ್ವೆ ದಿಬ್ಬಣ’ ಚಿತ್ರಕ್ಕಾಗಿ ನಾಗೇಶ್ ಉಜ್ಜಿನಿ ಬರೆದಿರುವ ‘ಜೋಡಿ ನಂಗೆ ಹುಡುಗಿ ನೀನು, ಮಾಡೇ ಬಿಟ್ಟೆ ಮೋಡಿಯಾ’ ಎಂಬ ಹಾಡಿನ ಚಿತ್ರೀಕರಣ ನಡೆದಿದೆ. ಶಿವರಾಜ್ ಕೆ.ಆರ್.ಪೇಟೆ, ಅಭಿಷೇಕ್, ಸೋನಾಲ್ ಅಭಿನಯಿಸಿದ ಈ ಹಾಡಿಗೆ ಸ್ಟಾರ್ ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಬಾ.ನಾ. ರವಿ ನಿರ್ಮಿಸುತ್ತಿರುವ ಈ ಚಿತ್ರದ ನಿರ್ದೇಶಕರು ಎಸ್. ಉಮೇಶ್.

ಈವರೆಗೆ ಶೇಕಡ 80ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಚಂದ್ರು ಬೆಳವಂಗಲ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತ ಇದೆ. ರವಿ ಕಿರಣ್, ಚಂದ್ರಕಲಾ ಮೋಹನ್ ತಾರಾಗಣದಲ್ಲಿದ್ದಾರೆ.

ಕಿರುಚಿತ್ರಗಳಿಗೂ ‘ಸೈಮಾ’ ಪ್ರಶಸ್ತಿ
ವ್ಯಾಪಾರಿ ಚಿತ್ರಗಳಿಗೆ ಮೀಸಲಾಗಿದ್ದ ‘ಸೈಮಾ ಪ್ರಶಸ್ತಿ’ಗಳನ್ನು (ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ) ಕಿರುಚಿತ್ರಗಳಿಗೂ ವಿಸ್ತರಿಸಲಾಗಿದೆ. ಅಂತರ್ಜಾಲ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ಕಿರುಚಿತ್ರ ತಯಾರಿಸುತ್ತಿರುವ ಯುವಪ್ರತಿಭೆಗಳನ್ನು ಗುರ್ತಿಸುವ ಸಲುವಾಗಿ ‘ಸೈಮಾ’ ಸ್ಪರ್ಧೆಗಳಲ್ಲಿ ಕಿರುಚಿತ್ರಗಳನ್ನೂ ಸೇರಿಸಲಾಗಿದೆ. ವಿಜೇತರಿಗೆ ವ್ಯಾಪಾರಿ ಸಿನಿಮಾಗಳಲ್ಲಿ ಅವಕಾಶ ಕೊಡಿಸಲಾಗುವುದು ಎಂದು ‘ಸೈಮಾ’ ಹೇಳಿದೆ.

ಕನ್ನಡ, ಮಲಯಾಳಂ, ತೆಲುಗು, ತಮಿಳು ಕಿರುಚಿತ್ರಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿದೆ. 2015 ಮತ್ತು 2016ನೇ ಸಾಲಿನಲ್ಲಿ ಅಂತರ್ಜಾಲದ ಯಾವುದೇ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಲಾದ ಕಿರುಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಜಾಲತಾಣದಲ್ಲಿ ಹೆಚ್ಚು ನೋಡಿಸಿಕೊಂಡ ಮತ್ತು ವೀಕ್ಷಕರಿಂದ ಪಡೆದ ಪ್ರತಿಕ್ರಿಯೆಗಳನ್ನು ಆಧರಿಸಿ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ.

ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ನಟಿ, ಅತ್ಯುತ್ತಮ ಪೋಷಕ ನಟ, ಪೋಷಕ ನಟಿ, ಅತ್ಯುತ್ತಮ ಹಾಸ್ಯಕಲಾವಿದ ಮತ್ತು ಅತ್ಯುತ್ತಮ ಸಂಗೀತ ಎಂಬ ಎಂಟು ಪ್ರಕಾರಗಳಿವೆ. ಹೆಚ್ಚಿನ ಮಾಹಿತಿಗಾಗಿ +91 9620046844 (ಮಂಜುನಾಥ ಟಿ.ಎ.) ಸಂಖ್ಯೆಯನ್ನು ಸಂಪರ್ಕಿಸಬಹುದು.

‘ಗೌಡ್ರು ಹೋಟೆಲ್’ಗೆ ಚಾಲನೆ
ಪಿ. ಕುಮಾರ್ ನಿರ್ದೇಶನದ ‘ಗೌಡ್ರು ಹೋಟೆಲ್’ ಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಇದು ಮಲಯಾಳಂನ ‘ಉಸ್ತಾದ್ ಹೋಟೆಲ್’ ಚಿತ್ರದ ಕನ್ನಡ ಅವತರಣಿಕೆ. ಸತೀಶ್ ರೆಡ್ಡಿ, ರಮೇಶ್ ಶಿವ, ಸತ್ಯನ್.ಎಸ್.ಪಿ. ನಿರ್ಮಾಪಕರು.

ಎಂಜಿನಿಯರಿಂಗ್ ಓದು ಮುಗಿಸಿರುವ ರಚನ್ ಚಂದ್ರ ಚಿತ್ರದ ನಾಯಕ. ವೇದಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಕಾಶ್‌ ರೈ ತಾತನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕವಿರಾಜ್ ಗೀತರಚನೆ, ಯುವನ್ ಶಂಕರ್ ರಾಜ ಸಂಗೀತ, ಶಿವ ಛಾಯಗ್ರಾಹಣ, ಹರ್ಷ ಸಂಕಲನ ಇರಲಿದೆ. ಕುಂದಾಪುರ, ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT