ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಕ್ಸ್‌ ವೆಲ್‌ ಬಳಗಕ್ಕೆ ತವರಿನಲ್ಲಿ ಮತ್ತೆ ನಿರಾಸೆ: ಬಟ್ಲರ್‌–ರಾಣಾ ಅಬ್ಬರಕ್ಕೆ ಬೆಚ್ಚಿದ ಕಿಂಗ್ಸ್

Last Updated 21 ಏಪ್ರಿಲ್ 2017, 4:33 IST
ಅಕ್ಷರ ಗಾತ್ರ

ಇಂದೋರ್‌: ಆರಂಭಿಕ ಆಟಗಾರ ಜಾಸ್‌ ಬಟ್ಲರ್‌ (77; 37ಎ, 7ಬೌಂ, 5ಸಿ) ಮತ್ತು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಿತೀಶ್‌ ರಾಣಾ (ಔಟಾಗದೆ 62; 34ಎ, 7ಸಿ) ಗುರುವಾರ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಬೌಲರ್‌ಗಳಿಗೆ ಸಿಂಹಸ್ವಪ್ನರಾದರು.

ಇವರ ಅಬ್ಬರದ ಅರ್ಧಶತಕಗಳ ಬಲದಿಂದ ಎರಡು ಬಾರಿಯ ಚಾಂಪಿ ಯನ್‌ ಮುಂಬೈ ಇಂಡಿಯನ್ಸ್‌ ತಂಡ  ಐಪಿಎಲ್‌ ಹತ್ತನೇ ಆವೃತ್ತಿಯ ಪಂದ್ಯ
ದಲ್ಲಿ  8 ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಹೀಗಾಗಿ ಕಿಂಗ್ಸ್‌ ತಂಡದ  ಹಾಶಿಮ್‌ ಆಮ್ಲಾ (ಔಟಾಗದೆ 104; 60ಎ, 8ಬೌಂ, 6ಸಿ) ಟಿ–20 ಮಾದರಿ ಯಲ್ಲಿ ಸಿಡಿಸಿದ ಚೊಚ್ಚಲ ಶತಕ ವ್ಯರ್ಥವಾಯಿತು.

ಮೊದಲು ಬ್ಯಾಟ್‌ ಮಾಡಿದ  ಪಂಜಾಬ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 198ರನ್‌ ಗಳಿಸಿತು. ಈ ಗುರಿ ರೋಹಿತ್‌ ಪಡೆಗೆ ಸವಾಲೆನಿಸಲೇ ಇಲ್ಲ. ಈ ತಂಡ ಇನ್ನೂ 27 ಎಸೆತಗಳು ಬಾಕಿ ಇರುವಂತೆ 2 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ಅಬ್ಬರದ ಆರಂಭ: ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಎಡಗೈ ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ (37; 18ಎ, 4ಬೌಂ, 2ಸಿ) ಮತ್ತು ಬಟ್ಲರ್‌ ಅಬ್ಬರದ ಆರಂಭ ನೀಡಿದರು.  ಕಿಂಗ್ಸ್‌ ತಂಡದ ದುರ್ಬಲ ಬೌಲಿಂಗ್‌ನ ಲಾಭ ಎತ್ತಿಕೊಂಡ ಇವರು ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು. ಹೀಗಾಗಿ  ರೋಹಿತ್‌ ಬಳಗದ ಖಾತೆಗೆ 35 ಎಸೆತಗಳಲ್ಲಿ 81  ರನ್‌ಗಳು ಸೇರಿದವು. ತಾವೆದುರಿಸಿದ ನಾಲ್ಕನೇ ಎಸೆತ ವನ್ನು ಸಿಕ್ಸರ್‌ಗಟ್ಟಿದ ಬಟ್ಲರ್‌, ಸಂದೀಪ್‌ ಶರ್ಮಾ ಹಾಕಿದ ಮೂರನೇ ಓವರ್‌ನಲ್ಲಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ ಸಿಡಿಸಿ ಮಿಂಚಿದರು.

ಇಷ್ಟಕ್ಕೆ ಅವರ ಅಬ್ಬರ ತಗ್ಗಲಿಲ್ಲ. ಇಶಾಂತ್‌ ಶರ್ಮಾ ಮತ್ತು ಮೋಹಿತ್‌ ಶರ್ಮಾ ಅವರ ಓವರ್‌ಗಳಲ್ಲೂ ಲೀಲಾ ಜಾಲವಾಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ ಅವರು 24ನೇ ಎಸೆತದಲ್ಲಿ  ಅರ್ಧಶತಕ ಪೂರೈಸಿದರು.

ಆರನೇ ಓವರ್‌ನಲ್ಲಿ ಪಾರ್ಥಿವ್‌, ಮಾರ್ಕಸ್‌ ಸ್ಟೊಯಿನಿಸ್‌ಗೆ ವಿಕೆಟ್‌ ಒಪ್ಪಿ ಸಿದ ಬಳಿಕ ಮೈದಾನಕ್ಕೆ ಬಂದ ಎಡಗೈ ಬ್ಯಾಟ್ಸ್‌ಮನ್‌ ನಿತೀಶ್‌ ರಾಣಾ ಮತ್ತೊಮ್ಮೆ ಮೋಡಿ ಮಾಡಿದರು.

ಈ ಬಾರಿಯ ಟೂರ್ನಿಯಲ್ಲಿ ಎರಡು  ಅರ್ಧಶತಕ ಗಳಿಸಿ ಮಿಂಚಿದ್ದ ಅವರು ಹೋಳ್ಕರ್‌ ಅಂಗಳದಲ್ಲೂ ಆತಿಥೇಯ ಬೌಲರ್‌ಗಳನ್ನು ಕಾಡಿದರು.
ಸ್ವಪ್ನಿಲ್‌ ಸಿಂಗ್‌ ಹಾಕಿದ 12ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ ಬಾರಿಸಿ ಅಭಿಮಾನಿಗಳ ಖುಷಿ ಹೆಚ್ಚಿಸಿದ ಅವರು ಆ ನಂತರವೂ ಗರ್ಜಿಸಿದರು.
14ನೇ ಓವರ್‌ನಲ್ಲಿ ಬಟ್ಲರ್‌ ಔಟಾ ದಾಗ ಮುಂಬೈ ಗೆಲುವಿಗೆ 42 ಎಸೆತಗಳಲ್ಲಿ 33ರನ್‌ಗಳು ಬೇಕಿದ್ದವು. ರಾಣಾ ಮತ್ತು ಹಾರ್ದಿಕ್‌ ಪಾಂಡ್ಯ (ಔಟಾಗದೆ 15; 4ಎ, 2ಬೌಂ, 1ಸಿ) ಅಬ್ಬರದ ಆಟ ಆಡಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

ಭದ್ರ ಅಡಿಪಾಯ: ಬ್ಯಾಟಿಂಗ್‌ ಆರಂಭಿಸಿದ ಕಿಂಗ್ಸ್‌ ಇಲೆವೆನ್‌ಗೆ ಶಾನ್‌ ಮಾರ್ಷ್‌(26; 21ಎ, 5ಬೌಂ) ಮತ್ತು ಆಮ್ಲಾ ಭದ್ರ ಅಡಿಪಾಯ ಹಾಕಿ ಕೊಟ್ಟ ರು. ಈ ಜೋಡಿ 46ರನ್‌ ಕಲೆಹಾಕಿತು. 

ನಿಧಾನ ಆರಂಭ, ಬಳಿಕ ಅಬ್ಬರ: ಆರಂಭದಲ್ಲಿ ನಿಧಾನವಾಗಿ ರನ್‌ ಗಳಿಸಿದ ಆಮ್ಲಾ ಆಟಕ್ಕೆ ಕುದುರಿಕೊಂಡ ನಂತರ ಅಂಗಳದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದರು. ಕೃಣಾಲ್‌ ಪಾಂಡ್ಯ ಬೌಲ್‌ ಮಾಡಿದ 11ನೇ ಓವರ್‌ನ ಎರ ಡನೇ ಎಸೆತದಲ್ಲಿ ಸಿಕ್ಸರ್‌ ಗಳಿಸಿದ ಅವರು ಮಾಲಿಂಗ ಹಾಕಿದ 12ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿ ಅರ್ಧ ಶತಕ ಪೂರೈಸಿದರು. ಇದಕ್ಕಾಗಿ 34 ಎಸೆತ ತೆಗೆದುಕೊಂಡರು.

ಜುಗಲ್‌ ಬಂದಿ: ವೃದ್ಧಿಮಾನ್‌ ಸಹಾ (11) ಔಟಾದ ಬಳಿಕ ಬಂದ ನಾಯಕ  ಮ್ಯಾಕ್ಸ್‌ವೆಲ್‌ (40; 18ಎ, 4ಬೌಂ, 3ಸಿ) ಜೊತೆ ಸೇರಿದ ಆಮ್ಲಾ ಸುಂದರ ಇನಿಂಗ್ಸ್‌ ಕಟ್ಟಿದರು. ಮುಂಬೈ ಬೌಲರ್‌ಗಳನ್ನು ದಿಟ್ಟತನ ದಿಂದ ಎದುರಿಸಿದ ಈ ಜೋಡಿ  ರನ್‌ ಗಳಿಕೆಗೆ ವೇಗ ತುಂಬಿತು.17ನೇ ಓವರ್‌ನಲ್ಲಿ ದಾಳಿಗಿಳಿದ  ಜಸ್‌ ಪ್ರೀತ್‌ ಬೂಮ್ರಾ, ಮ್ಯಾಕ್ಸ್‌ವೆಲ್‌ ಅಬ್ಬರಕ್ಕೆ ಕಡಿವಾಣ ಹಾಕಿದರು.ಇಷ್ಟಾದರೂ ಆಮ್ಲಾ ಮಾತ್ರ ನಿರಾತಂಕವಾಗಿ ಬ್ಯಾಟ್‌ ಬೀಸಿದರು. 20ನೇ ಓವರ್‌ನಲ್ಲಿ  ಸತತ ಎರಡು ಸಿಕ್ಸರ್‌ ಸಿಡಿಸಿ ಮಾಲಿಂಗ ಅವರ ಬೆವರಿಳಿಸಿದ ಅವರು ಟಿ–20 ಮಾದರಿ ಯಲ್ಲಿ ಚೊಚ್ಚಲ ಶತಕ ದಾಖಲಿಸಿದರು.

**

12 ಎಸೆತ 50 ರನ್‌ !
ಕಿಂಗ್ಸ್‌ ಇಲೆವೆನ್‌ ತಂಡ ಮುಂಬೈ ವಿರುದ್ಧ ಕೇವಲ ಎರಡು ಓವರ್‌ಗಳಲ್ಲಿ  50ರನ್‌ ಗಳಿಸಿ ಮಿಂಚಿತು. ಮಿಷೆಲ್‌ ಮೆಕ್‌ಲೆನಾಗನ್‌  ಹಾಕಿದ 15ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್‌ ಮೂರು ಸಿಕ್ಸರ್‌ ಮತ್ತು ಎರಡು ಬೌಂಡರಿ ಸೇರಿದಂತೆ 28ರನ್‌ ಹೆಕ್ಕಿದರೆ, ಲಸಿತ್‌ ಮಾಲಿಂಗ ಬೌಲ್‌ ಮಾಡಿದ 16ನೇ ಓವರ್‌ನಲ್ಲಿ ಆಮ್ಲಾ ಎರಡು ಮನ ಮೋಹಕ ಸಿಕ್ಸರ್‌ ಮತ್ತು ಬೌಂಡರಿ ಸಹಿತ 22 ರನ್‌ ಕಲೆಹಾಕಿದರು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT