ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುಂದುವೆಚ್ಚ ಕಡಿವಾಣಕ್ಕೆ ಸಾಮೂಹಿಕ ವಿವಾಹ’

Last Updated 21 ಏಪ್ರಿಲ್ 2017, 5:47 IST
ಅಕ್ಷರ ಗಾತ್ರ

ಕೆಂಭಾವಿ: ‘ಸಾಮೂಹಿಕ ವಿವಾಹ ಆಯೋಜನೆಯಿಂದ ಸಮಾಜದಲ್ಲಿ ಸೌಹಾರ್ದ ಗಟ್ಟಿಗೊಂಡು ಮಾನವೀಯ ಮೌಲ್ಯ ವೃದ್ಧಿಸುತ್ತದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳಿಗೆ ಒತ್ತು ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಸಲಹೆ ನೀಡಿದರು.ಸಮೀಪದ ನಗನೂರು ಗ್ರಾಮದಲ್ಲಿ ಶರಣಬಸವೇಶ್ವರ 170ನೇ ಜಾತ್ರಾ ಮಹೋತ್ಸವ ಹಾಗೂ ಪುರಾಣ ಮಂಗಲದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಠ ಮಾನ್ಯಗಳು ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ಬಡವರ ಸಮಸ್ಯೆ ಪರಿಹರಿಸುತ್ತಿವೆ.  ಬಿಸಿಲ ನಾಡಿನಲ್ಲಿ ಬರಗಾಲವಿದ್ದರೂ  205 ಜೋಡಿಗಳ ಮದುವೆ ಮಾಡಿಕೊಡುತ್ತಿ ರುವ ಮಠದ ಶರಣಪ್ಪ ಶರಣರ ಕೊಡುಗೆ ಅಪಾರವಾಗಿದೆ. ಮಠಕ್ಕೆ ನೂತನ ರಥ ನಿರ್ಮಾಣಕ್ಕೆ ಸರ್ಕಾರ ದಿಂದ ಅನುದಾನ ಕೊಡಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುಪಾಟೀಲ ಶಿರವಾಳ ಮಾತನಾಡಿ, ‘ಸಾಮೂಹಿಕ ವಿವಾಹ ನಡೆಸುವು ದರಿಂದ  ಜಾತಿ ತಾರತಮ್ಯ ದೂರ ಮಾಡಿ ಸಮಾನತೆಯ ಬೀಜ ಬಿತ್ತಲು ಸಹಕಾರಿ ಯಾಗುತ್ತದೆ. ನಗನೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಕಳೆದ ಮೂರು ವರ್ಷಗಳಿಂದ ಶ್ರಮಿಸುತ್ತಿದ್ದೇನೆ. ಅಂತಹುದರಲ್ಲಿ ಸಾವಿರಾರು ಜನರನ್ನು ಸೇರಿಸಿ ಇಂತಹ ದೊಡ್ಡ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸುತ್ತಿರುವುದು ಪವಾ ಡವೆ ಸರಿ. ಪತಿ- ಪತ್ನಿ ತಮ್ಮ ಜೀವನದಲ್ಲಿ  ಸುಖ- ದುಃಖವನ್ನು ಸಮಾನವಾಗಿ ಸ್ವೀಕರಿಸಿ ಸುಖ ಜೀವನ ಸಾಗಿಸಬೇಕು’ ಎಂದು ಹೇಳಿದರು.

ನಗನೂರು ಮಠದ ಪೀಠಾಧಿಪತಿ ಶರಣಪ್ಪ ಶರಣರು ನೇತೃತ್ವ ವಹಿಸಿದ್ದರು. ಕಡಗಂಚಿ ಶಾಂತಲಿಂಗೇಶ್ವರ ಕಟ್ಟಿಮಠದ ವೀರಭದ್ರ ಶಿವಾಚಾರ್ಯರು, ಕಲಕೇರಿ ಹಿರೇಮಠದ ಮರುಳರಾಧ್ಯ ಶಿವಾಚಾರ್ಯರು, ನಗನೂರು ಸೂಗೂ ರೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.ಗಂವಾರ ಮಠದ ಸೋಪನಾಥ ಸ್ವಾಮೀಜಿ, ಚಾಮನಾಳ ಸಿದ್ಧಲಿಂಗ ಮಠದ ಬಸಯ್ಯ ಸ್ವಾಮೀಜಿ, ನಗನೂರಿನ ಖಡಪ್ಪ ತಾತಾ, ವಿಧಾನ ಪರಿಷತ್ ಸದಸ್ಯ ಬಿ. ಜಿ. ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ವೇತಾ ಅಪ್ಪಾಗೋಳ,ನೀಲಮ್ಮ ದ್ಯಾವಣಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತಣ್ಣ ಚನ್ನೂರ, ಮಾಜಿ ಶಾಸಕ ಅಮಾತ್ಯಪ್ಪ ಕಂದಕೂರ, ನಿಂಗಣ್ಣ ದೇಸಾಯಿ, ರಾಜಶೇಖರ ಗೂಗಲ್, ಬಾಪುಗೌಡ ದರ್ಶನಾಪುರ, ಶಿವಮಾಂತ ಚಂದಾಪುರ, ಹಳ್ಳೆಪ್ಪ ಹವಾಲ್ದಾರ,ಶರಣಪ್ಪ ದೇಶಪಾಂಡೆ, ಭೋಜಪ್ಪ ಗೌಡ ಪೊಲೀಸ ಪಾಟೀಲ, ಶರಣಬಸವ ಪಟ್ಟಣಶೆಟ್ಟಿ, ಬಸನಗೌಡ ಪಾಟೀಲ ಅಮ ಲಿಹಾಳ ಉಪಸ್ಥಿತರಿದ್ದರು.ಶಂಕ್ರಣ್ಣ ವಣಿಕ್ಯಾಳ ಪ್ರಾಸ್ತಾವಿಕ ಮಾತನಾಡಿದರು, ಬಸಣ್ಣ ಬುದೂರ ಸ್ವಾಗತಿಸಿದರು, ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT