ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ವೀಕ್ಷಣೆಗೆ ‘ಫ್ಯಾನ್‌ ಪಾರ್ಕ್‌’ ಆಯೋಜನೆ

Last Updated 21 ಏಪ್ರಿಲ್ 2017, 7:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಐಪಿಎಲ್‌ ಕ್ರಿಕೆಟ್‌ ಅಭಿಮಾನಿಗಳಿಗಾಗಿ ಇಲ್ಲಿನ ‘ಜಿಮ್ಖಾನಾ’ ಮೈದಾನದಲ್ಲಿ ಇದೇ 22 ಮತ್ತು 23ರಂದು ‘ಫ್ಯಾನ್‌ ಪಾರ್ಕ್‌’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೆಎಸ್‌ಸಿಎ ಧಾರವಾಡ ವಲಯ ಸಂಚಾಲಕ ಬಾಬಾ ಭೂಸದ ತಿಳಿಸಿದರು.‘ಫ್ಯಾನ್‌ ಪಾರ್ಕ್‌’ ಕಾರ್ಯಕ್ರಮದಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ 32X18 ಅಡಿ ಅಳತೆಯ ಡಿಜಿಟಲ್‌ ಪರದೆ ಅಳವಡಿಸಲಾಗುವುದು ಹಾಗೂ ಅಭಿಮಾನಿಗಳಿಗಾಗಿ ವಿವಿಧ ಮನರಂಜನೆ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಫ್ಯಾನ್‌ ಪಾರ್ಕ್‌’ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರಿಕೆಟ್‌ ಅಭಿಮಾನಿಗಳಿಗೆ  ಮುಕ್ತ ಮತ್ತು ಉಚಿತ ಪ್ರವೇಶವಿದೆ ಎಂದು ತಿಳಿಸಿದರು.ಜಿಮ್ಖಾನಾ ಮೈದಾನದಲ್ಲಿ ಅಳವಡಿಸುವ ಬೃಹತ್‌ ಡಿಜಿಟಲ್‌  ಪರದೆಯ ಮೇಲೆ ಐಪಿಎಲ್‌ ಕ್ರಿಕೆಟ್‌ ಪಂದ್ಯ ನೇರ ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿ ಸಂಗೀತ, ನೃತ್ಯ ಪ್ರದರ್ಶನ ಇರಲಿದ್ದು, ಕ್ರೀಡಾಂಗಣದ ನೈಜತೆ ಕಟ್ಟಿಕೊಡಲಾಗುವುದು ಎಂದರು.

ಕ್ರಿಕೆಟ್‌ ವೀಕ್ಷಿಸಲು ಬರುವ ಪ್ರತಿಯೊಬ್ಬ ಅಭಿಮಾನಿಗಳಿಗೆ ಕೂಪನ್‌ ನೀಡಲಾಗುವುದು, ಇದರಲ್ಲಿ ಪ್ರತಿದಿನ ನಾಲ್ಕು ಅದೃಷ್ಟಸಾಲಿ ಪ್ರೇಕ್ಷಕರನ್ನು ‘ಲಕ್ಕಿಡಿಪ್‌’ ಮೂಲಕ ಆಯ್ಕೆ ಮಾಡಿ, ಅವರಿಗೆ ವಿವೋ ಸ್ಮಾರ್ಟ್‌ ಪೋನ್‌ ಹಾಗೂ ಒಂದು ಕ್ರಿಕೆಟ್‌ ಬ್ಯಾಟ್‌ ನೀಡಲಾಗುವುದು ಎಂದು ತಿಳಿಸಿದರು.ಇದೇ 22ರಂದು ಸಂಜೆ 4ಕ್ಕೆ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾತ್ರಿ 8ಕ್ಕೆ ಮುಂಬೈ ಇಂಡಿಯನ್ಸ್‌ ಮತ್ತು ದೆಲ್ಲಿ ಡೇರ್‌ಡೆವಿಲ್ಸ್, 23ರಂದು ಸಂಜೆ 4ಕ್ಕೆ ಗುಜರಾತ್‌ ಲಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್‌ ಹಾಗೂ ರಾತ್ರಿ 8ಕ್ಕೆ ರಾಯಲ್‌ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್‌ರೈಡರ್ಸ್ ತಂಡಗಳ ನಡುವಿನ ಹಣಾಹಣಿ ವೀಕ್ಷಿಸಬಹುದಾಗಿದೆ ಎಂದರು.

ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ವೀರಣ್ಣ ಸವಡಿ, ಫ್ಯಾನ್‌ ಪಾರ್ಕ್‌ ಸಂಯೋಜಕ ಆದಿತ್ಯ ಮತ್ತು ಕೆಎಸ್‌ಸಿಎ ಧಾರವಾಡ ವಲಯ ವ್ಯವಸ್ಥಾಪಕ ಮನೀಶ ಠಕ್ಕರ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT