ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಗೊರಕೆ ಹೊಡೆಯುತ್ತೀರಾ?

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಗೊರಕೆ ಎಂಬುದು ಒಂದು ಸ್ಥಿತಿಯಲ್ಲ; ಅದೊಂದು ಮುನ್ಸೂಚನೆ. ನೀವು ಗೊರಕೆ ಹೊಡೆಯುತ್ತೀರಾದರೆ – ಅದು ಉಸಿರಾಟ ವ್ಯವಸ್ಥೆಯಲ್ಲಿ ಏನೋ ತೊಡಕಿದೆ (ಮೂರು ಗಂಟಲಿನ ಮೇಲ್ಭಾಗ ಅಥವಾ ಕೆಳಭಾಗ) ಎನ್ನುವುದರ ಸೂಚನೆ. ಬಾಯಿ ಅಥವಾ ಮೂಗಿನ ಮೂಲಕ ಉಸಿರಾಟಮಾರ್ಗದಲ್ಲಿ ಏನಾದರೂ ತೊಡಕು ಇದ್ದರೆ ಶಬ್ದ ಹೊರಬರುತ್ತದೆ – ಆ ಶಬ್ದವೇ ಗೊರಕೆ!

ಪುರುಷರಲ್ಲಿ 40 ವರ್ಷ ದಾಟಿದ ಬಳಿಕ ಗೊರಕೆ ಸಾಮಾನ್ಯ. ಹಾಗೆಂದು ಇದು ಪುರುಷರ, ಅದರಲ್ಲೂ ವಯಸ್ಕ ಪುರುಷರ ಸಮಸ್ಯೆ ಎಂದೇನಲ್ಲ. ಮಹಿಳೆಯರು ಹಾಗೂ ಮಕ್ಕಳಲ್ಲಿಯೂ ಗೊರಕೆ ಕಾಣಿಸುತ್ತದೆ. ಬಹುತೇಕ ಪ್ರಕರಣಗಳಲ್ಲಿ ವಯಸ್ಸು ಹೆಚ್ಚಾದಂತೆ ಗೊರಕೆ ಕಾಣಿಸಿಕೊಳ್ಳುತ್ತದೆ. ತೂಕ ಹೆಚ್ಚಿರುವವರಲ್ಲಿ ಈ ಸಮಸ್ಯೆ ಬಿಗಡಾಯಿಸುತ್ತದೆ.

ನಿದ್ರಾಹೀನತೆ ಸ್ಥಿತಿ
ನಿದ್ರೆಗೆ ಸಂಬಂಧಿಸಿದಂತೆ ನಿದ್ರಾಹೀನತೆ ಒಂದು ಗಂಭೀರ ಸಮಸ್ಯೆ. ಮಲಗಿದ ಸಂದರ್ಭದಲ್ಲಿ ಉಸಿರಾಟ ಪ್ರಕ್ರಿಯೆ ಮಂದಗತಿಗೆ ತಲುಪಿದಾಗ, ವಾಯುಮಾರ್ಗದಲ್ಲಿ ಅಡಚಣೆ ಉಂಟಾಗುತ್ತದೆ. ಅಂಥ ಸಂದರ್ಭದಲ್ಲಿ ಸೀಮಿತ ಗಾಳಿಯಾಡುವಿಕೆಗೆ ಅವಕಾಶವಿದ್ದು, ಸ್ವಲ್ಪ ಪ್ರಮಾಣದ ಗಾಳಿ ಜಠರಕ್ಕೆ ಹೋಗುತ್ತದೆ. ಹೀಗಾದಾಗ ಗೊರಕೆ ಬರಲಿದ್ದು, ಉಸಿರಾಟದಲ್ಲಿ ಸಮಸ್ಯೆ ಕಾಡಲಿದೆ. ನಿಮ್ಮ ಮೆದುಳು  ದೇಹವು ಆಕ್ಸಿಜನರ್ ಕೊರತೆಯಿಂದ ಬಳಲಿದ್ದು, ಹಲವು ಬಾರಿ ನಿದ್ದೆಯಿಂದ ಏಳುವ ಸ್ಥಿತಿ ಬರಲಿದೆ.

ಸ್ಲೀಪ್ ಅರೆನಾ: ತಿಳಿಯುವುದು ಹೇಗೆ?
ಗೊರಕೆಯು ‘ಸ್ಲೀಪ್ ಅರೆನಾ’ ಸಮಸ್ಯೆಯ ಸೂಚನೆ. ನಿಶ್ಶಬ್ದ ಉಸಿರಾಟದ ಜೊತೆಗೆ, ಸಣ್ಣ ಶಬ್ದ ಬರುವ ಮೂಲಕ ಇದು ಕಾಡಲಿದೆ. ಸ್ಲೀಪ್ ಅರೆನಾದಿಂದ ಬಳಲುತ್ತಿರುವ ಜನರು ಗಂಭೀರವಾದ ಸಮಸ್ಯೆಯಿಂದ ಬಳಲುತ್ತಾರೆ.

‘ಸ್ಲೀಪ್ ಅರೆನಾ’ದ ಲಕ್ಷಣಗಳು:
* ದೊಡ್ಡ ಪ್ರಮಾಣದಲ್ಲಿ ನಿರಂತರವಾಗಿ ಗೊರಕೆ ಇರುವುದು
* ಉಸಿರಾಟದ ನಡುವೆ ಅಲ್ಲಲ್ಲಿ ಅಲ್ಪವಿರಾಮ * ಚೋಕಿಂಗ್ ಶಬ್ದ
* ಹಗಲು ಹೊತ್ತು ನಿದ್ರೆ ಆವರಿಸುವುದು
* ಹೊಸತನ ನೀಡದ ನಿದ್ರೆಯಸ್ಥಿತಿ
* ಬೆಳಗಿನ ಹೊತ್ತು ತಲೆನೋಯುವುದು 
* ರಾತ್ರಿ ಹೊತ್ತು ನಡೆದಾಡುವುದು – ಶೌಚಾಲಯಕ್ಕೆ ಹೋಗುವುದು
* ನೆನಪಿನಶಕ್ತಿ ಕಳೆದುಕೊಳ್ಳುವಿಕೆ
* ಲೈಂಗಿಕಾಸಕ್ತಿ ಕುಂದುವುದು  ಇತ್ಯಾದಿ.

ನಿದ್ರೆಯ ಸಮಸ್ಯೆ
ಅನೇಕ ಜನರು ಕಡಿಮೆ ಗುಣಮಟ್ಟದ ನಿದ್ರೆಯ ಸಮಸ್ಯೆ ಎದುರಿಸುತ್ತಿದ್ದಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಇರುವುದು, ಹಗಲಿನಲ್ಲಿ ಮಾಡುವ ಕೆಲಸದ ಮೇಲೆ ಪರಿಣಾಮ ಬೀರಲಿದೆ. ಈ ಸಮಸ್ಯೆಯಿಂದ ಬಳಲುವವರು ಮಾನಸಿಕತಜ್ಞರನ್ನು ಭೇಟಿಯಾಗುವ ಸಂದರ್ಭವೂ ಬರಬಹುದು.
ನಿದ್ರಾಹೀನತೆಯ ಕಾರಣದಿಂದಾಗಿ – ಅಧಿಕ ರಕ್ತದೊತ್ತಡ, ಮಾನಸಿಕ ಸಮಸ್ಯೆಗಳು, ರಕ್ತನಾಳದ ಸಮಸ್ಯೆಗಳಿಂದ ಹಿಡಿದು, ಮಧುಮೇಹ ಹಾಗೂ ಹೃದಯದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.

ಯಾರಿಗೆ ಇಂಥ ಸಮಸ್ಯೆ ಕಾಡುತ್ತದೆ?
* ಅಧಿಕ ತೂಕದವರಿಗೆ ಸಮಸ್ಯೆ ಹೆಚ್ಚು. ತೂಕ ಹೆಚ್ಚಿದಂತೆ ಆರೋಗ್ಯದ ಸಮಸ್ಯೆಗಳೂ ಹೆಚ್ಚು ಎನ್ನುವುದನ್ನು ಗಮನಿಸಬೇಕು.

* ದೊಡ್ಡ ಪ್ರಮಾಣದ ಕತ್ತು ಉಳ್ಳವರಿಗೆ ಕೂಡ ತೊಂದರೆ ಹೆಚ್ಚು. ಇಂಥವರಲ್ಲಿ ಉಸಿರಾಟದ ಮಾರ್ಗದಲ್ಲಿ ಅಡಚಣೆ ಉಂಟಾಗುತ್ತದೆ.

* ಕೆಲವೊಂದು ಸ್ಥಿತಿಯ ಟಿಶ್ಯೂಗಳು ನಾಲಿಗೆ ಹೊರಳಲು ಕಾರಣವಾಗಲಿವೆ. ಜೊತೆಗೆ ಅಲರ್ಜಿ, ಡೀವಿಯೆರ್ಟ್‌ಸ್, ನಾಸಲ್ ಸೆಪ್ಟಂ ಸಮಸ್ಯೆಯುಳ್ಳವರಿಗೆ ಕಾಡಬಹುದು.

ಸರಳ ಜೀವನ ಎನ್ನುವ ಮದ್ದು
ದಿನಚರಿಯಲ್ಲಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ‘ಸ್ಲೀಪ್‌ ಅರೆನಾ’ ಸಮಸ್ಯೆಯನ್ನು ತಹಬಂದಿಗೆ ತರಬಹುದಾಗಿದೆ. ಹೆಚ್ಚುವರಿ ತೂಕ ಇಳಿಸಿಕೊಳ್ಳುವುದು, ಇದಕ್ಕಾಗಿ ನಿಯಮಿತ ವ್ಯಾಯಾಮವು ಅಗತ್ಯ.

ಒಂದು ಬದಿಗೆ ಬಾಗಿ ಮಲಗುವ ಅಭ್ಯಾಸ ರೂಢಿಸಿಕೊಳ್ಳುವುದು ಕೂಡ ಮುಖ್ಯ. ಅದೇರೀತಿ, ಆದಷ್ಟು ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಮುಖ್ಯವಾಗಿ ಗೊರಕೆ ಸಮಸ್ಯೆ ಇದ್ದಾಗಿನ ಸ್ಥಿತಿಯಲ್ಲಿ ಹೆಚ್ಚು ನೀರು ಸೇವನೆ ಅಗತ್ಯ. ಧೂಮಪಾನ ತ್ಯಜಿಸುವುದು  ಕೂಡ ಆರೋಗ್ಯಕರ ಜೀವನದ ಲಕ್ಷಣಗಳಲ್ಲೊಂದು. ಧೂಮಪಾನ ಒಳ್ಳೆಯ ನಿದ್ದೆಗೆ ಪೂರಕವಲ್ಲ.

ನಿಮ್ಮ ಸಂಗಾತಿಗೆ ಸಮಸ್ಯೆಯಾಗದೇ ಇದ್ದಲ್ಲಿ ಆಗಾಗ್ಗೆ ಕಾಡುವ ಗೊರಕೆಯ ಸಮಸ್ಯೆ ಅಂಥ ಗಂಭೀರವಾದುದಲ್ಲ. ಆದರೆ, ಆಗಾಗ್ಗೆ ಗೊರಕೆ ಕಾಣಿಸಿಕೊಂಡರೂ, ಇದು ಅನಾರೋಗ್ಯದ ಸೂಚನೆಯೇ ಎನ್ನುವುದನ್ನು ಮರೆಯಬಾರದು. ವೈದ್ಯರ ನೆರವು ಗೊರಕೆಗೆ ಸ್ವಲ್ಪಮಟ್ಟಿಗೆ ಪರಿಹಾರ ನೀಡಬಲ್ಲದು.

ನಾವೇಕೆ ಗೊರಕೆ ಹೊಡೆಯುತ್ತೇವೆ?
ನಮ್ಮ ಉಸಿರಾದ ಮಾರ್ಗದಲ್ಲಿ ಉಂಟಾಗುವ ತೊಂದರೆಯೇ ಗೊರಕೆಗೆ ಕಾರಣ. ಮಲಗಿದಾಗ, ಉಸಿರಾಟದ ಮಾರ್ಗ ಆವರಿಸಿರುವ ‘ಸರ್ಣಣ ಪದರ’ ಸುಸೂತ್ರ ಸ್ಥಿತಿಯಲ್ಲಿ ಇರುತ್ತದೆ. ಇದು, ಗಾಳಿ ಆಡಿದಂತೆ ಅದುರಲಿದ್ದು, ಆಗ ಶಬ್ದ ಹೊರಹೊಮ್ಮಲಿದೆ. ಇದನ್ನೇ ನಾವು ಗೊರಕೆ ಎಂದು ಗುರ್ತಿಸುತ್ತೇವೆ.

ಗೊರಕೆ ಬಗ್ಗೆ ನಾನೇಕೆ ಚಿಂತಿಸಬೇಕು?;
ಉಸಿರಾಟದ ಸಮಸ್ಯೆ ಒಂದು ಸಾಮಾಜಿಕ ಸಮಸ್ಯೆ. ಜನಸಂಖ್ಯೆಯ ಶೇ.25ರಿಂದ 45 ಜನರನ್ನು ಇದು ಬೇರೆ ಬೇರೆ ಪ್ರಮಾಣದಲ್ಲಿ ಬಾಧಿಸುತ್ತಿದೆ.
ಗೊರಕೆಯನ್ನು ಸಾಮಾನ್ಯವಾಗಿ ಒಂದು ರೋಗದ ರೂಪದಲ್ಲಿ ಭಾವಿಸುವವರು ಕಡಿಮೆ. ಹಾಗಾಗಿಯೇ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಕಡಿಮೆ. ಆದರೆ, ಶೇ. 30ರಷ್ಟು ಪ್ರಕರಣಗಳಲ್ಲಿ ಇದು ಗಂಭೀರ ಸಮಸ್ಯೆಯಾಗಿ ಬಾಧಿಸಲಿದೆ. ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತದಂಥ ತೀವ್ರ ಸಮಸ್ಯೆಗಳಿಗೆ ಗೊರಕೆ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT