ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕಕಾರಿ ನಡೆ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ತೈಲ ಮಾರುಕಟ್ಟೆ ಬೆಲೆಗೆ ಅನುಸಾರವಾಗಿ ಇಲ್ಲಿಯೂ ಪ್ರತಿನಿತ್ಯ ತೈಲಬೆಲೆ ಪರಿಷ್ಕರಿಸಲು ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ನಿರ್ಧರಿಸಿರುವುದು ಆತಂಕಕಾರಿ ಬೆಳವಣಿಗೆ. ಕಚ್ಚಾತೈಲದ ಬೆಲೆ ಈಗ ಕಡಿಮೆ ಇರುವುದರಿಂದ ಪೆಟ್ರೋಲ್‌ ಡೀಸೆಲ್‌ ಬೆಲೆಯ ನಿತ್ಯ ಪರಿಷ್ಕರಣೆ ಈಗ ಅಷ್ಟಾಗಿ ಪ್ರಾಭಾವ ಬೀರುವುದಿಲ್ಲ.

ಆದರೆ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳು (OPEC ರಾಷ್ಟ್ರಗಳು) ಕಚ್ಚಾತೈಲದ ಉತ್ಪಾದನೆಯನ್ನು ಅರ್ಧಕ್ಕೆ ಇಳಿಸಲು ಈಗಾಗಲೇ ನಿರ್ಧರಿಸಿವೆ. ಆದ್ದರಿಂದ ಇನ್ನು ಮುಂದೆ ಕಚ್ಚಾ ತೈಲದ ಬೆಲೆ ಹೆಚ್ಚಲಿದೆ. ಈ ವಿಷಯ ತಿಳಿದಿರುವುದರಿಂದಲೇ ಭಾರತೀಯ ತೈಲ ಮಾರಾಟ ಕಂಪೆನಿಗಳು ನಿತ್ಯ ಬೆಲೆ ಪರಿಷ್ಕರಣೆಗೆ ಮುಂದಾಗಿವೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಅಗತ್ಯವಸ್ತುಗಳು. ಸರ್ಕಾರದ ಈ ನಿರ್ಧಾರದ ಹಿಂದೆ ಖಾಸಗಿ ಕಂಪೆನಿಗಳಿಗೆ ಅನುಕೂಲ ಕಲ್ಪಿಸುವ ಹುನ್ನಾರ ಅಡಗಿದೆ. ಬೆಲೆ ಅಧಿಕಗೊಂಡಂತೆಲ್ಲ ಖಾಸಗಿ ಮಾರಾಟಗಾರರು ರಿಯಾಯಿತಿ, ಸರ್ಕಾರಿ ಕಂಪೆನಿಗಳಿಗಿಂತ ಕಡಿಮೆ ದರದ ಆಮಿಷದ ಮೂಲಕ ಗ್ರಾಹಕರನ್ನು ಆಕರ್ಷಿಸಿ, ಸರ್ಕಾರಿ ಮಾರಾಟಗಾರರಿಗೆ ವ್ಯಾಪಾರ ಇಲ್ಲದಂತೆ ಮಾಡುವ ಆತಂಕವಿದೆ. ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಖಾಸಗಿಯವರ ಪ್ರಭಾವದಿಂದ ಸರ್ಕಾರಿ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ.
-ಕೆ.ಎಲ್‌. ಪ್ರಕಾಶ್‌, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT