ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿಯಾಗಲಿ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಸ್ಸಾಂ ಸರ್ಕಾರ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ  ಉದ್ಯೋಗವಿಲ್ಲ (ಪ್ರ.ವಾ.ಏ.೧೦) ಎಂಬ ವಿವೇಕಪೂರ್ಣ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ.

ಎಲ್ಲಾ ರಾಜ್ಯಗಳೂ ಈ ಕ್ರಮವನ್ನೇ ಅನುಸರಿಸುವುದು ಸೂಕ್ತ. ಯಾವ ಕೋಮಿನವರೇ ಇರಲಿ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವ  ಕುಟುಂಬಗಳಿಗೆ ಸರ್ಕಾರಿ ಸವಲತ್ತುಗಳನ್ನು ನಿರ್ದಾಕ್ಷಿಣ್ಯವಾಗಿ ನಿಲ್ಲಿಸಿ ಬಿಡಬೇಕು.

ಸಿ.ಪಿ.ಕೆ.ಯಂಥ ಹಿರಿಯರು ಜನಸಂಖ್ಯೆ ಸಂಪತ್ತಲ್ಲವೆ? ಎಂದು ಪ್ರಶ್ನಿಸಿಕೊಂಡು  ಧೃತರಾಷ್ಟ್ರನನ್ನು ಸ್ಮರಿಸಿಕೊಂಡಿರುವುದು (ಪ್ರ.ವಾ.ಏ.19) ವಿಪರ್ಯಾಸ. ಏಕೆಂದರೆ ಧೃತರಾಷ್ಟ್ರನ ಬಹುಸಂಖ್ಯಾ ಮಕ್ಕಳು ಕುರುಕ್ಷೇತ್ರ ಯುದ್ಧಕ್ಕೆ ಕಾರಣರಾದರು. ಅದರ ಅನರ್ಥ ಲೋಕ ವಿದಿತ.  ಪ್ರಸ್ತುತಕ್ಕೆ ‘ಮಕ್ಕಳಿರಲವ್ವ ಮನೆತುಂಬ’ ಎಂಬ ಮಾತು ಅಪ್ರಸ್ತುತ.
-ಪ್ರೊ.ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT