ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಗದಿಂದ ದೈಹಿಕ ಕಾಯಿಲೆ ನಿವಾರಣೆ’

Last Updated 23 ಏಪ್ರಿಲ್ 2017, 6:33 IST
ಅಕ್ಷರ ಗಾತ್ರ

ಬಾಗಲಕೋಟೆ: ‘ರೋಗ ಪ್ರತಿಬಂಧಕ, ರೋಗನಿವಾರಕ ಹಾಗೂ ಆರೋಗ್ಯ ವರ್ಧಕ ಶಕ್ತಿ ಹೊಂದಿರುವ ಯೋಗವು ಆಧುನಿಕ ಜಗತ್ತಿನ ಅನೇಕ ಮನೋ ದೈಹಿಕ ಕಾಯಿಲೆ ಉಪಶಮನ ಮಾಡುವ ಮತ್ತು ಯಾವುದೇ ವೆಚ್ಚವಿಲ್ಲದ ವೈದ್ಯ ಪದ್ದತಿಯಾಗಿದೆ’ ಎಂದು ದೆಹಲಿಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ನಿರ್ದೇಶಕ ಡಾ.ಈಶ್ವರ ಬಸವರಡ್ಡಿ ಹೇಳಿದರು.

ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘದ ನಗರ ಘಟಕದ ವತಿಯಿಂದ ಎಸ್.ಎನ್.ಮೆಡಿಕಲ್ ಕಾಲೇಜಿನ ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳ ಲಾಗಿದ್ದ ‘ಯೋಗ ಮತ್ತು ಡಿಜಿಟಲ್ ಇಂಡಿಯಾ’ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ‘ಆರೋಗ್ಯ ಪೂರ್ಣ ಜೀವನ ಕ್ಕಾಗಿ ಯೋಗಾಭ್ಯಾಸ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಕ್ರಮಬದ್ಧವಾಗಿ ಮತ್ತು ಶಾಸ್ತ್ರೀಯ ವಾಗಿ ಅಭ್ಯಾಸ ಮಾಡುವುದರಿಂದ ಆರೋಗ್ಯ ಪೂರ್ಣ ಜೀವನದ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಶಿಬಿರದ ಉದ್ಘಾಟನೆ ನೆರೆವೇರಿಸಿದ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ‘ಹಿತಮಿತ್ರ ಆಹಾರ ಸೇವನೆ ಮತ್ತು ಪ್ರತಿದಿನ ಯೋಗಾಸನ ಧ್ಯಾನ ಮಾಡುವುದರಿಂದ ರೋಗಗಳನ್ನು ತಡೆಗಟ್ಟಬಹುದಾಗಿದೆ’ ಎಂದರು.

ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಕೆ.ಬಾವಿ ಪ್ರಾಸ್ತಾವಿಕವಾಗಿ ಮಾತ ನಾಡಿ, ‘ಆರೋಗ್ಯವೆಂದರೆ ಅದು ದೈಹಿಕ, ಮಾನಸಿಕ,ಭಾವನಾತ್ಮಕ ಬೌದ್ಧಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನೊಳಗೊಂಡ ಪರಿಪೂರ್ಣ ಸುಸ್ಥಿತಿಯಾಗಿದೆ. ಆದರೆ ಇಂದಿನ ಆಧು ನಿಕ ಜೀವನಶೈಲಿ ಒತ್ತಡ ಮತ್ತು ವೇಗ ಗಳಿಂದ ಕೂಡಿದ ಜೀವನ ಕ್ರಮದಿಂದ ಮಾನಸಿಕ ಕ್ಲೇಶಗಳು ಹೆಚ್ಚಾಗಿ ದೇಹ, ಮನಸ್ಸುಗಳೆರಡೂ ಕುಸಿಯುತ್ತಿವೆ’ ಎಂದರು.

ಉಪನ್ಯಾಸಕಿ ಡಾ.ಶೋಭಾ ಉದ ಪುಡಿ ಮಾತನಾಡಿ ‘ಯೋಗವನ್ನು ಮುಂಜಾನೆ ಸ್ನಾನದ ನಂತರ  ಶಾಂತ ಮತ್ತು ಸ್ಥಿರ ಮನಸ್ಸಿನಿಂದ ಶಾಸ್ತ್ರೀಯ ವಾಗಿ ಮಾಡಿದರೆ ಮಾನಸಿಕ ನೆಮ್ಮದಿಯ ಜೊತೆಗೆ ಒಳ್ಳೆಯ ಆರೋಗ್ಯ ಪಡೆಯ ಬಹುದಾಗಿದೆ’ ಎಂದರು. ಹಿರಿಯರಾದ ಗಿರಿಯಾಚಾರ್ ಅವರು ‘ಡಿಜಿಟಲ್ ಇಂಡಿಯಾ ಮತ್ತು ಡಿಜಿಟಲ್ ಹಣ ಪಾವತಿ’ ವಿಷಯವಾಗಿ ಮಾತನಾಡಿ ದರು. ಕಾರ್ಯಕ್ರಮದಲ್ಲಿ ಎಸ್.ಎನ್ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧಣ್ಣ ಶೆಟ್ಟರ ಉಪಸ್ಥಿತರಿದ್ದರು, ಡಾ.ಈಶ್ವರ ಕಲಬುರ್ಗಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT