ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಒತ್ತಾಯಿಸಿ ಮುತ್ತಿಗೆ

Last Updated 23 ಏಪ್ರಿಲ್ 2017, 9:21 IST
ಅಕ್ಷರ ಗಾತ್ರ

ತರೀಕೆರೆ: ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಉಡೇವಾ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟಿಸಿದರು.ಲಿಂಗದಹಳ್ಳಿ ಹೋಬಳಿಯ ಉಡೇವಾ ಗ್ರಾಮದಲ್ಲಿ ಬರಗಾಲ ದಿಂದಾಗಿ ಜನ ಜಾನುವಾರಿಗೆ ಕುಡಿ ಯಲು ನೀರಿಲ್ಲದೇ ತೊಂದರೆಯಾಗಿದ್ದು, ಗ್ರಾಮದ ತೊಟ್ಟಿಗಳಲ್ಲಿ ಕುಡಿಯಲು ನೀರಿಲ್ಲದೇ ಜಾನುವಾರುಗಳು ಪರಿತಪಿಸುತ್ತಿವೆ.  ತಾಲ್ಲೂಕಿನ ಕಲ್ಲತ್ತಿಗಿರಿಯಿಂದ ಈ ಗ್ರಾಮಕ್ಕೆ 8 ದಿನಗಳಿಗೊಮ್ಮೆ ನೀರಿನ ಸೌಲಭ್ಯ ಕಲ್ಪಿಸುತ್ತಿದ್ದು, ಇದರಿಂದಾಗಿ 4 ರಿಂದ 6 ಕೊಡ ಮಾತ್ರ ಸಿಗುತ್ತಿದೆ.

ಆದ್ದರಿಂದ ಟ್ಯಾಂಕರ್ ಮೂಲಕ ಹೆಚ್ಚುವರಿಯಾಗಿ ಒದಗಿಸಿಕೊಡಬೇಕು ಎಂದು ಪಿಡಿಓ ನಾಗರಾಜ್ ಅವರನ್ನು ಗ್ರಾಮಸ್ಥರು  ಒತ್ತಾಯಿಸಿದರು.ಗ್ರಾಮ ಪಂಚಾಯಿತಿ ಸದಸ್ಯಯು. ಗಿರೀಶ್  ಇದ್ದರು. ಲಿಂಗದಹಳ್ಳಿ ಎಸ್.ಐ. ಮಂಜುಳಮ್ಮ, ಅಧಿಕಾರಿ ಬಸವರಾಜ್‌ ಅವರು ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT