ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಮಾದರಿ ಕಚೇರಿ

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಅರಣ್ಯದ ಅನುಭವ ನೀಡುವ ಕಚೇರಿ. ಅಲ್ಲೊಂದು ನದಿ. ಕಣ್ತುಂಬಿಕೊಳ್ಳುವಷ್ಟು ಹಸಿರು. ಸಮುದ್ರದ ಕಿನಾರೆಯಲ್ಲಿ ಇದ್ದೇವೆಯೋ ಎಂಬ ಅನುಭವ ನೀಡುವ ದೋಣಿ. ಉತ್ಸಾಹದಿಂದ ಕೆಲಸ ಮಾಡಲು ಇದಕ್ಕಿಂತ ಇನ್ನೇನು ಬೇಕು.
 
ಇಂತಹ ವಾತಾವರಣವಿರುವುದು ಪೆನ್ಸಿಲ್ವೇನಿಯಾದ ಇನ್ವೆನ್ಷನ್‌ಲ್ಯಾಂಡ್‌ ಕಚೇರಿಯಲ್ಲಿ. ಕೆಲಸ ಮಾಡುತ್ತಲೇ ನಾಲ್ಕು ಗೋಡೆಯ ಮಧ್ಯೆ ಕಳೆದುಹೋಗುವ ಪರಿಸರಕ್ಕೆ ವಿಭಿನ್ನವಾದ ಅನುಭವ ನೀಡಲಿದೆ ಈ ಕಚೇರಿ. 

ಅರವತ್ತೊಂದು ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಕಚೇರಿಯಲ್ಲಿ ಮರದ ಮನೆ, ರೇಸ್‌ ಟ್ರ್ಯಾಕ್‌, ಗುಹೆ, ಕೋಟೆ, ದೈತ್ಯ ರೋಬೊಟ್‌ ಮಾದರಿಗಳು ಇವೆ. ಜೋಯಿ ವಾರೆನ್‌ ಈ ಪರಿಕಲ್ಪನೆಯ  ರೂವಾರಿ.  ಇಲ್ಲಿ 240 ಸಿಬ್ಬಂದಿಗಳಿದ್ದಾರೆ.
 
ಕಚೇರಿಯ ವಾತಾವರಣ ಸಿಬ್ಬಂದಿಗಳಿಗೆ ಸೃಜನಾತ್ಮಕ ಚಿಂತನೆ ಮೂಡಿಸುವಂತಿರಬೇಕು. ಒತ್ತಡದಲ್ಲಿ ಕೆಲಸ ಮಾಡುವ ಬದಲು ಅವರು ಕ್ರಿಯಾತ್ಮಕವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಚಿಂತನೆಯೊಂದಿಗೆ ಈ ಕಚೇರಿಯ  ವಿನ್ಯಾಸದಲ್ಲಿ ವಿಭಿನ್ನತೆ ತರಲಾಗಿದೆ. ಇದರ ವಿನ್ಯಾಸಕ್ಕೆ ಒಂದೂವರೆ ವರ್ಷ ತೆಗೆದುಕೊಳ್ಳಲಾಗಿದೆ. 
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT