ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಹಾಡಿಗೆ ಅದ್ನಾನ್‌ ಫಿದಾ

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
‘ಪ್ರಪಂಚದ ಅನೇಕ ದೇಶಗಳನ್ನು ಸುತ್ತಿದ್ದೇನೆ. ಅಲ್ಲಿನ ಸಂಸ್ಕೃತಿ, ಸಂಗೀತ ಅರಿತಿದ್ದೇನೆ, ಆದರೆ ನಮ್ಮ ದೇಶದ ಈಶಾನ್ಯ ಭಾಗದ ಜನಪದ ಸಂಗೀತ ನಿಜಕ್ಕೂ ಅದ್ಭುತ’ ಎಂದಿದ್ದಾರೆ ಬಾಲಿವುಡ್‌ ಗಾಯಕ ಅದ್ನಾನ್‌ ಸಾಮಿ.
 
ಇತ್ತೀಚೆಗಷ್ಟೇ ಲಂಡನ್‌, ಜೋಹನ್ಸ್‌ಬರ್ಗ್‌ ಹಾಗೂ ಡರ್ಬನ್‌ ನಗರಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿಬಂದಿದ್ದ ಅದ್ನಾನ್‌, ಈಶಾನ್ಯ ಭಾಗದ ಸಂಗೀತದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
 
‘ಕಭಿ ತೊ ನಜರ್‌ ಮಿಲೊ’, ‘ಭೀಗಿ ಭೀಗಿ ರಾತೋ ಮೆ’ ಮತ್ತು ‘ತೇರಾ ಚಹರಾ’ದಂತಹ ಮನೋಜ್ಞ ಹಾಡುಗಳ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದ ಅದ್ನಾನ್‌, ಸಂಗೀತ ಸಂಯೋಜಕರಾಗಿಯೂ ಹೆಸರು ಮಾಡಿದವರು.
 
ಪ್ರತಿಯೊಬ್ಬರಿಗೂ ಸಾಧನೆಯ ಹಾದಿಗೆ ಇಳಿಯಲು, ಮುನ್ನಡೆಯಲು ಏನಾದರೊಂದು ಪ್ರೇರಣೆ, ಪ್ರಭಾವ ಇದ್ದೇ ಇರುತ್ತದೆ. ಅದ್ನಾನ್‌ ಸಾಮಿ ಅವರ ಮೇಲೆ ಪ್ರಭಾವ ಬೀರಿದ್ದು ಈಶಾನ್ಯ ಭಾರತದ ಜನಪದ ಹಾಡುಗಳಂತೆ.
 
‘ಚಿಕ್ಕ ವಯಸ್ಸಿನಿಂದಲೇ ಈಶಾನ್ಯ ಭಾಗದ ಜನಪದ ಹಾಡುಗಳನ್ನು ಕೇಳುತ್ತಿದ್ದೆ. ಭಾರತದ ಸಂಗೀತಗಾರರಲ್ಲಿ ಸಚಿನ್‌ ದೇವ್‌ ಬರ್ಮನ್‌ ನನಗೆ ಸ್ಫೂರ್ತಿ. ಅವರ ಜನಪದ ಶೈಲಿಯ ಗಾಯನ ಅಚ್ಚುಮೆಚ್ಚು’ ಎಂದು ಸಂದರ್ಶನವೊಂದರಲ್ಲಿ ಅದ್ನಾನ್‌ ಹೇಳಿಕೊಂಡಿದ್ದಾರೆ. ಪಾಕಿಸ್ತಾನಿ ಮೂಲದ ಅದ್ನಾನ್‌ ಸಾಮಿ ಅವರು ಭಾರತದ ಪೌರತ್ವ ಪ್ರಮಾಣಪತ್ರ ಪಡೆದದ್ದು 2016ರಲ್ಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT