ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಧಿಕಾಗೆ ರೆಸ್ಟ್‌ ಬೇಕಂತೆ

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಲೈಂಗಿಕತೆ, ಲಿಂಗ ತಾರತಮ್ಯಗಳಂತಹ  ಸೂಕ್ಷ್ಮ ವಿಷಯಗಳ ಬಗ್ಗೆ ನಿರ್ಭಿಡೆಯಿಂದ ಮಾತನಾಡಿ ಗಟ್ಟಿಗಿತ್ತಿ ಎನಿಸಿಕೊಂಡಿರುವ ಪ್ರತಿಭಾವಂತ ನಟಿ ರಾಧಿಕಾ ಆಪ್ಟೆ ಕೆಲವು ದಿನಗಳ ಮಟ್ಟಿಗೆ ಚಿತ್ರರಂಗದಿಂದ ದೂರ ಉಳಿಯಲಿದ್ದಾರಂತೆ.
 
ಕೆಲಸದ ನಡುವೆ ವಿರಾಮ ಅತ್ಯವಶ್ಯಕ ಎಂಬುದು ರಾಧಿಕಾ ನಂಬಿಕೆ. ‘ವಿರಾಮ ಒತ್ತಡ ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಕೆಲಸ ಮಾಡಲು ಉತ್ತೇಜನ ನೀಡುತ್ತದೆ’ ಎಂದಿದ್ದಾರೆ ಅವರು.
 
ಕಳೆದ ವರ್ಷ, ಅವರು ನಟಿಸಿದ ಸೂಪರ್ ಹಿಟ್ ‘ಕಬಾಲಿ’ ಸೇರಿಂದತೆ ಐದು ಚಿತ್ರಗಳು ಬಿಡುಗಡೆಯಾಗಿದ್ದವು.  ಭಿನ್ನ ಮತ್ತು ಗಟ್ಟಿ ಪಾತ್ರಗಳನ್ನೇ ಮಾಡುತ್ತಾ ಬಂದಿರುವ ರಾಧಿಕಾ ಅವರಿಗೆ  ಇಂತಹ ಪಾತ್ರಗಳೇ ನಟನೆ ಕಲಿಕೆಗೆ ಸ್ಫೂರ್ತಿಯಂತೆ.  ‘ಭಿನ್ನ ಪಾತ್ರಗಳು ನನ್ನನ್ನು ಹೆಚ್ಚು ಶ್ರಮವಹಿಸಿ ನಟಿಸಲು ಆ ಮೂಲಕ ಹೆಚ್ಚು ಕಲಿಯಲು ಪ್ರೋತ್ಸಾಹಿಸುತ್ತವೆ’ ಎನ್ನುತ್ತಾರೆ ರಾಧಿಕಾ.
 
12 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಾಧಿಕಾ ಈಗಲೂ ಕ್ಯಾಮೆರಾ ಎದುರಿಸುವಾಗ ಒತ್ತಡಕ್ಕೊಳಗಾಗುತ್ತಾರಂತೆ. ‘ಈ ಕ್ಯಾಮೆರಾ ಭಯ ನನಗೆ 60 ವರ್ಷವಾದರೂ ಹೋಗದೇನೊ...’ ಎನ್ನುವ ರಾಧಿಕಾಗೆ ತಾವು ಸದಾ ವಿದ್ಯಾರ್ಥಿನಿ ಎಂಬ ವಿಧೇಯತೆ.
 
ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ರಾಧಿಕಾ ಇಲ್ಲಿಯವರೆಗೆ 34 ಚಲನಚಿತ್ರ, ಏಳು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅಕ್ಷಯ್‌ಕುಮಾರ್ ಅವರ ಜತೆ ‘ಪ್ಯಾಡ್‌ಮ್ಯಾನ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT