ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮಾಜಿಕ ಸ್ಥಾನಕ್ಕೆ ತಕ್ಕ ಜೀವನಾಂಶ’

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಚ್ಛೇದನ ಪಡೆಯುವ ಮಹಿಳೆಗೆ ನೀಡುವ ಜೀವನಾಂಶದ ಮೊತ್ತವು ಆಕೆ ಹಾಗೂ ಪತಿಯ ಸಾಮಾಜಿಕ ಸ್ಥಾನಮಾನಕ್ಕೆ ತಕ್ಕಂತೆ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಹಾಗೆಯೇ, ಪತಿಯ ಆರ್ಥಿಕ ಸಾಮರ್ಥ್ಯ ಗಮನಿಸಿ ಜೀವನಾಂಶದ ಮೊತ್ತ ನಿರ್ಧರಿಸಬೇಕು ಎಂದೂ ಕೋರ್ಟ್‌ ಹೇಳಿದೆ. ಬೇರೆ ಬೇರೆ ಅಂಶಗಳನ್ನು ಪರಿಗಣಿಸಿ, ಜೀವನಾಂಶದ ಮೊತ್ತವನ್ನು ನ್ಯಾಯಾಲಯಗಳು ಬದಲಾಯಿಸಬಹುದು ಎಂದೂ ಅದು ತೀರ್ಪು ನೀಡಿದೆ.

ವಿಚ್ಛೇದಿತ ಪತ್ನಿಗೆ ವ್ಯಕ್ತಿಯೊಬ್ಬ ನೀಡಬೇಕಿರುವ ಜೀವನಾಂಶದ ಮೊತ್ತವನ್ನು ₹ 23,000ದಿಂದ ₹ 20,000ಕ್ಕೆ ಇಳಿಕೆ ಮಾಡಿದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಮತ್ತು ಮೋಹನ ಎಂ. ಶಾಂತನಗೌಡರ ಅವರಿದ್ದ ಪೀಠ ಈ ಮಾತುಗಳನ್ನು ಹೇಳಿದೆ.

1970ರ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌, ‘ಪತಿಯ ವೇತನದಲ್ಲಿ ಕಡಿತಗಳನ್ನೆಲ್ಲ ಕಳೆದ ನಂತರ ಸಿಗುವ ಮೊತ್ತದಲ್ಲಿ ಶೇಕಡ 25ರಷ್ಟನ್ನು ಪತ್ನಿಗೆ ಜೀವನಾಂಶದ ರೂಪದಲ್ಲಿ ನೀಡುವುದು ಸೂಕ್ತ’ ಎಂದು ಹೇಳಿತ್ತು.

ವಿಚ್ಛೇದನ ಪ್ರಕರಣವೊಂದರಲ್ಲಿ, ಪತಿಯು ಪತ್ನಿಗೆ ನೀಡಬೇಕಿರುವ ಜೀವನಾಂಶದ ಮೊತ್ತವನ್ನು ₹16,000ದಿಂದ ₹23,000ಕ್ಕೆ ಹೆಚ್ಚಿಸಿ ಕಲ್ಕತ್ತಾ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘ಆದರೆ, ವ್ಯಕ್ತಿ ಮತ್ತೊಂದು ಮದುವೆ ಆಗಿ, ಮಗು ಹೊಂದಿರುವ ಕಾರಣ ಮೊದಲ ಪತ್ನಿಗೆ ನೀಡುವ ಜೀವನಾಂಶದ ಮೊತ್ತವನ್ನು ₹ 20,000ಕ್ಕೆ ಇಳಿಸಬೇಕು’ ಎಂದು ಪೀಠ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT