ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಾಲ್‌ ಮುಡಿಗೆ ಕಿರೀಟ

ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್
Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮೊನಾಕೊ: ಸ್ಪೇನ್‌ನ ಅಗ್ರಗಣ್ಯ ಆಟಗಾರ ರಫೆಲ್ ನಡಾಲ್ ಅವರು ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಹತ್ತನೇ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.

ಈ ಹಿಂದೆ ಇಲ್ಲಿ ನಡಾಲ್ ಒಂಬತ್ತು ಬಾರಿ ಚಾಂಪಿಯನ್ ಆಗಿದ್ದರು. ಹತ್ತು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಅವರು ತಮ್ಮದಾಸಿಕೊಂಡರು.

ಫೈನಲ್‌ ಹಣಾಹಣಿಯಲ್ಲಿ ನಡಾಲ್‌ 6–1, 6–3ರ ನೇರ ಸೆಟ್‌ಗಳಿಂದ ಆಲ್ಬರ್ಟ್‌ ರಾಮೋಸ್ ವಿನೋಸ್ ಅವ ರನ್ನು ಮಣಿಸಿ ಈ ಸಾಧನೆ ಮಾಡಿದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನ ದಲ್ಲಿರುವ ನಡಾಲ್ ಎದುರು  ರಾಮೋಸ್ ತೀವ್ರ ಒತ್ತಡಕ್ಕೆ ಒಳಗಾದಂತೆ ಕಂಡರು. ಅಲ್ಲದೇ ಡಬಲ್‌ ಫಾಲ್ಟ್ ಎಸಗಿದರು. ರಾಮೋಸ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿದ್ದಾರೆ.

ನಡಾಲ್‌ಗೆ ಸಿಕ್ಕ 70ನೇ ಎಟಿಪಿ ಪ್ರಶಸ್ತಿ ಇದಾಗಿದೆ. ಹಾಗೂ 29ನೇ ಎಟಿಪಿ ಮಾಸ್ಟರ್ಸ್ ಪ್ರಶಸ್ತಿ ಇದು. ನೊವಾಕ್ ಜೊಕೊವಿಚ್, ನಡಾಲ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ. ನೊವಾಕ್‌ 30 ಬಾರಿ ಮಾಸ್ಟರ್ಸ್‌ ಪ್ರಶಸ್ತಿ ಜಯಿಸಿದ್ದಾರೆ. ಸೆಮಿಫೈನಲ್‌ ಪಂದ್ಯದಲ್ಲಿ ನಡಾಲ್ 6–3, 6–1ರಲ್ಲಿ ಡೇವಿಡ್‌ ಗೊಫಿನ್ ಅವರನ್ನು ಮಣಿಸಿದ್ದರು.

ಬೋಪಣ್ಣ –ಕ್ಯುವಾಸ್‌ಗೆ ಪ್ರಶಸ್ತಿ
ಭಾರತದ ರೋಹನ್ ಬೋಪಣ್ಣ ಹಾಗೂ ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ  ಪ್ರಶಸ್ತಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಈ ಜೋಡಿ 6–3, 3–6, 10–4ರಲ್ಲಿ ಸ್ಪೇನ್‌ನ ಫೆಲಿಸಿಯಾನೊ ಲೊಪೆಜ್‌ ಮತ್ತು ಮಾರ್ಕ್‌ ಲೊಪೆಜ್‌ ವಿರುದ್ಧ ಗೆಲುವು ದಾಖಲಿಸಿತು.

ಒಂದು ಗಂಟೆ 14ನಿಮಿಷಗಳಲ್ಲಿ ಈ ಜೋಡಿ ಪಂದ್ಯ ಗೆದ್ದುಕೊಂಡಿತು. ಬೋಪಣ್ಣ ಹಾಗೂ ಕ್ಯುವಾಸ್ ಜೋಡಿಗೆ ಈ ಋತುವಿನಲ್ಲಿ ದೊರೆತ ಮೊದಲ ಪ್ರಶಸ್ತಿ ಇದಾಗಿದೆ. ಭಾರತದ ಆಟಗಾರನಿಗೆ ಲಭಿಸಿರುವ ಎರಡನೇ ಪ್ರಶಸ್ತಿ ಎನಿಸಿದೆ.ಜನವರಿಯಲ್ಲಿ ಬೋಪಣ್ಣ ಚೆನ್ನೈ ಓಪನ್‌ನಲ್ಲಿ ಜೀವನ್ ನೆಡುಂಚಳಿಯನ್  ಅವರೊಂದಿಗೆ ಪ್ರಶಸ್ತಿ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT