ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಪಂಗಡದ ಸ್ಥಾನ ದೊರೆತರೆ ಅಭಿವೃದ್ಧಿ

Last Updated 24 ಏಪ್ರಿಲ್ 2017, 6:34 IST
ಅಕ್ಷರ ಗಾತ್ರ

ಚಿಂಚೋಳಿ: ‘ಕೋಲಿ ಸಮಾಜದ ಜನರು ಸ್ವಾವಲಂಬಿ, ಸುಖಿ ಜೀವನ ನಡೆಸುವಂತೆ ಆಗಬೇಕಾದರೆ ಈ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಬೇಕು’ ಎಂದು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ಅಭಿಪ್ರಾಯಪಟ್ಟರು.

ಇಲ್ಲಿನ ಪಂಚಲಿಂಗೇಶ್ವರ ಬುಗ್ಗೆ ಬಳಿಯ ತೇರು ಮೈದಾನದಲ್ಲಿ ಭಾನುವಾರ ನಡೆದ ಕೋಲಿ ಸಮಾಜದ ಜಾಗೃತಿ ಸಮಾವೇಶ ಹಾಗೂ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಕೋಲಿ ಸಮಾಜ ಏಳ್ಗೆ ಹೊಂದಬೇಕು. ಅವರು ಹೊಸ ಇತಿಹಾಸ ಬರೆಯುವ ಅಧಿಕಾರಿಗಳು ಆಗಬೇಕು. ಆಳ್ವಿಕೆ ನಡೆಸಬೇಕು ಎಂದರೆ ನಾವು ಜಾಗೃತರಾಗಬೇಕು. ಅಧಿಕಾರ ಸುಮ್ಮನೆ ಸಿಗುವುದಿಲ್ಲ ಅದನ್ನು ಕಸಿದುಕೊಳ್ಳಬೇಕಾಗುತ್ತದೆ’ ಎಂದರು.

‘ಹೇರೂರು ಅವರ ಚೈತನ್ಯಶಕ್ತಿ ನಮ್ಮೊಂದಿಗಿದೆ. ಪರಿಶಿಷ್ಟ ಪಂಗಡದ ಪಟ್ಟಿಗೆ ಕೋಲಿ ಸಮಾಜ ಸೇರ್ಪಡೆ ಹೋರಾಟ ದೆಹಲಿಗೆ ತಲುಪಿದೆ. ಶೀಘ್ರವೇ ಶುಭ ಸುದ್ದಿ ಬರಲಿದೆ’ ಎಂದು ಹೇಳಿದರು.

‘ನಾನು ಸಮಾಜದ ಸೊತ್ತು. ಸಮಾಜವೇ ನನ್ನ ತಂದೆ ತಾಯಿ. ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ನನ್ನ ಜೀವನದ ಪರಮಗುರಿ. ಇದಕ್ಕಾಗಿ ನಾನು ಎಂತಹ ತ್ಯಾಗಕ್ಕೂ ಸಿದ್ಧ’ ಎಂದರು.

ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್‌ ಮಾತನಾಡಿ, ಕೋಲಿ ಸಮಾಜದವರು ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಇದಕ್ಕೆ ನಾನು ಋಣಿ’ ಎಂದರು.

‘ಚೌಡಯ್ಯ ನಿಗಮಕ್ಕೆ ₹300 ಕೋಟಿ ನೀಡಬೇಕು ಎಂದು ಕೇಳಲಾಗಿದೆ. ಜನಸಂಖ್ಯೆ ಆಧರಿಸಿ ಅನುದಾನ ಹಂಚಿಕೆಯಾಗಬೇಕು. ಇದಕ್ಕೆ ಆರ್ಥಿಕ ಗಣತಿಯ ಅಂಕಿ ಅಂಶಗಳನ್ನು ಮಾನದಂಡವಾಗಿ ಪರಿಗಣಿಸಲಾಗುವುದು’ ಎಂದರು.

ಮಾಜಿ ಸಚಿವ ಸುನಿಲ ವಲ್ಲ್ಯಾಪುರ ಮಾತನಾಡಿ, ‘ಸರ್ಕಾರ ಬಂದಾಗಲೆಲ್ಲ ಒಂದೊಂದು ಕೊಡುಗೆ ನೀಡಿವೆ. ಬಿಜೆಪಿ ಸರ್ಕಾರ ಅಂಬಿಗರ ಚೌಡಯ್ಯ ಜಯಂತಿ ಆಚರಣೆಗೆ ಆದೇಶ ಮಾಡಿತ್ತು. ಅಲ್ಲದೇ ಅಧ್ಯಯನ ಪೀಠಕ್ಕೆ ₹1 ಕೋಟಿ ಹಣ ನೀಡಿತ್ತು. ಸಮಾಜ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಇದಕ್ಕಾಗಿ ಪರಿಶಿಷ್ಟ ಪಂಗಡದ ಪಟ್ಟಿಗೆ ಈ ಸಮಾಜದ ಸೇರ್ಪಡೆಗೆ ಸಹಕಾರವಿದೆ’ ಎಂದು ಹೇಳಿದರು.

ಶಿಕ್ಷಕ ತುಕಾರಾಮ ಚಿತ್ತಾಪುರ ಉಪನ್ಯಾಸ ನೀಡಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ, ಸಮಾಜದ ರಾಜ್ಯ ಘಟಕದ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾ ಘಟಕದ ಅಧ್ಯಕ್ಷ ರವಿರಾಜ ಕೊರವಿ, ಮುಖಂಡರಾದ ಶರಣಪ್ಪ ತಳವಾರ, ಬೀದರ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ ಕೊರವಿ, ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ಆವುಂಟಿ, ನಗರ ಘಟಕದ ಕಾರ್ಯದರ್ಶಿ ಗಿರಿರಾಜ ನಾಟಿಕಾರ ಮಾತನಾಡಿದರು.

ಸುಲೇಪೇಟ ಖಟ್ವಾಂಗೇಶ್ವರ ಮಠದ ಗುರುಲಿಂಗ ಸ್ವಾಮೀಜಿ, ತೊನಸನಳ್ಳಿಯ ಮಲ್ಲಣಪ್ಪ ಸ್ವಾಮೀಜಿ, ಗೌರಿಗುಡ್ಡದ ಸಿದ್ಧ ಶಿವಯೋಗಿ ಶರಣರು, ಹಳ್ಳಿಖೇಡ್‌ ವಾಡಿಯ ದತ್ತಾತ್ರೆಯ ಶರಣು ಸಾನ್ನಿಧ್ಯ ವಹಿಸಿದ್ದರು.

ಸಂಜೀವನ ಯಾಕಾಪುರ, ಗೌತಮ ಪಾಟೀಲ, ಅವಣ್ಣ ಮ್ಯಾಕೇರಿ, ಶಿವಶರಣಪ್ಪ ಕೋಬಾಳ, ಭೀಮಣ್ಣ ಸಾಲಿ, ಝರಣಪ್ಪ ಚಿಂಚೋಳಿ, ಆರ್‌.ಎಂ. ನಾಟಿಕಾರ, ಕೆ.ಎಂ. ಬಾರಿ, ಅಬ್ದುಲ್‌ ಬಾಷೀತ್‌, ಜಗನ್ನಾಥ ಜಮಾದಾರ, ಮಲ್ಕಪ್ಪ ಬೀರಾಪುರ, ಬಾಬುರಾವ ಬೋಯಿ, ರಾಮಶೆಟ್ಟಿ ಪವಾರ, ಭೀಮರಾವ ಪಾಟೀಲ, ತುಳಸಿರಾಮ, ಶರಣು ನಾಟಿಕಾರ, ಜಗನ್ನಾಥ ನಾಟಿಕಾರ, ಅಶೋಕ ಚವಾಣ್‌, ನರೇಶ ಮಲ್ಕೂರು, ಶಿವಾಜಿ ಮೇಟಕಾರ, ಪುರಸಭೆ ಅಧ್ಯಕ್ಷೆ ಇಂದುಮತಿ ಮನೋಹರ ದೇಗಲಮಡಿ, ಮಾಜಿ ಅಧ್ಯಕ್ಷೆ ವಿದ್ಯಾವತಿ ಘಾಲಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ನಿರ್ಮಲಾ ಬಸವರಾಜ ಬೆಸ್ತಾ, ಪಾರ್ವತಿ ಇದ್ದರು.

**
ಕೋಲಿ ಸಮಾಜದ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿದ್ದೇವೆ. ನನಗೆ ಮತ್ತು ನನ್ನ ಪತ್ನಿಗೆ ಸಮಾಜವೇ ಆಸ್ತಿ. ಸಮಾಜದ ಇತಿಹಾಸ ಸೃಷ್ಟಿಸುವ ಕೆಲಸ ಮಾಡಿಯೇ ಸಾಯುತ್ತೇನೆ.

-ಬಾಬುರಾವ ಚಿಂಚನಸೂರ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT