ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಾಜುದ್ದೀನ್ ಸಿದ್ದಿಕಿ: ನಾನು 16.66 % ಹಿಂದೂ, 16.66 % ಮುಸ್ಲಿಂ...

Last Updated 24 ಏಪ್ರಿಲ್ 2017, 18:59 IST
ಅಕ್ಷರ ಗಾತ್ರ
ADVERTISEMENT

ಮುಂಬೈ: ಖ್ಯಾತ ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿ ನಾನು ಶೇಕಡ 16.66ರಷ್ಟು ಹಿಂದೂ, ಶೇಕಡ 16.66ರಷ್ಟು ಮುಸ್ಲಿಂ, ಶೇಕಡ 16.66ರಷ್ಟು ಕ್ರಿಸ್ಚಿಯನ್‌... ಎಂಬ ವಿಡಿಯೊವನ್ನು ಟ್ವೀಟ್‌ ಮಾಡುವ ಮೂಲಕ ಸುದ್ದಿ ಮಾಡಿದ್ದಾರೆ. ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನಿನ್ನೆಯಷ್ಟೇ ಸೋನು ನಿಗಮ್‌ ಅವರು ಬಾಂಗ್ ವಿಡಿಯೊವನ್ನು ಟ್ವೀಟ್ ಮಾಡಿದ್ದರು. ಈ ಬೆನ್ನಲೇ ನವಾಜುದ್ದಿನ್ ಸಿದ್ದಿಕಿ ಅವರ ಈ ವಿಡಿಯೊ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.

ವಿಡಿಯೊದಲ್ಲಿ ಏನಿದೆ?
‘ನಾನು ಇತ್ತೀಚೆಗೆ ನನ್ನ ಡಿಎನ್ಎ ಪರೀಕ್ಷೆ ಮಾಡಿಸಿದೆ. ಅದರ ಫಲಿತಾಂಶ ಈ ರೀತಿ ಇದೆ...ನಾನು 16.66 % ಹಿಂದೂ, 16.66 % ಮುಸ್ಲಿಂ, 16.66 % ಸಿಖ್, 16.66 % ಕ್ರೈಸ್ತ, 16.66 % ಬೌದ್ಧ ಹಾಗೂ ಜಗತ್ತಿನಲ್ಲಿರುವ ಉಳಿದೆಲ್ಲ ಧರ್ಮಗಳ 16.66 %. ಈ ಬಗ್ಗೆ ನಾನು ಆತ್ಮಾವಲೋಕನ ಮಾಡಿಕೊಂಡಾಗ ನನಗೆ ಅನಿಸಿದ್ದು ನಾನೊಬ್ಬ 100 % ಕಲಾವಿದ’ ಎಂದು ಪ್ಲೆಕಾರ್ಡ್‌ಗಳ ಮೂಲಕ ನವಾಜುದ್ದೀನ್ ಸಿದ್ದಿಕಿ ವಿಡಿಯೊದಲ್ಲಿ ಹೇಳಿದ್ದಾರೆ.

ಹಿಂದೂ, ಮುಸ್ಲಿಂ, ಸಿಖ್ಖ್ , ಕ್ರಿಸ್ಚಿಯನ್, ಬುದ್ದಿಸ್ಟ್  ಉಡುಪುಗಳಲ್ಲಿ ಕಾಣಿಸಿಕೊಂಡು ಡಿಎನ್‌ಎ ಪ್ರಮಾಣದ ಫಲಕಗಳನ್ನು ಹಿಡಿದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT