ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ಬೆಡಗಿ ಶ್ರದ್ಧಾ ಕಪೂರ್‌ಗೆ ವಯಸ್ಸಾಯ್ತೇ?

Last Updated 24 ಏಪ್ರಿಲ್ 2017, 13:40 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಬೆಡಗಿ ಶ್ರದ್ಧಾ ಕಪೂರ್‌ ಅವರಿಗೆ ಏಕಾಏಕಿ ವಯಸ್ಸು ಹೆಚ್ಚಾಗಿದೆ, ಅವರ ಮುಖ ದಪ್ಪವಾಗಿದೆ, ಸೊಂಟದ ಸುತ್ತಳತೆಯೂ ಹೆಚ್ಚಿದೆ!

ಈ ಸುದ್ದಿ ಕೇಳಿ ನೀವು ಹುಬ್ಬೇರಿಸಿದರೆ ಅದು ನಿಮ್ಮ ತಪ್ಪಲ್ಲ. ಶ್ರದ್ಧಾ ತಮ್ಮ ಮುಂಬರುವ ‘ಹಸೀನಾ’ ಚಿತ್ರಕ್ಕಾಗಿ ವಯಸ್ಸಾಗಿರುವಂಥ ಫೋಟೊ ಶೂಟ್‌ ನಡೆಸಿದ್ದಾರೆ. ಹರೆಯದ ಹಾಗೂ ವಯಸ್ಸಾದ ಎರಡೂ ರೀತಿಯ ಫೋಟೊಗಳನ್ನು ಶ್ರದ್ಧಾ ಇನ್‌ಸ್ಟಾಗ್ರಾಮ್‌ನಲ್ಲಿ ಸೋಮವಾರ ಪೋಸ್ಟ್‌ ಮಾಡಿದ್ದಾರೆ.

ಶ್ರದ್ಧಾ ಅವರ ಎರಡೂ ಅವತಾರದ ಈ ಚಿತ್ರಕ್ಕೆ 2.46 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್‌ ಒತ್ತಿದ್ದಾರೆ. ಈ ಚಿತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ಹಸೀನಾ’ ಚಿತ್ರದಲ್ಲಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸೋದರಿ ಹಸೀನಾ ಪಾರ್ಕರ್‌ ಪಾತ್ರದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT