ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಕ್‌ ಗಣರಾಜ್ಯ: ಮಾಜಿ ಫುಟ್‌ಬಾಲ್‌ ಆಟಗಾರ ಆತ್ಮಹತ್ಯೆ

Last Updated 24 ಏಪ್ರಿಲ್ 2017, 14:17 IST
ಅಕ್ಷರ ಗಾತ್ರ

ಪೆರುಗ್ವೆ: ಜೆಕ್‌ ಗಣರಾಜ್ಯ ಫುಟ್‌ಬಾಲ್‌ ತಂಡದ ಮಾಜಿ ಡಿಫೆಂಡರ್‌ ಫ್ರಾಂಟಿಸೆಕ್‌ ರಜ್ಟೋರಾಲ್‌(31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಜೆಕ್‌ ಗಣರಾಜ್ಯ ಫುಟ್‌ಬಾಲ್‌ ಫೆಡರೇಷನ್‌ ‘ರಜ್ಟೋರಾಲ್‌ ಅವರು ಟರ್ಕಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹೇಳಿಕೆ ನೀಡಿದೆ. ಜತೆಗೆ ರಜ್ಟೋರಾಲ್‌ ಅವರ ನಿಕಟವರ್ತಿ ಪಾವೆಲ್‌ ಜೀಕಾ ಅವರೂ ಇದನ್ನು ಖಚಿತ ಪಡಿಸಿದ್ದಾರೆ.

ಗ್ಯಾಜೈಂಟ್ಸೆಪೊರ್ ಖಾಸಗಿ ವೆಬ್‌ಸೈಟ್‌ನಲ್ಲಿ ಆಟಗಾರನ ಸಾವಿನ ಕುರಿತು ವರದಿ ಪ್ರಕಟಿಸಲಾಗಿದೆ.

ಇವರು ಜೆಕ್‌ ಗಣರಾಜ್ಯ ತಂಡವನ್ನು 14 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಜೆಕ್‌ ಗಣರಾಜ್ಯದ ದೇಶೀಯ ಪಂದ್ಯಾವಳಿಗಳಲ್ಲಿ ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT