ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈನಿಂದ ಡಬಲ್‌ ಡೆಕರ್‌ ರೈಲು

ಹೆಚ್ಚು ಬೇಡಿಕೆಯ ಮಾರ್ಗಗಳಲ್ಲಿ ಸಂಚಾರ
Last Updated 24 ಏಪ್ರಿಲ್ 2017, 20:00 IST
ಅಕ್ಷರ ಗಾತ್ರ

ನವದೆಹಲಿ: ನವದೆಹಲಿ–ಲಖನೌನಂತಹ ಅತ್ಯಂತ ಹೆಚ್ಚು ಜನರು ಪ್ರಯಾಣಿಸುವ ಮಾರ್ಗಗಳಲ್ಲಿ ಡಬಲ್‌ ಡೆಕರ್‌, ಹವಾನಿಯಂತ್ರಿತ ವಿಶೇಷ ರೈಲುಗಳು ಜುಲೈಯಿಂದ ಸಂಚಾರ ಆರಂಭಿಸಲಿವೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾತ್ರಿ ಸಂಚಾರದ ಈ ರೈಲುಗಳಿಗೆ ‘ಉತ್ಕೃಷ್ಟ ಡಬಲ್‌ ಡೆಕರ್‌ ಎ.ಸಿ ಯಾತ್ರಿ ಎಕ್ಸ್‌ಪ್ರೆಸ್‌’ ಅಥವಾ ಉದಯ್‌ ಎಂದು ಹೆಸರಿಡಲಾಗಿದೆ. ಈ ರೈಲುಗಳಲ್ಲಿ ಸ್ಲೀಪರ್‌ ಬರ್ತ್‌ಗಳು ಇರುವುದಿಲ್ಲ. ಹಿಂದಕ್ಕೆ ಬಾಗುವ ಸೀಟುಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಬೋಗಿಯಲ್ಲಿ 120 ಆಸನಗಳು ಇರುತ್ತವೆ. ಆಹಾರ ಮತ್ತು ಪಾನೀಯ ಮಾರಾಟದ ಯಂತ್ರಗಳೂ ಇರುತ್ತವೆ.

ಈ ರೈಲುಗಳ ಪ್ರಯಾಣ ದರ ಎಕ್ಸ್‌ಪ್ರೆಸ್‌ ರೈಲುಗಳಲ್ಲಿನ 3 ಟೈರ್‌ ಎ.ಸಿ ದರಗಳಿಗಿಂತ ಕಡಿಮೆ ಇರಲಿದೆ. ಆದರೆ ಈ ರೈಲುಗಳಲ್ಲಿ ಸೌಲಭ್ಯಗಳು ಹೆಚ್ಚು ಇರಲಿವೆ. ಪ್ರತಿ ಬೋಗಿಯಲ್ಲಿಯೂ ದೊಡ್ಡ ಎಲ್‌ಸಿಡಿ ಪರದೆ ಇರುತ್ತದೆ. ಪ್ರತಿ ಆಸನಕ್ಕೂ ಹೆಡ್‌ಫೋನ್‌ ಮತ್ತು ವೈಫೈ ಸಂಪರ್ಕ ಇರುತ್ತದೆ.

ಎಲ್‌ಸಿಡಿ ಟಿ.ವಿಯ ಧ್ವನಿಯನ್ನು ಹೆಡ್‌ಫೋನ್‌ ಮೂಲಕ ಕೇಳುವ ವ್ಯವಸ್ಥೆ ಇರುತ್ತದೆ.  ಸ್ಲೀಪರ್ ಬರ್ತ್‌ ಇಲ್ಲದೆ ಇದ್ದರೂ ಜನರು ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ಬೋಗಿಗಳನ್ನು ವಿನ್ಯಾಸ ಮಾಡಲಾಗಿದೆ. ಸೀಟುಗಳು ಸಾಕಷ್ಟು ಹಿಂದಕ್ಕೆ ಬಾಗುವುದಲ್ಲದೆ, ಕಾಲಿರಿಸುವುದಕ್ಕೆ ತಕ್ಕಷ್ಟು ಸ್ಥಳಾವಕಾಶವನ್ನೂ ಒದಗಿಸಲಾಗಿದೆ. ಬೋಗಿಯ ಒಳಭಾಗ ಹೆಚ್ಚು ಸುಂದರವಾಗಿರುತ್ತದೆ. ಬಯೊ–ಶೌಚಾಲಯ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT