ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸ್ಪರ್ಧಿಗಳಿಗಿಲ್ಲ ಅವಕಾಶ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬ್ರಿಟನ್‌ನ ವೃತ್ತಿ ಪರ ಬಾಕ್ಸರ್‌ ಅಮಿರ್ ಖಾನ್‌ ಅವರು ಜುಲೈ 7ರಿಂದ ಆಗಸ್ಟ್‌ 12ರ ವರೆಗೆ  ಬಾಕ್ಸಿಂಗ್ ಸೂಪರ್‌ ಲೀಗ್ (ಎಸ್‌ ಬಿಎಲ್‌) ನಡೆಸಲು ನಿರ್ಧರಿಸಿದ್ದಾರೆ. ಇದಕ್ಕೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಬೆಂಬಲ ನೀಡಿದೆ. ಆದರೆ ಎಸ್‌ಬಿಎಲ್‌ನಲ್ಲಿ ಪಾಲ್ಗೊಳ್ಳಲು ಭಾರತದ ಬಾಕ್ಸರ್‌ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್‌ ಸ್ಪಷ್ಟವಾಗಿ ಹೇಳಿದೆ.

ಬಾಕ್ಸಿಂಗ್‌ ಲೀಗ್‌ನಲ್ಲಿ  ಎಂಟು ಫ್ರಾಂಚೈ ಸ್‌ಗಳು ಪಾಲ್ಗೊಳ್ಳಲಿದ್ದು ಪ್ರತಿ ತಂಡದಲ್ಲಿ ಆರು ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಇರಲಿದ್ದಾರೆ. ವಿವಿಧ  ತೂಕದ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. 

‘ಲೀಗ್‌ನಲ್ಲಿ ಪಾಲ್ಗೊಳ್ಳಲು ಭಾರತದ ಬಾಕ್ಸರ್‌ಗಳಿಗೆ ಅನುಮತಿ ಕೊಡುವು ದಿಲ್ಲ’ ಎಂದು ಬಿಎಫ್‌ಐ ಅಧ್ಯಕ್ಷ ಅಜಯ್‌ ಸಿಂಗ್ ಹೇಳಿದ್ದಾರೆ.  ಭಾರತದಲ್ಲಿ ಪ್ರತ್ಯೇಕ ಲೀಗ್ ಆರಂಭಿಸುವ ಬಗ್ಗೆ ಅವರು ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT