ಅಮೆರಿಕ ಪ್ರವಾಸದಲ್ಲಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ವಿಷಯವನ್ನು ಪ್ರಸ್ತಾಪ ಮಾಡಲಿದ್ದಾರೆ ಎಂದರು. ವೀಸಾ ನೀತಿಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಕೆಲವು ಮುಂದುವರೆದ ರಾಷ್ಟ್ರಗಳು ಅಮೆರಿಕದ ನೀತಿಯನ್ನೇ ಪಾಲಿಸುತ್ತಿವೆ. ಅಮೆರಿಕದ ವೀಸಾ ನೀತಿಯಿಂದ ಭಾರತದಲ್ಲಿರುವ ಹಲವು ಅಮೆರಿಕ ಕಂಪೆನಿಗಳು ತೊಂದರೆಗೆ ಸಿಲುಕಲಿವೆ ಎಂದು ಎಚ್ಚರಿಕೆ ನೀಡಿದರು.