ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಮ್ಮಟನಗರಿಯಲ್ಲಿ ಸ್ವಚ್ಛತಾ ಕಾರ್ಯ ನಾಳೆ

Last Updated 25 ಏಪ್ರಿಲ್ 2017, 5:11 IST
ಅಕ್ಷರ ಗಾತ್ರ

ವಿಜಯಪುರ:  ಮಹಾರಾಷ್ಟ್ರ ಮೂಲದ ಪ್ರತಿಷ್ಠಾನವೊಂದು ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಇದೇ 26ರಂದು ನಗರದ 18 ಆಯ್ದ ಸ್ಥಳಗಳಲ್ಲಿ ಈ ಅಭಿಯಾನ ನಡೆಯಲಿದೆ.ಅಂದು ಬೆಳಿಗ್ಗೆ 8ರಿಂದ 10ರ ವರೆಗೆ ಈ ಕಾರ್ಯ ನಡೆಯಲಿದೆ. ಪ್ರತಿ ಪ್ರದೇಶದಲ್ಲಿ 1,500 ಜನರಂತೆ ಅಂದಾಜು 27 ಸಾವಿರ ಜನ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ.

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅಲಿಬಾಗ್‌ ತಾಲ್ಲೂಕಿನ ರೇವದಂಡಾ ಗ್ರಾಮದ ಡಾ.ನಾನಾಸಾಹೇಬ್‌ ಪ್ರತಿಷ್ಠಾನ ಇಂತಹ ಅಪರೂಪದ, ಅನುಕರಣೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಗರದಲ್ಲಿ ಜನತೆ ಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.‘ಪ್ರತಿಷ್ಠಾನದ ಪ್ರತಿನಿಧಿಗಳು ಕಳೆದ 15 ದಿನಗಳಿಂದ ನಗರದಲ್ಲಿ ಸಂಚರಿಸಿ, ಯಾವ ಭಾಗದಲ್ಲಿ ಕಸ ಹೆಚ್ಚು ಸಂಗ್ರಹವಾಗುತ್ತದೆ ಎಂಬುದರ ಮಾಹಿತಿ ಕಲೆ ಹಾಕಿದ್ದಾರೆ. ಯಾವ ಪ್ರದೇಶದಿಂದ ಸ್ವಚ್ಛತಾ ಕಾರ್ಯವನ್ನು ಆರಂಭಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಮಾರ್ಗದ ನಕ್ಷೆಯನ್ನು ಸಹ ಸಿದ್ಧಪಡಿಸಿ ಕೊಂಡಿ ದ್ದಾರೆ’ ಎಂದು ಪ್ರತಿಷ್ಠಾನದ ಸದಸ್ಯ ವಿಜಯಕುಮಾರ ಲಕ್ಕುಂಡಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಗರದ ಶಿವಾಜಿ ಚೌಕ್‌, ಮುಳ್ಳಗಸಿ, ಶಾಪೇಠ, ಸ್ಟೇಷನ್‌ ಬ್ಯಾಕ್‌ ರಸ್ತೆ,  ಕೈಗಾರಿಕಾ ಪ್ರದೇಶ, ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಬಿಎಲ್‌ಡಿಇ ಸಂಸ್ಥೆ ಆವರಣ ಸೇರಿದಂತೆ ಒಟ್ಟು 18 ಪ್ರದೇಶಗಳನ್ನು ಗುರುತಿಸಲಾಗಿದೆ ಎಂದೂ ಮಾಹಿತಿ ನೀಡಿದರು.‘ಪ್ರತಿಷ್ಠಾನವನ್ನು 1947ರಲ್ಲಿ ಸ್ಥಾಪಿಸ ಲಾಯಿತು. ಯಾವುದೇ ಫಲಾಪೇಕ್ಷೆ ಇಲ್ಲದೇ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಪ್ರತಿಷ್ಠಾನ, ಮಹಾರಾಷ್ಟ್ರ ಹಲವಾರು ನಗರಗಳಲ್ಲಿ ಹಾಗೂ ಕರ್ನಾಟಕದ ಗದಗ ಮತ್ತು ಹುಬ್ಬಳ್ಳಿ ನಗರಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿದೆ’ ಎಂದರು.

‘ಪ್ರತಿಷ್ಠಾನದ ಬಗ್ಗೆ ಪ್ರಚಾರ ಮಾಡುವುದಿಲ್ಲ. ಆದರೆ, ಅಭಿಯಾನ ನಡೆಯುವ ಪಟ್ಟಣ ಅಥವಾ ನಗರದಲ್ಲಿ ಪ್ರತಿಷ್ಠಾನದ ಸ್ವಯಂ ಸೇವಕರು ಮನೆ ಮನೆಗೆ ತೆರಳಿ ಸ್ವಚ್ಛತೆಯ ಮಹತ್ವ ಕುರಿತಂತೆ ಜನರಿಗೆ ತಿಳಿವಳಿಕೆ ನೀಡುವ ಕಾರ್ಯ ಮಾಡುವರು’ ಎಂದರು.‘ಸ್ವಚ್ಛತಾ ಕಾರ್ಯಕ್ಕೆ ಬೇಕಾಗುವ ಸಲಕರಣೆಗಳನ್ನು ಪ್ರತಿಷ್ಠಾನವೇ ಒದಗಿಸು ವುದು. ಕಸ ವಿಲೇವಾರಿಗಾಗಿ ಅಗತ್ಯ ವಿರುವ ವಾಹನಗಳನ್ನು ಸಹ ತರಲಾ ಗುತ್ತದೆ. ಈ ಕಾರ್ಯದಲ್ಲಿ ಸ್ಥಳೀಯ ನೆರವು ಪಡೆಯಲಾಗುತ್ತದೆ’ ಎಂದು ಪ್ರತಿಷ್ಠಾನದ ಪದಾಧಿಕಾರಿಗಳು ವಿವರಿಸಿದರು.

‘ಪ್ರತಿಷ್ಠಾನದ ಕಾರ್ಯವನ್ನು ಮೆಚ್ಚಿ ಸಮಾಜದ ವಿವಿಧ ಸ್ತರಗಳ ಜನರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ವೈದ್ಯರು, ಉದ್ಯಮಿಗಳು, ವಕೀಲರು, ಶಿಕ್ಷಕರು ಪ್ರತಿಷ್ಠಾನದ ಸದಸ್ಯರಾಗಿದ್ದಾರೆ. ಯಾವುದೇ ಊರಿನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡೂ ಪ್ರತಿಷ್ಠಾನದ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಬರುತ್ತಾರೆ’ ಎಂದು ಹೇಳಲು ಅವರು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT