ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಸ್ವಾರ್ಥ ಸೇವೆ ಸದಾ ಸ್ಮರಣೀಯ’

Last Updated 25 ಏಪ್ರಿಲ್ 2017, 5:12 IST
ಅಕ್ಷರ ಗಾತ್ರ

ಬಸವನ ಬಾಗೇವಾಡಿ:  ‘ಮಾಮಲೇದಾರರಾಗಿದ್ದ ರಾವ್‌ ಸಾಹೇಬ್‌ ಮಲ್ಲಪ್ಪ ಸಿಂಹಾಸನ ಅವರ ನಿಸ್ವಾರ್ಥ ಸೇವೆ ಸ್ಮರಣೀಯ’ ಎಂದು ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಹಮ್ಮಿ ಕೊಂಡಿದ್ದ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ ರಾವ್‌ಸಾಹೇಬ್‌ ಮಲ್ಲಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಫ.ಗು.ಹಳಕಟ್ಟಿ ಅವರು ಬಸವಾದಿ ಶರಣರ ವಚನಗಳನ್ನು ಸಂರಕ್ಷಣೆ ಮಾಡುವ ಮೂಲಕ  ಜಂಗಮ ಸೇವೆಯ  ಶ್ರೇಷ್ಠತೆಯನ್ನು ಪಡೆದರೆ ಮಲ್ಲಪ್ಪ ಸಿಂಹಾಸನ ಅವರು ಹಾಳು ಕೊಂಪೆ ಯಾಗಿದ್ದ ಐತಿಹಾಸಿಕ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸ್ಥಾವರ ಸೇವೆ ಮಾಡಿ ಶ್ರೇಷ್ಠತೆ ಪಡೆದಿದ್ದಾರೆ’ ಎಂದು ಬಣ್ಣಿಸಿದರು.
‘ನಾಡಿನ ವಿವಿಧ ಭಾಗಗಳ ಜನರನ್ನು ಸಂಪರ್ಕಿಸಿ ಅವರಿಂದ ಧನ ಸಹಾಯ ಪಡೆದು ಇಲ್ಲಿಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಅಲ್ಲದೇ ದೇವಾಲಯದ ಅಭಿವೃದ್ಧಿಗಾಗಿ ಸಂಸ್ಥೆ ಯನ್ನು ಹುಟ್ಟುಹಾಕಿದ್ದಾರೆ’ ಎಂದರು.

‘ಮಲ್ಲಪ್ಪ ಸಿಂಹಾಸನ ಅವರು ಬಸವಣ್ಣನವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸೇವಾ ಗುಣಗಳನ್ನು ರೂಢಿಸಿಕೊಂಡಿದ್ದ ಅವರು ಸಮಾಜಕ್ಕಾಗಿ ತಮ್ಮದೇ ಸೇವೆ ಸಲ್ಲಿಸಿದ್ದಾರೆ.  ಶರಣರು ತಿಳಿಸಿಕೊಟ್ಟಿರುವ ಮಾನವೀಯ ಗುಣಗಳನ್ನು ಪ್ರತಿ ಯೊಬ್ಬರೂ ಬೆಳೆಸಿಕೊಳ್ಳಬೇಕು. ಸಮಾಜ ಕ್ಕಾಗಿ ಒಂದಷ್ಟು ಸಮಯವನ್ನು ಮೀಸಲಿ ಡುವ ಗುಣಗಳನ್ನು ಅಳವಡಿಸಿ ಕೊಳ್ಳಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ತಹಶೀಲ್ದಾರ್ ಆರ್‌.ಎಸ್‌.ಹಿರೇಮಠ,  ಮಹನೀಯರ  ಪುತ್ಥಳಿಗೆ ಪೂಜೆ  ಸಲ್ಲಿಸಿ ದರೆ ಸಾಲದು ಅವರ ಜೀವನ ಆದರ್ಶ ಗಳನ್ನು ತಿಳಿದುಕೊಂಡಾಗ ಮಾತ್ರ ಸಮಾಜ ಸೇವೆಯಲ್ಲಿ ತೊಡಗಿ ಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.

‘ಮಂಡಳಿಗೆ ₹ 6.94 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಮಾಹಿತಿ ಕೇಂದ್ರ ಹಾಗೂ ಕಲ್ಯಾಣ ಮಂಟಪ ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದರು.
ಡಾ.ಪಿ.ವಿ.ಪಟ್ಟಣ, ಎಸ್‌.ಎಸ್‌. ಝಳಕಿ, ಸಾನಿಧ್ಯ ವಹಿಸಿದ್ದ ಬಸವಶ್ರೀ ಸ್ವಾಮೀಜಿ ಮಾತನಾಡಿದರು. ವೈ.ಎನ್‌.ಮಿಣಜಗಿ ಸ್ವಾಗತಿಸಿದರು. ಮಹಾಂತೇಶ ಸಂಗಮ ನಿರೂಪಿಸಿದರು. ಎಸ್‌.ಕೆ.ಸೋಮನಕಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT