ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್ ನಿಗ್ರಹ ಕಾರ್ಯತಂತ್ರ ಪರಿಷ್ಕರಿಸಲು ಸಿದ್ಧ: ರಾಜನಾಥ್ ಸಿಂಗ್

Last Updated 25 ಏಪ್ರಿಲ್ 2017, 9:25 IST
ಅಕ್ಷರ ಗಾತ್ರ

ನವದೆಹಲಿ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕಾಲಾಪತ್ಥರ್‌ನಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ನಕ್ಸಲರು ನಡೆಸಿರುವ ದಾಳಿಯನ್ನು ಭೀಕರ ಹತ್ಯಾಕಾಂಡ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ‘ಈ ದಾಳಿ ಹತಾಶೆಯಿಂದ ಎಸಗಿರುವ ಕೃತ್ಯ. ಇದನ್ನೊಂದು ಸವಾಲಾಗಿ ನಾವು ಸ್ವೀಕರಿಸಿದ್ದೇವೆ. ಅಗತ್ಯ ಬಿದ್ದಲ್ಲಿ ನಕ್ಸಲ್ ನಿಗ್ರಹ ಕಾರ್ಯತಂತ್ರವನ್ನು ಪರಾಮರ್ಶೆ ನಡೆಸಿ ಪರಿಷ್ಕರಿಸಲು ಸಿದ್ಧರಿದ್ದೇವೆ’ ಎಂದಿದ್ದಾರೆ.

ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೂ ಅವರು ಭೇಟಿ ನೀಡಿದ್ದಾರೆ.

ನಕ್ಸಲ್‌ ಉಗ್ರವಾದದಿಂದ ಅತಿ ಹೆಚ್ಚು ಹಾನಿಗೊಳಗಾಗಿರುವ ಕಾಲಾಪತ್ಥರ್‌ನಲ್ಲಿ ಸೋಮವಾರ ಮಧ್ಯಾಹ್ನ ನಕ್ಸಲರು ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹೊಂಚು ದಾಳಿ ನಡೆಸಿದ್ದರು. ದಾಳಿ ನಡೆಸಿದ್ದ ನಕ್ಸಲರ ತಂಡದಲ್ಲಿ ಸುಮಾರು 300 ಜನ ಇದ್ದಿರಬಹುದೆಂದು ಗಾಯಾಳು ಯೋಧ ಶೇರ್ ಮೊಹಮ್ಮದ್ ತಿಳಿಸಿದ್ದಾರೆ.

ದಟ್ಟಾರಣ್ಯದಿಂದ ಕೂಡಿರುವ ಸುಕ್ಮಾ ನಕ್ಸಲರ ಪ್ರಮುಖ ಅಡಗುದಾಣವಾಗಿದೆ. ಅರಣ್ಯಪ್ರದೇಶದ ನೆರವು ಪಡೆದುಕೊಂಡು ಅವರು ಭದ್ರತಾ ಸಿಬ್ಬಂದಿ ವಿರುದ್ಧ ಸಮರಸಾರುತ್ತಾರೆ. ಅಭಿವೃದ್ಧಿಯನ್ನು ತಡೆಯಲು ಆದಿವಾಸಿ ಜನರನ್ನು ನಕ್ಸಲರು ಗುರಾಣಿಯಂತೆ ಬಳಸಿಕೊಳ್ಳುತ್ತಾರೆ ಎಂದು ಗೃಸಚಿವರು ಹೇಳಿದ್ದಾರೆ.

ಪೂರ್ವ ಭಾರತದಲ್ಲಿ 1967ರಿಂದ ಹೆಚ್ಚುತ್ತಾ ಬಂದಿರುವ ನಕ್ಸಲ್ ಹಾವಳಿಯಿಂದ ಇದುವರೆಗೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT