ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಸಂಸ್ಥಾಪನಾ ದಿನಾಚರಣೆ: ಮಿಲಿಟರಿ ಶಕ್ತಿ ಅನಾವರಣ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸೋಲ್: 85ನೇ ಸೇನಾ ಸಂಸ್ಥಾಪನಾ ದಿನದ ಅಂಗವಾಗಿ ಉತ್ತರ ಕೊರಿಯಾ ತನ್ನ ಬೃಹತ್ ಮಿಲಿಟರಿ ಶಕ್ತಿಯನ್ನು ಅನಾವರಣಗೊಳಿಸುವುದರ ಜತೆಗೆ ಭಾರಿ ಕಸರತ್ತು ಪ್ರದರ್ಶಿಸಿತು.

ಅಣ್ವಸ್ತ್ರ ಹಾಗೂ ಕ್ಷಿಪಣಿ ಪರೀಕ್ಷೆ ಕಾರ್ಯಕ್ರಮ ಕುರಿತ ಉದ್ವಿಗ್ನತೆ ನಡುವೆಯೇ ವೊನ್ಸನ್‌ ನಗರದ ಸಮೀಪ  ಉತ್ತರ ಕೊರಿಯಾ ಸೇನೆಯು ಕಸರತ್ತು  ನಡೆಸಿದೆ  ಎಂದು ದಕ್ಷಿಣ ಕೊರಿಯಾ ಸೇನೆ ಹೇಳಿದೆ.

ಕೊರಿಯಾ  ಪರ್ಯಾಯದ್ವೀಪದ ಪಶ್ಚಿಮಕ್ಕಿರುವ ಹಳದಿ ಸಮುದ್ರದಲ್ಲಿ ಅಮೆರಿಕ ಹಾಗೂ ದಕ್ಷಿಣ ಕೊರಿಯಾಗಳು ಜಂಟಿ ಸಮರಾಭ್ಯಾಸ ನಡೆಸುತ್ತಿರುವ ನಡುವೆಯೇ ಕಾಕತಾಳೀಯ ಎಂಬಂತೆ ಉತ್ತರ ಕೊರಿಯಾ ಸೇನಾ ಬಲ ಪ್ರದರ್ಶಿಸಿದೆ. ಈ ನಡುವೆ ಅಮೆರಿಕದ ಅತ್ಯಂತ ಶಕ್ತಿಶಾಲಿ ಜಲಾಂತರ್ಗಾಮಿ ನೌಕೆ ಯುಎಸ್‌ಎಸ್‌ ಮಿಚಿಗನ್, ಮಂಗಳವಾರ ದಕ್ಷಿಣ ಕೊರಿಯಾಗೆ ಬಂದಿದೆ.

ಪ್ರಚೋದನಕಾರಿ ಕಾರ್ಯಕ್ರಮಗಳನ್ನು ಹತ್ತಿಕ್ಕಲು ಉತ್ತರ ಕೊರಿಯಾ ಮೇಲೆ ಅಮೆರಿಕ ದಾಳಿ ನಡೆಸಲಿದೆ ಎಂಬ ಆತಂಕದ ಕಾರಣ, ಕೊರಿಯಾ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ ಎಂದು ಯೊನ್‌ಹಾಪ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಮೆರಿಕದ ವಿಮಾನವಾಹಕ ನೌಕೆ ‘ಕಾರ್ಲ್ ವಿನ್ಸನ್’, ಇದೇ ವಾರ ಕೊರಿಯಾ ಕರಾವಳಿಗೆ ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ. 
ಸಂಸ್ಥಾಪಕ ಎರಡನೇ ಕಿಮ್ ಸಂಗ್ ಅವರ ಜನ್ಮದಿನದ ನಿಮಿತ್ತ ಉತ್ತರ ಕೊರಿಯಾ ಇತ್ತೀಚೆಗಷ್ಟೇ ಬೃಹತ್ ಸೇನಾ ಪ್ರದರ್ಶನ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT