ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಸ್ಕ್ವಾಷ್‌: ಕಣದಲ್ಲಿ ಸೌರವ್, ಜೋಷ್ನಾ, ದೀಪಿಕಾ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ : ಭಾರತದ ಸೌರವ್‌ ಘೋಷಾಲ್‌, ಜೋಷ್ನಾ ಚಿಣ್ಣಪ್ಪ ಹಾಗೂ ದೀಪಿಕಾ ಪಳ್ಳಿಕಲ್‌ ಬುಧವಾರದಿಂದ ಇಲ್ಲಿ ಆರಂಭವಾಗಲಿರುವ 19ನೇ ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಸೌರವ್‌ ಹಾಗೂ ಜೋಷ್ನಾ ಕ್ರಮ ವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದಾರೆ.
ತವರಿನಲ್ಲಿ ನಡೆಯುವ ಟೂರ್ನಿ ಯಲ್ಲಿ ಭಾರತದ ಸ್ಪರ್ಧಿಗಳು ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಸ್ಥಳೀಯ ಆಟ ಗಾರ ವೆಲಾವನ್ ಸೆಂಥಿಲ್‌ ಕುಮಾರ್‌ ಕೂಡ ಇಲ್ಲಿ ಸ್ಪರ್ಧಿಸಲಿದ್ದಾರೆ.

ವೀಸಾ ಸಮಸ್ಯೆಯಿಂದಾಗಿ ಪಾಕಿ ಸ್ತಾನ ತಂಡದ ಆಟಗಾರರು ಈ ಟೂರ್ನಿ ಯಲ್ಲಿ ಭಾಗವಹಿಸುತ್ತಿಲ್ಲ. ಆದರೆ ಹಾಂಕಾಂಗ್‌ನ ಆಗ್ರಗಣ್ಯ ಆಟಗಾರರಾದ ಮ್ಯಾಕ್ಸ್‌ ಲೀ, ಅನ್ನಿ ಅವರು ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗ ಗಳಲ್ಲಿ ಅಗ್ರ ಶ್ರೇಯಾಂಕದೊಂದಿಗೆ ಕಣಕ್ಕಿಳಿಯಲಿದ್ದಾರೆ.

‘ಭಾರತದ ಸ್ಪರ್ಧಿಗಳು ಟೂರ್ನಿಯ ಸಿದ್ಧತೆಗಾಗಿ ಎರಡು ವಾರದಿಂದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ತವರಿನಲ್ಲಿ ಆಡುವುದರಿಂದ ನಮ್ಮ ಆಟಗಾರರಿಗೆ ಹೆಚ್ಚು ಪದಕಗಳನ್ನು ಜಯಿಸುವ ಅವ ಕಾಶ ಇದೆ.’ ಎಂದು   ಕೋಚ್  ಅರ್ಶಫ್‌ ಎಲ್ ಕರಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT