ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ರಕ್ಷಣಾತ್ಮಕ ನೀತಿ: ಟೀಕೆ

Last Updated 25 ಏಪ್ರಿಲ್ 2017, 19:40 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕ ಸೇರಿದಂತೆ ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳು ಈಗ ಹೊಸದಾಗಿ ಪ್ರತಿಪಾದಿಸುತ್ತಿರುವ ರಕ್ಷಣಾತ್ಮಕ ನೀತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಉರ್ಜಿತ್‌ ಪಟೇಲ್‌  ಟೀಕಿಸಿದ್ದಾರೆ.

‘ಮುಕ್ತ ವ್ಯಾಪಾರ ಮತ್ತು ವಾಣಿಜ್ಯ ನೀತಿಯ ಪ್ರಯೋಜನವನ್ನು ಇಡೀ ವಿಶ್ವ ಪಡೆಯುತ್ತಿರುವಾಗ ವಾಣಿಜ್ಯ, ವ್ಯಾಪಾರದಂತಹ ವಿಷಯಗಳನ್ನು  ರಕ್ಷಣಾತ್ಮಕ ವಿಷಯಕ್ಕೆ ಬಳಸಿದರೆ  ಪ್ರಗತಿಯ ಮೇಲೆ ದುಪ್ಪರಿಣಾಮವಾಗಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ವಿಶ್ವದ ಇತರ ರಾಷ್ಟ್ರಗಳ ಉದ್ಯೋಗಿಗಳು ಇಲ್ಲದಿದ್ದರೆ ಅಮೆರಿಕದ ಆ್ಯಪಲ್‌, ಸಿಸ್ಕೊ, ಐಬಿಎಂನಂತಹ ಸಾಫ್ಟವೇರ್‌ ದೈತ್ಯ ಸಂಸ್ಥೆಗಳು ಮತ್ತು ಉದ್ದಿಮೆಗಳ ಸ್ಥಿತಿ ಇಂದು ಏನಾಗುತ್ತಿತ್ತು’ ಎಂದು  ಪಟೇಲ್‌ ಪ್ರಶ್ನಿಸಿದ್ದಾರೆ.

‘ಭಾರತದ ಕರೆನ್ಸಿಯ (ರೂಪಾಯಿ) ಮೌಲ್ಯವನ್ನು ಮಾರುಕಟ್ಟೆ ನಿರ್ಧರಿಸಲಿದೆ.  ರೂಪಾಯಿ ಮೌಲ್ಯದ ತೀವ್ರ ಏರಿಳಿತ ತಡೆಯುವುದು ಮಾತ್ರ ಆರ್‌ಬಿಐ ಕೆಲಸ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT