ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತವರ ಕತೆ ಹೇಳುವ ಲೆಗಾಸಿ

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಜೀವನದಲ್ಲಿ ಆಗುವ ಬಹುದೊಡ್ಡ ನೋವೆಂದರೆ ಪ್ರೀತಿಪಾತ್ರರ ಸಾವು. ಯಾರನ್ನಾದರೂ ಶಾಶ್ವತವಾಗಿ ಅಗಲುವುದು ಎಂದಿಗೂ ಮರೆಯಲಾಗದ ದುಃಖ. ಅವರು ಹೋದ ನಂತರ ಉಳಿಯುವುದು ಅವರ ನೆನಪುಗಳಷ್ಟೆ. 
 
ಈ ನೆನಪುಗಳನ್ನು ಶಾಶ್ವತವಾಗಿಡಲು ಹಲವರು, ಸತ್ತವರು ಬಳಸುತ್ತಿದ್ದ ಎಷ್ಟೋ ವಸ್ತುಗಳನ್ನು ತಮ್ಮ ಬಳಿ ನೆನಪಿಗಾಗಿ ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರು ಅವರ ಸ್ಮರಣಾರ್ಥ ಸಮಾಧಿ ಕಟ್ಟಿಸುತ್ತಾರೆ. ಮತ್ತೂ ಕೆಲವರು ಸಮಾಧಿ ಮೇಲೆ, ಅವರನ್ನು ಕಳೆದುಕೊಂಡ ದಿನ, ಅವರ ಬಗ್ಗೆ ಹೆಚ್ಚು ನೆನಪಾಗುವ ಒಂದೆರಡು ಸಂಗತಿಗಳನ್ನು ಬರೆಸುತ್ತಾರೆ.  

ಆದರೆ ಈ ಡಿಜಿಟಲ್ ಕಾಲದಲ್ಲಿ,  ಸತ್ತವರ ನೆನಪನ್ನೂ ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿಡುವ ಭಿನ್ನ ಪ್ರಯತ್ನವೊಂದು ನಡೆದಿರುವುದು ಮ್ಯಾಡಿಸನ್‌ನಲ್ಲಿ.
 
2016ರಲ್ಲಿ ಮ್ಯಾಡಿಸನ್‌ನ  ವಿಸ್ಕನ್ಸಿನ್‌ ವಿಶ್ವವಿದ್ಯಾಲಯದ ಅಮಾನಂದ ಎಸ್, ಜೆನಿಫರ್ ಸಿ, ಮರಿನ್ ಎಚ್, ಎಜೆಸಿ ಎಂಬುವರು, ಸಮಾಧಿ ಬಳಿ ಇಡುವ ಈ  ಈ ಡಿಜಿಟಲ್ ಮಾದರಿಯ ಸ್ಮಾರ್ಟ್‌ ಸ್ಟ್ಯಾಂಡ್‌ ವಿನ್ಯಾಸಗೊಳಿಸಿದ್ದಾರೆ. ಅದರ ಹೆಸರು ‘ಲೆಗಾಸಿ’.
 
ಈ 3ಡಿ ಪ್ರಿಂಟೆಡ್ ಸ್ಮಾರ್ಟ್ ಸ್ಟ್ಯಾಂಡ್ ಲೆಗಾಸಿಗೆ ಎನ್‌ಎಫ್‌ಸಿ ಸಂವಹನ ಟ್ಯಾಗ್ ಅಳವಡಿಸಲಾಗಿರುತ್ತದೆ. ಇದರಲ್ಲಿ ಕ್ಯೂ ಆರ್‌ಕೋಡ್ ಇದ್ದು, ಸ್ಕ್ಯಾನ್ ಮಾಡುತ್ತಿದ್ದಂತೆ, ಈ ಟ್ಯಾಗ್ ಮೂಲಕ ಸತ್ತವರ ಮಾಹಿತಿಯುಳ್ಳ ಜಾಲತಾಣಕ್ಕೆ ನೇರಸಂಪರ್ಕ ಹೊಂದಬಹುದು.

ಅದರಲ್ಲಿ ಅವರ ಸಂಪೂರ್ಣ ಪರಿಚಯ, ಅವರು ಬದುಕಿದ ರೀತಿ, ಅವರೊಂದಿಗಿನ ಸುಮಧುರ ಕ್ಷಣಗಳನ್ನು ನೆನಪಿಸುವ ಛಾಯಾಚಿತ್ರಗಳು, ವಿಡಿಯೊ ಎಲ್ಲವನ್ನೂ ನೋಡಬಹುದಂತೆ.
 
ಪ್ರೀತಿಪಾತ್ರರ ನೆನಪನ್ನು ಶಾಶ್ವತವಾಗಿಡಲು, ಅವರ ಜೀವನ ಕತೆಯನ್ನು, ಅವರೆಡೆಗಿನ ಪ್ರೀತಿಯನ್ನು, ಒಟ್ಟಾರೆ ಅವರ ನೆನಪುಗಳನ್ನು ಡಿಜಿಟಲ್ ರೂಪದಲ್ಲಿ ಹಂಚಿಕೊಳ್ಳುವುದೇ ‘ಲೆಗಾಸಿ’ ಮುಖ್ಯ ಉದ್ದೇಶ ಎಂದು ಹೇಳಿಕೊಂಡಿದೆ ಈ ತಂಡ.

ಈ ಲೆಗಾಸಿಯನ್ನು ದೀರ್ಘಬಾಳಿಕೆ  ಬರುವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಬಳಸಿರುವ ಟ್ಯಾಗ್ ಅನ್ನು 1,00,000 ಬಾರಿ ಸ್ಕ್ಯಾನ್ ಮಾಡಬಹುದು. ಇದಿನ್ನೂ ಪ್ರಾಥಮಿಕ ಹಂತದಲ್ಲಿದ್ದು, ಇನ್ನಷ್ಟು ಪ್ರಯೋಗಗಳ ನಂತರ ಮಾರುಕಟ್ಟೆಗೆ ಲಭ್ಯವಾಗಲಿದೆಯಂತೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT