ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕುಗಳ ದತ್ತು ಕಾರ್ಯಕ್ರಮ

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮನೆಗಳಲ್ಲಿ ಹವ್ಯಾಸವಾಗಿ ಬೆಕ್ಕು ಸಾಕುವವರಿಗೇನೂ ಕಡಿಮೆಯೇನಿಲ್ಲ. ಒಂದೊಮ್ಮೆ ಕಾಯಿಲೆಗೆ ಬಿದ್ದರೆ, ಬೀದಿಗೆ ಬಿಟ್ಟು ಕೈ ತೊಳೆದುಕೊಂಡವರ ಸಂಖ್ಯೆಯೇ ಹೆಚ್ಚು. ಈ ರೀತಿ ಬೀದಿಗೆ ಬಿದ್ದ ಮಾರ್ಜಾಲಗಳಿಗೆ ತಕ್ಕ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿ, ಮತ್ತೆ ಸುರಕ್ಷಿತ ಆಶ್ರಯ ಕಲ್ಪಿಸುವಲ್ಲಿ ನಿರತವಾಗಿದೆ ‘ಬೆಂಗಳೂರು ಕ್ಯಾಟ್ ಸ್ಕ್ಯಾಡ್’ ಎಂಬ ಸ್ವಯಂಸೇವಾ ಸಂಸ್ಥೆ.

ಎರಡು ವರ್ಷಗಳಿಂದ ಈ ಸಂಸ್ಥೆಯು ಅನಾಥ ಬೆಕ್ಕುಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದೆ. ಕಷ್ಟದಲ್ಲಿರುವ ಬೆಕ್ಕುಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸುವುದೇ ಸಂಸ್ಥೆಯ ಮುಖ್ಯ ಉದ್ದೇಶ. ಹೀಗೆ ಸಂಸ್ಥೆಯ ಆರೈಕೆಯಲ್ಲಿ ಗುಣಮುಖಗೊಂಡ ಬೆಕ್ಕುಗಳನ್ನು ಆಸಕ್ತ ಮಾರ್ಜಾಲಪ್ರೇಮಿಗಳಿಗೆ ದತ್ತು ನೀಡುತ್ತಿದೆ.

ಇದಕ್ಕಾಗಿಯೇ ಜಯನಗರ ಹಾಗೂ ಕೋರಮಂಗಲದಲ್ಲಿ ಈ ಹಿಂದೆ ಎರಡು ಶಿಬಿರಗಳನ್ನು ಆಯೋಜಿಸುವ ಮೂಲಕ 15 ಬೆಕ್ಕುಗಳಿಗೆ ಸೂಕ್ತ ಆಶ್ರಯ ಕಲ್ಪಿಸಿದೆ. ನಿರ್ಲಕ್ಷ್ಯದಿಂದ ಯಾವುದೇ ಬೆಕ್ಕುಗಳು ಸಾಯಬಾರದು ಎಂಬ ಉದ್ದೇಶದಿಂದ ಸಂಸ್ಥೆಯು ಚಿಕ್ಕದಾಗಿ ಆಶ್ರಯತಾಣಗಳನ್ನು ನಿರ್ಮಿಸಿದೆ. ಗಾಯಗೊಂಡ ಬೆಕ್ಕುಗಳು ಇಲ್ಲಿಗೆ ಸೇರಿದ ಬಳಿಕ ಸಂಸ್ಥೆಯ ಕಾರ್ಯಕರ್ತರು ಪೂರ್ತಿ ನಿಗಾವಹಿಸಿ, ಮತ್ತೆ ಚೈತನ್ಯ ತುಂಬುವಂತೆ ನೋಡಿಕೊಳ್ಳುತ್ತಾರೆ. ಸಂಪೂರ್ಣವಾಗಿ ಸುಧಾರಿಸಿದ ಬಳಿಕ, ಆಸಕ್ತರಿಗೆ ದತ್ತು ನೀಡುತ್ತಿದೆ.

ಇಂದು ಮೂರನೇ ಕಾರ್ಯಕ್ರಮ: ಸಂಸ್ಥೆಯು ಏಪ್ರಿಲ್ 29 (ಶನಿವಾರ) ಆರೋಗ್ಯವಂತ 15 ಬೆಕ್ಕುಗಳನ್ನು ದತ್ತು ನೀಡಲು ನಿರ್ಧರಿಸಿದೆ.
ಬೆಕ್ಕುಗಳ ಆರೋಗ್ಯ ಹಾಗೂ ಕಾಳಜಿ ಕುರಿತಂತೆ ಮನೆ ಮಂದಿಗೆ ತಿಳಿಸಿಕೊಡಲಾಗುತ್ತದೆ. ಬೆಕ್ಕುಗಳಿಗೆ ಸಂಬಂಧಿಸಿದಂತೆ ಆಸಕ್ತ ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸಿಕೊಡಲಾಗುತ್ತದೆ. ಸಂಪೂರ್ಣ ಉಚಿತ.

ಕಾರ್ಯಕ್ರಮದ ವಿವರ: ಎನಾರುಜುವೇಟ್ ಯೋಗ ಸ್ಟುಡಿಯೊ ಹಾಗೂ ಕೆಫೆ, 32ನೇ ಅಡ್ಡರಸ್ತೆ, 4ನೇ ಟಿ ಬ್ಲಾಕ್ ಪೂರ್ವ, 4ನೇ ಬ್ಲಾಕ್, ಜಯನಗರ. ಸಮಯ: ಮಧ್ಯಾಹ್ನ 2ರಿಂದ ಸಂಜೆ 6.
ಸಂಪರ್ಕ ಸಂಖ್ಯೆ: 99809 10365

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT