ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ ₹100 ಕೋಟಿ ಗಳಿಕೆ ಮಾಡಿದ ಬಾಹುಬಲಿ

Last Updated 29 ಏಪ್ರಿಲ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವದಾದ್ಯಂತ ಸುಮಾರು ಒಂಬತ್ತು ಸಾವಿರ ಪರದೆಗಳಲ್ಲಿ ತೆರೆ ಕಂಡಿರುವ ರಾಜಮೌಳಿ ನಿರ್ದೇಶನದ ‘ಬಾಹುಬಲಿ–2’ ಚಿತ್ರ, ಗಳಿಕೆಯಲ್ಲಿ ಮೊದಲ ದಿನವೇ ಅಂದಾಜು ₹ 110 ಕೋಟಿ ದಾಟುವ ಮೂಲಕ ದೇಶದ ಚಲನಚಿತ್ರರಂಗದ ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ಮುರಿದು ಮುನ್ನುಗ್ಗಿದೆ.

ಇದಕ್ಕೂ ಮುಂಚೆ, ಸಲ್ಮಾನ್ ಖಾನ್ ನಟನೆಯ ‘ಸುಲ್ತಾನ್’ (₹ 36.54) ಮರತ್ತು ಅಮೀರ್ ಖಾನ್ ಅಭಿನಯದ ‘ದಂಗಲ್’ (₹ 29.78) ಚಿತ್ರಗಳು ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿದ್ದವು.

‘ಬಾಹುಬಲಿ–2’ ಕೇವಲ ಗಳಿಕೆಯಲ್ಲಷ್ಟೆ ಅಲ್ಲದೆ, ಬುಕ್ಕಿಂಗ್‌ನಲ್ಲೂ ಹಿಂದಿನ ದಾಖಲೆಗಳನ್ನು ಸರಿಗಟ್ಟಿದೆ. ಕೇವಲ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಚಿತ್ರದ 10 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ!

ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ ನಾಲ್ಕು ಭಾಷೆಗಳಲ್ಲಿ ‘ಬಾಹುಬಲಿ–2’ ಬಿಡುಗಡೆಯಾಗಿದೆ. ಈ ಪೈಕಿ ಹಿಂದಿ ಮಾರುಕಟ್ಟೆಯೊಂದರಲ್ಲೇ ಚಿತ್ರ ಅಂದಾಜು ₹ 35 ಕೋಟಿ ಗಳಿಕೆ ಕಂಡಿದೆ.

ಉಳಿದಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ₹ 45 ಕೋಟಿ, ತಮಿಳುನಾಡು ₹ 14 ಕೋಟಿ, ಕರ್ನಾಟಕ ₹ 10 ಕೋಟಿ ಹಾಗೂ  ಕೇರಳದಲ್ಲಿ 4 ಕೋಟಿ ಬಾಚಿದೆ’ ಎಂದು ‘ಬಾಕ್ಸ್ ಆಫೀಸ್ ಇಂಡಿಯಾ ಡಾಟ್ ಕಾಂ’ ವೆಬ್‌ಸೈಟ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT