ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 431.09 ಕೋಟಿ ಮೊತ್ತದ ಬಜೆಟ್

ಜಿಲ್ಲಾ ಪಂಚಾಯಿತಿಯ 2017–18ನೇ ಸಾಲಿನ ಆಯವ್ಯಯ
Last Updated 5 ಮೇ 2017, 8:36 IST
ಅಕ್ಷರ ಗಾತ್ರ

ಚಾಮರಾಜನಗರ: 2017–18ನೇ ಸಾಲಿನ ಜಿಲ್ಲೆಯ ವಿವಿಧ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೇರಿದಂತೆ ಒಟ್ಟು ₹ *31.90ಕೋಟಿ ಮೊತ್ತದ ಬಜೆಟ್‌ಅನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಮಂಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ *0 ಪುಟಗಳ ಬಜೆಟ್‌ ಪುಸ್ತಕವನ್ನು ಒಂದೂವರೆ ಗಂಟೆ ಓದಿದ ಎಂ.ರಾಮಚಂದ್ರ ಅವರು, ಜಿಲ್ಲಾ ಪಂಚಾ ಯಿತಿಗೆ ಲಭಿಸಿರುವ ಒಟ್ಟು ಅನುದಾನದಲ್ಲಿ ₹ 228.*2 ಕೋಟಿ ಮೊತ್ತವನ್ನು ವೇತನಕ್ಕೆ ಹಾಗೂ ₹ 202.67ಕೋಟಿ ಮೊತ್ತವನ್ನು ವೇತನೇತರ ವೆಚ್ಚಕ್ಕೆ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣ ರಸ್ತೆ, ಕುಡಿಯುವ ನೀರು, ತೋಟಗಾರಿಕೆ, ಸೇರಿದಂತೆ ಇತರೆ ವಲಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಸದಸ್ಯರು ಬಜೆಟ್‌ಗೆ ಅನುಮೋದನೆ ನೀಡಿದರು.

ಶಿಕ್ಷಣ: ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸ ಬೇಕು ಎಂಬ ಗುರಿಯಿರಿಸಿಕೊಂಡು ಶಿಕ್ಷಣ ಇಲಾಖೆಗೆ ₹ 51.06ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 98,336 ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಸೌಕರ್ಯ ಒದಗಿಸಲು ₹ 29.*0ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ:  ಜಿಲ್ಲೆಯಲ್ಲಿ 51,755 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ವಲಯ ಯೋಜನೆಯಗಳಾದ ವಿಶೇಷ ಹನಿ ನೀರಾವರಿ, ತಾಳೆ ಎಣ್ಣೆ ವ್ಯವಸಾಯ, ತೋಟಗಾರಿಕೆ ಕ್ಷೇತ್ರಗಳ ನಿರ್ವಹಣೆ, ತೆಂಗು ಬೀಜ ಸಂಗ್ರಹಣೆ ಮತ್ತು ನರ್ಸರಿ ನಿರ್ವ ಹಣೆ, ತೋಟಗಾರಿಕಾ ಕಟ್ಟಡಗಳು ಪ್ರಚಾರ ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೆ ಒಟ್ಟಾರೆ ₹ 282.56 ಲಕ್ಷಗಳ ಆಯವ್ಯ ನಿಗದಿಯಾಗಿದ್ದು, ಅನುಮೋದನೆ ಪಡೆದು ಅನುಷ್ಠಾನ ಗೊಳಿಸಲಾಗುವುದು ಎಂದು ತಿಳಿಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ₹ *57.37 ಲಕ್ಷ ಗುರಿ ನಿಗದಿ ಪಡಿಸಲಾಗಿದೆ ಎಂದರು.

ರಸ್ತೆ ಮತ್ತು ಸೇತುವೆಗಳು:  ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಪ್ರಸಕ್ತ ಸಾಲಿಗೆ ನಿಗದಿಪಡಿಸಲಾದ ₹ 220ಲಕ್ಷಗಳಲ್ಲಿ ಶೇ 70ರಷ್ಟು ಅನುದಾನದಡಿ ಡಾಂಬರೀ ಕರಣಗೊಂಡಿರುವ ರಸ್ತೆಗಳ ನಿರ್ವಹಣೆಗಾಗಿ, ಶೇ 20ರಷ್ಟು ಅನುದಾನದಡಿ ಜಲ್ಲಿ ರಸ್ತೆಗಳ ನಿರ್ವಹಣೆಗೆ ಹಾಗೂ ಶೇ 10ರಷ್ಟು ಅನುದಾನದಡಿ ಮಣ್ಣಿನ ರಸ್ತೆಗಳ ನಿರ್ವಹಣೆಗಾಗಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆ: ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 3 ಸಾರ್ವಜನಿಕ ಆಸ್ಪತ್ರೆ, 3 ಸಮುದಾಯ ಆರೋಗ್ಯ ಕೇಂದ್ರಗಳು, 60 ಪ್ರಾಥ ಮಿಕ ಆರೋಗ್ಯ ಕೇಂದ್ರಗಳು, 2 ಸಂಚಾರಿ ಆರೋಗ್ಯ ಕೇಂದ್ರ ಗಳು, ಒಂದು ಸಂಚಾರಿ ಆರೋಗ್ಯ ಘಟಕ ಹಾಗೂ 255 ಉಪ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.


ಪ್ರಸಕ್ತ ಸಾಲಿನಲ್ಲಿ ಯೋಜನೆ ಹಾಗೂ ಯೋಜನೇತರಡಿ ವೇತನ ಹಾಗೂ ವೇತನೇತರ ಬಾಬ್ತುಗಳು ₹ 2,990 ಲಕ್ಷ ನಿಗದಿಪಡಿಸಲಾಗಿದೆ. ಲಸಿಕಾ ಕಾರ್ಯಕ್ರಮ, ತಾಯಿ ಮತ್ತು ಮಕ್ಕಳ ಆರೋಗ್ಯ, ಸಾಂಕ್ರಮಿಕ ರೋಗಗಳ ನಿಯಂತ್ರಣ ಹಾಗೂ ಎಲ್ಲ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.

ವೈದ್ಯಕೀಯ ಮತ್ತು ಜನಾರೋಗ್ಯ ಕಾರ್ಯಕ್ರಮಗಳಿಗೆ ₹ 1,660.79 ಲಕ್ಷ ಹಾಗೂ ಕುಟುಂಬ ಕಲ್ಯಾಣ ಕಾರ್ಯ ಕ್ರಮಗಳಿಗೆ ₹ 839.50ಲಕ್ಷ ಅನುದಾನ ನಿಗದಿಪಡಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆ: ಸಮಾಜ ಕಲ್ಯಾಣ ಇಲಾಖೆಗೆ ₹ 3,718.9* ಲಕ್ಷ ನಿಗದಿಯಾಗಿದ್ದು, ಈ ಪೈಕಿ ಜಿಲ್ಲಾ ಪಂಚಾ ಯಿತಿ ಕಾರ್ಯಕ್ರಮಕ್ಕಾಗಿ 1,356.9* ಲಕ್ಷ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮಕ್ಕಾಗಿ ₹ 2,362ಲಕ್ಷ ನಿಗದಿಪಡಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್. ಬಸವ ರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಡಾ.ಕೆ. ಹರೀಶ್‌ಕುಮಾರ್‌ ಹಾಜರಿದ್ದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಆದ್ಯತೆ
ಚಾಮರಾಜನಗರ:
ಜಿಲ್ಲಾ ಪಂಚಾಯಿತಿ ಬಜೆಟ್‌ನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಮಂಜೂರಾತಿ ದೊರೆತಿದ್ದು, ಜುಲೈ ಒಳಗೆ ಯೋಜನೆ ಪೂರ್ಣಗೊಳಿಸಿ 297 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ 2 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಪಿಎಸ್‌ಆರ್‌ ತಯಾರಿಸಿ ಅನು ಮೋದನೆಗಾಗಿ ₹ *0ಕೋಟಿ ಅಂದಾಜು ಮೊತ್ತ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ತಿಳಿಸಿದರು.

ಎಸ್‌ಸಿಪಿ ಮತ್ತು ಟಿಎಸ್‌ಪಿ ಜನವಸತಿಗಳಿಗೆ ಕ್ರಿಯಾಯೋಜನೆ ಯನ್ನು ಪ್ರತ್ಯೇಕವಾಗಿ ರೂಪಿಸಲಾಗು ತ್ತಿದೆ. 2017–18ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ (ಎಸ್‌ಡಿಪಿ) ಅತ್ಯಂತ ಹಿಂದುಳಿದ ಚಾಮರಾಜನಗರ ತಾಲ್ಲೂಕಿಗೆ ₹ 2.39ಕೋಟಿ, ಗುಂಡ್ಲುಪೇಟೆ ತಾಲ್ಲೂಕಿಗೆ ₹ 2.06ಕೋಟಿ ಮತ್ತು ಕೊಳ್ಳೇಗಾಲ ತಾಲ್ಲೂಕಿಗೆ ₹ 2.17ಕೋಟಿ ಒಟ್ಟು ಜಿಲ್ಲಾ ವ್ಯಾಪ್ತಿ ₹ 6.62ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ.

ಜಿಲ್ಲೆಗೆ 2 ಸೋಲಾರ್‌ ಹ್ಯಾಂಡ್‌ ಪಂಪ್‌ಗಳನ್ನು ₹ 16ಲಕ್ಷ ಅಂದಾಜು ವೆಚ್ಚದಲ್ಲಿ ಅಳವಡಿಸಲು ಕ್ರಿಯಾ ಯೋಜನೆ ಮಂಜೂರಾಗಿದ್ದು, ಕಾಮಗಾರಿ ಕೈಗೊಳ್ಳಲು ಕ್ರಮವಹಿಸಲಾಗಿದೆ.

ರೇಷ್ಮೆ ಇಲಾಖೆ: ಜಿಲ್ಲೆಯಲ್ಲಿ 1,103.97ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪು ನೇರಳೆ ವ್ಯವಸಾಯವನ್ನು ಕೈಗೊಳ್ಳಲಾಗಿದೆ. ಒಟ್ಟು 1,876 ಜನ ರೇಷ್ಮೆ ಬೆಳೆಯುತ್ತಿದ್ದಾರೆ. ಈ ಪೈಕಿ ಪರಿಶಿಷ್ಟ ಜಾತಿ 199, ಪರಿಶಿಷ್ಟ ಪಂಗಡ 29, ಅಲ್ಪ ಸಂಖ್ಯಾತರು 19 ಹಾಗೂ ಇತರೆ ವರ್ಗದ 1,629 ಮಂದಿ ರೇಷ್ಮ ಬೆಳೆಯುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿ ಕಾರ್ಯ ಕ್ರಮಕ್ಕೆ ₹ *87.61 ಲಕ್ಷ ಹಂಚಿಕೆ ಮಾಡಲಾಗಿದೆ. ಇದರಲ್ಲಿ ರೇಷ್ಮೆ ಬೆಳೆಗಾರರ ಸಹಾಯಧನ ನೀಡಲು ₹ 25ಲಕ್ಷ ಹಾಗೂ ವೇತನ, ಇತರೆ ವೆಚ್ಚಾಕ್ಕಾಗಿ ₹ *62.61ಲಕ್ಷಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ಹೆಚ್ಚಿನ ಆದ್ಯತೆ ಪಡೆದ ಕ್ಷೇತ್ರಗಳು
ಚಾಮರಾಜನಗರ
: 2017–18ನೇ ಸಾಲಿನ ಜಿಲ್ಲಾ ಪಂಚಾ ಯಿತಿ ಕಾರ್ಯ ಕ್ರಮಗಳ ಅನುಷ್ಠಾನಕ್ಕಾಗಿ ಗುರುವಾರ ಮಂಡಿಸಿರುವ ಬಜೆಟ್‌ನ ಒಟ್ಟು ಅನುದಾನ ₹ *31.90 ಕೋಟಿ. ಈ ಪೈಕಿ ಜಿಲ್ಲಾ ಪಂಚಾಯಿತಿ ಕಾರ್ಯಕ್ರಮಗಳಿಗೆ ₹ 1**.75 ಕೋಟಿ, ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮ ಗಳಿಗೆ ₹ 272.12 ಕೋಟಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಕ್ರಮಗಳಿಗೆ ₹ 1*.22 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.
*ಸಾರ್ವಜನಿಕ ಶಿಕ್ಷಣ ಇಲಾಖೆ: ₹ 22,390ಲಕ್ಷ
*ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ: ₹ 3,*6* ಲಕ್ಷ
*ಪೌಷ್ಠಿಕ ಆಹಾರ: ₹ 2,288ಲಕ್ಷ
*ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ: ₹ 2,266.69 ಲಕ್ಷ
*ಆರೋಗ್ಯ: ₹ 1,789 ಲಕ್ಷ
*ಪರಿಶಿಷ್ಟ ಜಾತಿ: ₹ 1,*53.09ಲಕ್ಷ
*ಹಿಂದುಳಿದ ವರ್ಗ: ₹ 1,269.88ಲಕ್ಷ
*ಪಶುಸಂಗೋಪನೆ: ₹ 8**.73ಲಕ್ಷ
*ಕೃಷಿ ಇಲಾಖೆ: ₹ 300.91ಲಕ್ಷ
*ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮ: ₹ 63.27 ಲಕ್ಷ
*ಜಲಾನಯನ ಇಲಾಖೆ: ₹ 73.*9ಲಕ್ಷ
*ಸಣ್ಣ ನೀರಾವರಿ: ₹ 6*.92ಲಕ್ಷ
*ಮೀನುಗಾರಿಕೆ: ₹ 5*.2ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT