ಸಿನಿ ಟ್ರೇಲರ್‌

ಝಗಮಗಿಸುತ್ತಿರುವ ‘ಟ್ಯೂಬ್‌ಲೈಟ್‌’

ಅಂದಹಾಗೆ, ನಾವು ಮಾತನಾಡುತ್ತಿರುವುದು ‘ಟ್ಯೂಬ್‌ಲೈಟ್‌’ ಸಿನಿಮಾದ ಟ್ರೇಲರ್ ಬಗ್ಗೆ. ಮೇ 4ರಂದು ಟ್ರೇಲರ್ ಯುಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ಸುಮಾರು 60 ಲಕ್ಷ ಮಂದಿ ನೋಡಿದ್ದಾರೆ.

ಝಗಮಗಿಸುತ್ತಿರುವ ‘ಟ್ಯೂಬ್‌ಲೈಟ್‌’

ಎರಡು ನಿಮಿಷ ಏಳು ಸೆಕೆಂಡ್‌ನ ಟ್ರೇಲರ್‌, ಒಮ್ಮೆ ಯುದ್ಧದ ಭೀಕರತೆ ತೋರಿದರೆ ಮತ್ತೊಮ್ಮೆ ಮುಗ್ಧತೆ ತುಂಬಿದ ಹಳ್ಳಿಯ ದರ್ಶನ ಮಾಡಿಸುತ್ತದೆ. ಚಳಿಯಲ್ಲಿ ಗಡಿ ಕಾಯುವ ಯೋಧರ ಮಧ್ಯೆ ಪೆದ್ದ ಮಗುವಿನಂತೆ ಸಲ್ಮಾನ್‌ಖಾನ್‌ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ನಾವು ಮಾತನಾಡುತ್ತಿರುವುದು ‘ಟ್ಯೂಬ್‌ಲೈಟ್‌’ ಸಿನಿಮಾದ ಟ್ರೇಲರ್ ಬಗ್ಗೆ. ಮೇ 4ರಂದು ಟ್ರೇಲರ್ ಯುಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ಸುಮಾರು 60 ಲಕ್ಷ ಮಂದಿ ನೋಡಿದ್ದಾರೆ.


ಯೋಧನ ಪಾತ್ರದಲ್ಲಿ ಸೊಹೈಲ್ ಖಾನ್ ಕಾಣಿಸಿಕೊಂಡಿದ್ದಾರೆ. ಅಣ್ಣನನ್ನು ಕಾಡುವ ತುಂಟ, ಪೆದ್ದು ತಮ್ಮನಾಗಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್ ಮುಗ್ಧತೆ ಗಮನ ಸೆಳೆಯುತ್ತದೆ. ನಿರ್ದೇಶನದ ಕಸುಬು ಕಬೀರ್‌ ಖಾನ್‌ಗೆ ದಕ್ಕಿದೆ ಎಂಬುದಕ್ಕೆ ಟ್ರೇಲರ್‌ನಲ್ಲಿ ಹಲವು ಸಾಕ್ಷಿಗಳಿವೆ.

ಇಂಗ್ಲಿಷ್‌ ಸಿನಿಮಾ ‘ಲಿಟ್ಲ್‌ ಬಾಯ್’ ಕಥೆಯಿಂದ ಸ್ಫೂರ್ತಿ ಪಡೆದು ‘ಟ್ಯೂಬ್‌ಲೈಟ್‌’ ಸಿನಿಮಾದ ಚಿತ್ರಕಥೆ ಬರೆದಿರುವುದಾಗಿ ನಿರ್ದೇಶಕ ಕಬೀರ್‌ ಹೇಳಿಕೊಂಡಿದ್ದಾರೆ. ಚೀನಾದ ಗಾಯಕಿ ಮತ್ತು ನಟಿ ಜೂಜೂ ಈ ಸಿನಿಮಾದ ನಾಯಕಿ. ಸಿನಿಮಾ ಜೂನ್ 23ರಂದು ಬಿಡುಗಡೆಯಾಗಲಿದೆ.

‘ಟ್ಯೂಬ್‌ಲೈಟ್‌’ ಟ್ರೇಲರ್ ಟ್ವೀಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ‘ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ನಟಿ ಅತಿಯಾ ಶೆಟ್ಟಿ ಟ್ವೀಟ್ ಮಾಡಿದ್ದಾರೆ. 

ವಿಡಿಯೊ ನೋಡಲು ಲಿಂಕ್‌: bit.ly/2p9HXrQ

Comments
ಈ ವಿಭಾಗದಿಂದ ಇನ್ನಷ್ಟು
ಹಾವೇ ನಮ್ಮ ಹೈಫ್ಯಾಷನ್ನು

‘ಸ್ನೇಕ್ ಇನ್‌ಸ್ಪೈರ್ಡ್’
ಹಾವೇ ನಮ್ಮ ಹೈಫ್ಯಾಷನ್ನು

27 Jul, 2017
ಶ್ವಾನಪ್ರೀತಿ ಅಂದರೆ ಇದೇನಾ?

ಗುಲ್‌ಮೊಹರ್
ಶ್ವಾನಪ್ರೀತಿ ಅಂದರೆ ಇದೇನಾ?

27 Jul, 2017
ಡಯಟ್‌ಗೆ ಫ್ರೆಂಚ್‌ ಫ್ರೈಸ್‌ ತ್ಯಾಗ

ಸ್ಟಾರ್‌ ಡಯಟ್‌
ಡಯಟ್‌ಗೆ ಫ್ರೆಂಚ್‌ ಫ್ರೈಸ್‌ ತ್ಯಾಗ

26 Jul, 2017
‘ನೋವೇ ನನ್ನ ಮುಲಾಮು’

ಯುಟ್ಯೋಬ್ ತಾರೆ
‘ನೋವೇ ನನ್ನ ಮುಲಾಮು’

26 Jul, 2017
ಟಾಯ್ಲೆಟ್‌ ಪೇಪರ್‌ ಸೌಂದರ್ಯ ಸ್ಪರ್ಧೆ

ಆಚ್ಚರಿ
ಟಾಯ್ಲೆಟ್‌ ಪೇಪರ್‌ ಸೌಂದರ್ಯ ಸ್ಪರ್ಧೆ

26 Jul, 2017