ತಿಳುವಳಿಕೆ

ಪ್ರಜಾವಾಣಿ ಕ್ವಿಜ್‌

ಹಿಂದೂಧರ್ಮದಲ್ಲಿನ ದುರಾಚಾರಗಳನ್ನು ನಿಗ್ರಹಿಸುವ ಸಲುವಾಗಿ 1815ರಲ್ಲಿ ಆತ್ಮೀಯಸಭೆಯನ್ನು ಸ್ಥಾಪಿಸಲಾಯಿತು. ಇದರ ಸ್ಥಾಪಕರು ಯಾರು?...

1) ಹಿಂದೂಧರ್ಮದಲ್ಲಿನ ದುರಾಚಾರಗಳನ್ನು ನಿಗ್ರಹಿಸುವ ಸಲುವಾಗಿ 1815ರಲ್ಲಿ ಆತ್ಮೀಯಸಭೆಯನ್ನು ಸ್ಥಾಪಿಸಲಾಯಿತು. ಇದರ ಸ್ಥಾಪಕರು ಯಾರು?
a)  ರಾಧಕಾಂತ್ ದೇವ್ 
b) ರಾಜಾರಾಂ ಮೋಹನ್ ರಾಯ್
c) ಶಿವನಾರಾಯಣ್ ಆಗ್ನಿ ಹೋತ್ರಿ  
d) ಎಚ್.ಎನ್. ಕುಂಜ್ರು

2)  ಮುಸ್ಲಿಮರಿಗೆ ಸ್ವಸ್ಥಳವನ್ನು ರೂಪಿಸುವ ಸಲುವಾಗಿ 1840ರಲ್ಲಿ ಪಂಜಾಬಿನಲ್ಲಿ ಸಹಾಬಿ ಚಳವಳಿಯನ್ನು ಹುಟ್ಟುಹಾಕಲಾಯಿತು. ಇದರ    ನೇತಾರರು ಯಾರು?              
a) ಷಾವಲ್ಲಿ ವುಲ್ಲಾ    b) ಮೊಹಮ್ಮದ್ ಖಾಸಿಂ                   
c) ಮೌಲಾನಾ ವೆಬ್ಲಿ   d) ಮಿರ್ಜಾ ಗುಲಾಂ

3) ಅಂತರರಾಷ್ಟ್ರೀಯ ಮ್ಯಾಕ್ ರೇಖೆಯು ಯಾವ ದೇಶಗಳನ್ನು ಪ್ರತ್ಯೇಕಿಸುವ ರೇಖೆಯಾಗಿದೆ?
a) ಭಾರತ-ಪಾಕಿಸ್ತಾನ 
b) ಪಾಕಿಸ್ತಾನ-ಬಾಂಗ್ಲಾದೇಶ
c) ಭಾರತ-ಶ್ರೀಲಂಕಾ
d) ಭಾರತ-ಆಫ್ಘಾನಿಸ್ತಾನ

4) ಭೌಗೋಳಿಕವಾಗಿ ಭಾರತದ ಉಪಖಂಡವನ್ನು ಏಷ್ಯಾದ ದಕ್ಷಿಣ ಭಾಗದಿಂದ ಪ್ರತ್ಯೇಕಿಸುವ ಪ್ರಾಕೃತಿಕ ಪರ್ವತ ಯಾವುದು?
a) ಜಸ್ಕಾರ್ ಪರ್ವತಗಳು 
b) ನೀಲಗಿರಿ ಪರ್ವತಗಳು
c) ಹಿಮಾಲಯ ಪರ್ವತಗಳು
d) ಲಡಾಖ್ ಪರ್ವತಗಳು

5) ಕರ್ಪೂರತೈಲವನ್ನು ಈ ಕೆಳಕಂಡ ಯಾವ ಗಿಡದಿಂದ ತಯಾರು ಮಾಡುತ್ತಾರೆ?
a) ಪೈನ್                 b) ಭತ್ತ
c) ರೆಯಾನ್ ಗಿಡ     d) ರಬ್ಬರ್ ಗಿಡ  

6) ಸುಣ್ಣದಕಲ್ಲು, ಮರಳು ಮತ್ತು ಸೋಡಾ ಎಂಬ ರಸಾಯನಿಕವನ್ನು ಬೆರೆಸಿ ಯಾವ ವಸ್ತುವನ್ನು ತಯಾರಿಸುತ್ತಾರೆ?
a) ಸೀಸದ ಕಡ್ಡಿ       b) ಗಾಜು
c) ಕಾಗದ              d) ಫ್ಲೇವುಡ್

7) ಅಕ್ಬರ್ ಕಾಲದಲ್ಲಿದ್ದ  ಹನುಮಾನ್ ಚಾಲೀಸ್ ಹಿಂದೂ ಕವಿ ಯಾರು?
a) ರಾಮದಾಸ್     b) ಶಂಕರ ದಾಸ್
c)  ತುಳಸಿದಾಸ್    d) ಮೇಲಿನ ಯಾರು ಅಲ್ಲ

8) ಪಶ್ಚಿಮ ಬಂಗಾಳದವರಾದ ‘ಇವರಿಗೆ’ ದೇಶಬಂಧು’ ಎಂಬ ಆತ್ಮೀಯ ಬಿರುದು ಇತ್ತು. ಇವರು ಯಾರು?
a) ಬಂಕಿಮ ಚಂದ್ರ ಚಟರ್ಜಿ 
b) ವಿನೋಬಾ ಭಾವೆ    c) ಅರವಿಂದ್ ಘೋಷ್ 
d) ಚಿತ್ತರಂಜನ್ ದಾಸ್

9) ಮಹಾತ್ಮ ಗಾಂಧೀಜಿ ಅವರನ್ನು ಸೆರೆ ಮನೆಯಲ್ಲಿ ಇಟ್ಟಾಗ ‘ಭಾರತ ಬಿಟ್ಟು ತೊಲಗಿ’ ಚಳವಳಿಯ ನಾಯಕತ್ವ ವಹಿಸಿದ್ದವರು ಯಾರು?
a) ಅರುಣಾ ಅಸಫ್ ಆಲಿ 
b) ಗುರು ಅರ್ಜುನ್ ದೇವ     c) ಬಾಬಾ ಆಮ್ಟೆ
d) ದಯಾನಂದ ಸರಸ್ವತಿ

10) ಈ ಕೆಳಗಿನ ಕೃತಿಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆ ಅಲ್ಲ?
a)ಸಂಸ್ಕಾರ-ಯು.ಆರ್. ಅನಂತಮೂರ್ತಿ
b) ಸಂಕ್ರಾಂತಿ - ಗಿರೀಶ್ ಕಾರ್ನಾಡ   
c) ವಂಶವೃಕ್ಷ - ಎಸ್.ಎಲ್. ಭೈರಪ್ಪ  
d) ಕುಸುಮ ಬಾಲೆ - ದೇವನೂರು ಮಹಾದೇವ

ಉತ್ತರಗಳು 1-b, 2-a, 3-d, 4-c, 5-a, 6-b, 7- c, 8-d, 9-a, 10-b.

Comments
ಈ ವಿಭಾಗದಿಂದ ಇನ್ನಷ್ಟು
ಕೋರ್ಸ್‌ಗಳನ್ನು ಆಯ್ಕೆ  ಮಾಡುವಾಗ ಎಚ್ಚರವಿರಲಿ

ಕರಾವಳಿ
ಕೋರ್ಸ್‌ಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ

24 Apr, 2018
ಪ್ರಜಾವಾಣಿ ಕ್ವಿಜ್ 18

ಪ್ರಜಾವಾಣಿ ಕ್ವಿಜ್ 18
ಪ್ರಜಾವಾಣಿ ಕ್ವಿಜ್ 18

23 Apr, 2018
‘ಸಿಐಡಿ–ಸಿಬಿಐ ವಿಭಾ‌ಗಗಳಲ್ಲಿ ಕೆಲಸ ಮಾಡಲು ನನಗಿಷ್ಟ’

ನಿಮ್ಮ ಪ್ರಶ್ನೆ ನಮ್ಮ ಉತ್ತರ
‘ಸಿಐಡಿ–ಸಿಬಿಐ ವಿಭಾ‌ಗಗಳಲ್ಲಿ ಕೆಲಸ ಮಾಡಲು ನನಗಿಷ್ಟ’

23 Apr, 2018
ಪ್ರಜಾವಾಣಿ ಕ್ವಿಜ್ 17

ಶಿಕ್ಷಣ
ಪ್ರಜಾವಾಣಿ ಕ್ವಿಜ್ 17

16 Apr, 2018
ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

ಶಿಕ್ಷಣ
ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

16 Apr, 2018