ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ನಳಿನಿ’ ಚಿತ್ರದ ಮೂಲಕ ರವಿಂದ್ರನಾಥ ಠಾಗೋರ್‌ ಅವರ ಪ್ರೇಮಕಥೆ: ಪ್ರಿಯಾಂಕ ಚೋಪ್ರಾ

1800ರ ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ
Last Updated 10 ಮೇ 2017, 10:47 IST
ಅಕ್ಷರ ಗಾತ್ರ

ಮುಂಬೈ: ನಟಿ–ನಿರ್ಮಾಪಕಿ ಪ್ರಿಯಾಂಕ ಚೋಪ್ರಾ ರವಿಂದ್ರನಾಥ ಠಾಗೋರ್‌ ಅವರ ಪ್ರೇಮಕಥೆ ಆಧಾರಿತ ಸಿನಿಮಾ ನಿರ್ಮಿಸುತ್ತಿದ್ದಾರೆ.

ಇದು 1800ರ ಭಾರತ ಸ್ವಾತಂತ್ರ್ಯ ಸಂಗ್ರಾಮದ  ಸಂದರ್ಭದಲ್ಲಿ ನಡೆಯುವ ಪ್ರೇಮ ಕಥೆ. ರವೀಂದ್ರನಾಥ ಠಾಗೋರ್‌ ಮತ್ತು ಅವರ ಮೊದಲ ಪ್ರೇಯಸಿ ಮಹಾರಾಷ್ಟ್ರದ ಅನ್ನಪೂರ್ಣ ತರ್ಖುದ್‌ ನಡುವಿನ ಪ್ರೇಮಕಥೆಯನ್ನು ಆಧರಿಸಿ ಸಿನಿಮಾ ಸಿದ್ಧಗೊಳ್ಳಲಿದೆ.

ಉಜ್ವಲ್ ಚಟರ್ಜಿ ನಿರ್ದೇಶಿಸಲಿರುವ ಈ ಚಿತ್ರವನ್ನು ಪ್ರಿಯಾಂಕ ತಮ್ಮ ಪಿಪಿಪಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.

ಕಳೆದ ವರ್ಷ ಪ್ರಿಯಾಂಕ ಮತ್ತು ಮಧು ಚೋಪ್ರಾ ಸಹಭಾಗಿತ್ವದಲ್ಲಿ ಬಂ ಬಂ ಬೊಲ್ ರಹಾ ಹೈ ಕಾಶಿ (ಭೋಜಪುರಿ),ವೆಂಟಿಲೇಟರ್ (ಮರಾಠಿ) ,ಮತ್ತು ಸರ್ವನ್( ಪಂಜಾಬಿ) ಚಿತ್ರಗಳನ್ನು ನಿರ್ಮಿಸಿದ್ದರು.  ಅದರಲ್ಲಿ ವೆಂಟಿಲೇಟರ್  ಚಿತ್ರಕ್ಕೆ  ಉತ್ತಮ ನಿರ್ದೇಶನ ಒಳಗೊಂಡಂತೆ 3 ರಾಷ್ಟ್ರೀಯ  ಪ್ರಶಸ್ತಿಗಳು ದೊರಕಿದ್ದವು.

ಪಿಂಕ್ ಪಬ್ಬಲ್ ಪಿಕ್ಚರ್  ಯಾವಾಗಲೂ ಪ್ರಾದೇಶಿಕ ಚಿತ್ರಗಳನ್ನು ಉತ್ತೇಜಿಸುತ್ತದೆ. ಪ್ರಿಯಾಂಕಾಗೆ  ಸಾಮಾಜಿಕ ಸಂದೇಶವಿರುವ ಉತ್ತಮ ಕಥೆ ಹೊಂದಿರುವ ಚಿತ್ರಗಳನ್ನು ನಿರ್ಮಿಸಲು ಇಷ್ಟ  ಆ ದೃಷ್ಠಿಯಲ್ಲಿ  ‘ನಳಿನಿ ’ ಒಂದು ಅದ್ಭುತ ಕಥಾಹಂದರವಿರುವ ಚಿತ್ರವಾಗಿದೆ ಎಂದು ಮಧು ಛೋಪ್ರಾ  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT