ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡ ಹೆಂಡತಿ ನಡುವೆ ಕಾರು ಬಡವಾಯ್ತು

Last Updated 10 ಮೇ 2017, 19:30 IST
ಅಕ್ಷರ ಗಾತ್ರ

ಗಂಡ ಹೆಂಡತಿ ನಡುವೆ ಜಗಳ ಸಹಜ. ಅದು ಉಂಡು ಮಲಗುವ ತನಕ ಎನ್ನುವ ಗಾದೆಯೂ ರೂಢಿಗತವೇ. ಆದರೆ ಇವರ ಜಗಳ ಮಾತ್ರ ಬೇರೆಯದ್ದೇ ರೂಪ ಪಡೆದಿತ್ತು. ಹೆಂಡತಿಯು, ಹೆಸರಿನ ಮುಂದಿನ ಗಂಡನ ಹೆಸರನ್ನು ತೆಗೆದುಹಾಕಿ ಬ್ರ್ಯಾಂಡ್‌ ಒಂದರ ಹೆಸರನ್ನು ಉಪನಾಮವಾಗಿಟ್ಟುಕೊಂಡಿದ್ದೇ ಇದಕ್ಕೆ ಕಾರಣವಾಯ್ತು.

ಹೆಂಡತಿ ತನ್ನ ಉಪನಾಮ ಬದಲಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಕೋಪಗೊಂಡ ಈತ ಮಾಡಿದ್ದೇನು ಗೊತ್ತೆ? ಆಕೆ ಅತಿ ಪ್ರೀತಿಯಿಂದ ಇಟ್ಟುಕೊಂಡಿದ್ದ ಕಾರಿನೊಳಗೆ ಕಾಂಕ್ರೀಟ್ ಮಿಕ್ಸ್‌ ತುಂಬಿಸಿಬಿಟ್ಟಿದ್ದು.

ರಷ್ಯಾದ ಪಿಟ್ಸ್‌ಬರ್ಗ್‌ನಲ್ಲಿ ಸೂಪರ್‌ ಮಾರ್ಕೆಟ್‌ ಕಂಪೆನಿಯೊಂದು, ಗ್ರಾಹಕರು ಹೆಸರಿನ ಜೊತೆ ತಮ್ಮ ಬ್ರ್ಯಾಂಡ್‌ ಹೆಸರನ್ನು ಕಾನೂನಾತ್ಮಕವಾಗಿ ಸೇರಿಸಿಕೊಂಡರೆ, ತಿಂಗಳಿಗೆ ₹50,000 ಹಣ ಕೊಡುವುದಾಗಿ ಹೇಳಿಕೆ ನೀಡಿತ್ತು. ಇದನ್ನು ಕೇಳಿಯೇ ಆಕೆ ತನ್ನ ಉಪಹೆಸರನ್ನು ಬದಲಿಸಿಕೊಂಡಿದ್ದಳು.

ಇದೇ ಕಾರಣಕ್ಕೆ ಆಕೆಗೆ ಬೈಯಲಾಗದೇ ಆಕೆಯ ಕಾರಿನ ಮೇಲೆ ಕೋಪ ತೋರಿಸಿದ್ದಾನೆ ಪತಿ. ಕಾರಿನ ಪಕ್ಕವೇ ನಿಂತಿದ್ದ ಕಾಂಕ್ರೀಟ್ ಮಿಕ್ಸಿಂಗ್ ಲಾರಿಯಿಂದ ಇಡೀ ಕಾರಿಗೆ ಕಾಂಕ್ರೀಟ್‌ ತುಂಬಿಸಿದ್ದಾನೆ. ಕಾರು ಕಾಂಕ್ರೀಟ್‌ ಮಿಕ್ಸಿಂಗ್‌ನಿಂದ ತುಂಬಿ ತುಳುಕಿತ್ತು.

ಶಾಪಿಂಗ್‌ನಿಂದ ಹಿಂದಿರುಗಿದ ಪತ್ನಿ ಅದನ್ನು ನೋಡಿ ಹೌಹಾರಿ ಗಂಡನ ಮೇಲಿನ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿಕೊಂಡು ಮನೆ ಕಡೆ ಹೊರಟಿದ್ದೂ ಆಯಿತು. ಕೊನೆಗೆ ‘ಹೆಂಡತಿಗೆ ಈ ಕಾರಿನ ಮೇಲೆ ಅತಿಯಾದ ಪ್ರೀತಿ ಇತ್ತು. ಅದಕ್ಕೇ ಹೀಗೆ ಮಾಡಿದೆ’ ಎಂದೂ ತಪ್ಪೊಪ್ಪಿಕೊಂಡ ಈ ಪತಿರಾಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT